ಬೆಂಗಳೂರು: ಇದು ತಿರುಚಿದ ವಿಡಿಯೋ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ (Ramachandra Rao) ಹೇಳಿದ್ದಾರೆ.
ಮಹಿಳೆಯರ ಜೊತೆಗಿನ ರಾಸಲೀಲೆ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅವರು ಇಂದು ಗೃಹ ಸಚಿವ ಪರಮೇಶ್ವರ್ (Parameshwar) ಅವರ ಭೇಟಿಗೆ ಆಗಮಿಸಿದರು. ಈ ವೇಳೆ ಅವರು ಮಾಧ್ಯಮಗಳ ಜೊತೆ ಮಾತನಾಡಿ ಇದು ಸುಳ್ಳು ವಿಡಿಯೋ ಎಂದರು.
ಇದು ತಿರುಚಿತ ವಿಡಿಯೋ ಆಗಿದ್ದು, ಈ ರೀತಿಯ ಯಾವುದೇ ಘಟನೆ ನಡೆದಿಲ್ಲ. ಇದರ ಬಗ್ಗೆ ವಕೀಲರ ಜೊತೆ ಮಾತನಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ರಾಮಚಂದ್ರ ರಾವ್ ರಾಸಲೀಲೆ ಕೇಸ್ – ಗೃಹ ಇಲಾಖೆಗೆ ವರದಿ ನೀಡಲು ಸಿಎಂ ಸೂಚನೆ
ವಿಡಿಯೋ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಲು ರಾಮಚಂದ್ರ ರಾವ್ ಇಂದು ಪರಮೇಶ್ವರ್ ಕಚೇರಿಗೆ ಆಗಮಿಸಿದ್ದರು. ಮನೆ ಒಳಗೆ ರಾಮಚಂದ್ರ ರಾವ್ ಹೋಗುವ ಮುನ್ನವೇ ಪರಮೇಶ್ವರ್ ಅವರು ಭೇಟಿಗೆ ನಿರಾಕರಿಸಿದರು. ಸಿಬ್ಬಂದಿ ಮೂಲಕ ಭೇಟಿ ಆಗುವುದಿಲ್ಲ ಎಂದು ಪರಮೇಶ್ವರ್ ತಿಳಿಸಿದ್ದರು. ಹೀಗಾಗಿ 5 ನಿಮಿಷದಲ್ಲೇ ರಾಮಚಂದ್ರ ರಾವ್ ಪರಮೇಶ್ವರ್ ಕಚೇರಿಯಿಂದ ತೆರಳಿದರು. ಇದನ್ನೂ ಓದಿ: ಕಚೇರಿಯಲ್ಲೇ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ – ವಿಡಿಯೋ ವೈರಲ್

