ಬೆಂಗಳೂರು: ದೇವೇಗೌಡರ ಕುಟುಂಬದಲ್ಲಿ ಉಳಿದವನು ನಿಖಿಲ್ ಅಂತಾ ಅವನನ್ನು ಅರೆಸ್ಟ್ ಮಾಡಲು ಪ್ಲ್ಯಾನ್ ಮಾಡಿದ್ದರು ಎಂದು ಸರ್ಕಾರ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಮನಗರ ಸೊಸೈಟಿ ಚುನಾವಣೆ ಮಾಡದ್ದಕ್ಕೆ ನಿಖಿಲ್ ಹೋಗಿದ್ದರು. ಆತನನ್ನು ಅರೆಸ್ಟ್ ಮಾಡೋಕೆ ರಾತ್ರಿ 12 ಗಂಟೆವರೆಗೂ ಚರ್ಚೆ ಆಗಿದೆ. ಯಾವನೋ ಮಂತ್ರಿ ಹೇಳಿದ ಅಂತಾ ನಿಖಿಲ್ ಅರೆಸ್ಟ್ ಮಾಡಿ ಎ1 ಮಾಡಬೇಕು ಎಂದು ಈ ಡಿಜಿ ಪ್ಲ್ಯಾನ್ ಮಾಡಿದ್ದರು. ಇದಾ ಡಿಜಿ ನಿಮ್ಮ ಕೆಲಸ? ದೇವೇಗೌಡರ ಕುಟುಂಬದಲ್ಲಿ ಉಳಿದವನು ನಿಖಿಲ್ ಅಂತಾ ಅವನನ್ನು ಒಳಗೆ ಹಾಕೋಕೆ ಪ್ಲ್ಯಾನ್ ಮಾಡ್ತೀರಾ ಡಿಜಿ ಅವರೇ ಎಂದು ಕಿಡಿಕಾರಿದರು.
Advertisement
ರಾಜ್ಯದಲ್ಲಿ ಹಲವಾರು ರೀತಿಯ ಸರ್ಕಾರದ ಒಂದಲ್ಲ ಒಂದು ಹಗರಣಗಳು ದೇಶದಾದ್ಯಂತ ಚರ್ಚೆ ಆಗ್ತಿದೆ. ನಾನು ಎರಡು ದಿನ ಆಂಧ್ರ, ತೆಲಂಗಾಣದಲ್ಲಿ ಎರಡು ಪಬ್ಲಿಕ್ ಸೆಕ್ಟರ್ ಯುನಿಟ್‌ಗಳ ಸಮಸ್ಯೆ ಪರಿಹಾರಕ್ಕೆ ಹೋದಾಗ ಈ ಹಗರಣ ಬಗ್ಗೆ ಚರ್ಚೆ ಆಗ್ತಿದೆ. ಕಾಂಗ್ರೆಸ್ ಸರ್ಕಾರ ಆಡಳಿತ ಬಂದಾಗಿನಿಂದ ಯಾವ ರೀತಿ ಪ್ರತಿಕ್ರಿಯೆ ಇದೆ ಅಂತಾ ಎರಡು ರಾಜ್ಯದಲ್ಲಿ ನೋಡಿದೆ. ಎಂಪಿಗಳು, ಶಾಸಕರು ಅಲ್ಲಿನ ಸಮಸ್ಯೆ ಪರಿಹಾರಕ್ಕೆ ಬಂದಾಗ ಕಾಂಗ್ರೆಸ್ ಸರ್ಕಾರದ ಬಗ್ಗೆ ಹೇಳಿದ್ದರು. ಬೇರೆ ರಾಜ್ಯದವರು ನಮ್ಮ ರಾಜ್ಯದ ಬಗ್ಗೆ ಹೇಳಿದಾಗ ನೋವಾಯ್ತು ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
Advertisement
ವಿಪಕ್ಷಗಳು ವಾಲ್ಮೀಕಿ ಹಗರಣ ಮತ್ತು ಮುಡಾ ಹಗರಣದ ಬಗ್ಗೆ ಮಾತಾಡ್ತಾ ಇರೋದು. ವಾಲ್ಮೀಕಿ ನಿಗಮದ ಹಣ ಬೇನಾಮಿ ಅಕೌಂಟ್‌ಗಳಿಗೆ ಹೋಗಿದೆ. ಯಾವ ಸಂದರ್ಭದಲ್ಲಿ ಹೋಯ್ತು ಹಣ? ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಆದ ಮಾರ್ಚ್ ಸಮಯದಲ್ಲಿ 94 ಕೋಟಿ ಹಣವನ್ನು ಯಾವ್ಯಾವುದೋ ಹೆಸರಿನಲ್ಲಿ ಅಕೌಂಟ್ ಓಪನ್ ಮಾಡಿ ಸ್ವೇಚ್ಛಾಚಾರವಾಗಿ ವರ್ಗಾವಣೆ ಮಾಡಿದ್ದಾರೆ. ಅಲ್ಲಿ ಕೆಲಸ ಮಾಡಿದ್ದ ಚಂದ್ರಶೇಖರ ಆತ್ಮಹತ್ಯೆ ಶರಣಾಗದೇ ಹೋಗಿದ್ರೆ, ಡೆತ್‌ನೋಟ್ ಇಲ್ಲದೆ ಹೋಗಿದ್ರೆ ಸಿಎಂ ಅವರೇ ಈ ಕೇಸ್ ಏನ್ ಮಾಡ್ತಿದ್ರಿ ಎಂದು ಪ್ರಶ್ನಿಸಿದರು.