ನವದೆಹಲಿ: ಏವಿಯೇಷನ್ ರೆಗ್ಯುಲೇಟರ್ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಸ್ಪೈಸ್‌ಜೆಟ್ ಪೈಲಟ್‌ನ ಪರವಾನಗಿಯನ್ನು 6 ತಿಂಗಳ ಕಾಲ ಅಮಾನತುಗೊಳಿಸಿರುವುದಾಗಿ ತಿಳಿಸಿದೆ.
ಮುಂಬೈನಿಂದ ದುರ್ಗಾಪುರಕ್ಕೆ ತೆರಳುವ ಏರ್‌ಲೈನ್ಸ್ ವಿಮಾನವು ಕಳೆದ ಮೇ ತಿಂಗಳಲ್ಲಿ ತೀವ್ರ ಪ್ರಕ್ಷುಬ್ಧತೆ ಎದುರಿಸಿ ಹಲವು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿತ್ತು. ಈ ಘಟನೆಯನ್ನಾಧರಿಸಿ ಡಿಜಿಸಿಎ, ಲೈಸನ್ಸ್ ಅಮಾನತು ಮಾಡಿದೆ. ಇದನ್ನೂ ಓದಿ: ಸ್ಪೈಸ್‍ಜೆಟ್‍ನಲ್ಲಿ ಮುಂದುವರಿದ ತಾಂತ್ರಿಕ ದೋಷ: ಕಾಂಡ್ಲಾದಿಂದ ಬಂದ ವಿಮಾನ ಮುಂಬೈನಲ್ಲಿ ತುರ್ತು ಭೂಸ್ಪರ್ಶ
Advertisement
Advertisement
ಕಳೆದ ಮೇ 1 ರಂದು ನಡೆದ ಘಟನೆಯಲ್ಲಿ 14 ಪ್ರಯಾಣಿಕರು ಮತ್ತು 3 ಕ್ಯಾಬಿನ್ ಸಿಬ್ಬಂದಿ ಗಾಯಗೊಂಡಿದ್ದರು. ಇದರೊಂದಿಗೆ ವಿವಿಧ ನಿಯಮ ಉಲ್ಲಂಘನೆಯ ಕಾರಣಗಳಿಂದಾಗಿ ಪೈಲಟ್‌ನ ಪರವಾನಗಿಯನ್ನು 6 ತಿಂಗಳ ಕಾಲ ಅಮಾನತುಗೊಳಿಸಿದೆ ಎಂದು ಡಿಜಿಸಿಎ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
Advertisement
Advertisement
ಅಲ್ಲದೇ ಹವಾಮಾನ ಪರಿಸ್ಥಿತಿಯನ್ನು ಪೈಲಟ್ ಉತ್ತಮ ರೀತಿಯಲ್ಲಿ ನಿಭಾಯಿಸಬಹುದಿತ್ತು ಎಂದು ಹೇಳಿದ್ದಾರೆ. ಆದರೆ ಸ್ಪೈಸ್‌ಜೆಟ್ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ವಿಮಾನಗಳಲ್ಲಿ ತಾಂತ್ರಿಕ ದೋಷ – ಸ್ಪೈಸ್‌ಜೆಟ್‌ಗೆ ಶೋಕಾಸ್ ನೋಟಿಸ್
ಇದು ಗಂಭೀರ ಘಟನೆಯಾಗಿರುವುದರಿಂದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಈ ಕುರಿತು ತನಿಖೆ ನಡೆಸುತ್ತಿದೆ. ಘಟನೆ ನಡೆದಾಗ ವಿಮಾನದಲ್ಲಿ 2 ಪೈಲಟ್‌ಗಳು ಮತ್ತು 4 ಕ್ಯಾಬಿನ್ ಸಿಬ್ಬಂದಿ ಸೇರಿ 195 ಮಂದಿ ಇದ್ದರು. ಅವರಲ್ಲಿ 14 ಪ್ರಯಾಣಿಕರು ಮತ್ತು 3 ಕ್ಯಾಬಿನ್ ಸಿಬ್ಬಂದಿಗೆ ತಲೆಯ ಭಾಗ, ಬೆನ್ನುಮೂಳೆ, ಭುಜ, ಹಣೆ ಮತ್ತು ಮುಖದ ಭಾಗಕ್ಕೆ ತೀವ್ರ ಪೆಟ್ಟಾಗಿದೆ ಎಂದು ಡಿಜಿಸಿಎ ತಿಳಿಸಿದೆ.
ಇತ್ತೀಚೆಗೆ ಹಲವು ಸ್ಪೈಸ್‌ಜೆಟ್ ವಿಮಾನಗಳು ತಾಂತ್ರಿಕ ಸಮಸ್ಯೆ ಎದುರಿಸುತ್ತಿವೆ. ಅದಕ್ಕಾಗಿ ಗರಿಷ್ಠ 8 ವಾರಗಳ ವರೆಗೆ ತನ್ನ ಶೇ.50 ರಷ್ಟು ವಿಮಾನಗಳನ್ನು ಮಾತ್ರ ನಿರ್ವಹಿಸುವಂತೆ ಡಿಜಿಸಿಎ ಏರ್‌ಲೈನ್‌ಗೆ ಆದೇಶಿಸಿದೆ.