ಬೆಂಗಳೂರು: ಅದು ಅಂತಿಂತ ಸಾಮಾನ್ಯ ಹುದ್ದೆಯಲ್ಲ. ಐಎಎಸ್‍ನಲ್ಲಿ ಮುಖ್ಯ ಕಾರ್ಯದರ್ಶಿ ಹುದ್ದೆ ಹೇಗೋ ಐಪಿಎಸ್‍ನಲ್ಲಿ ಡಿಜಿ ಅಂಡ್ ಐಜಿಪಿ ಹುದ್ದೆಗಿರುವ ಮಹತ್ವ ಅಂತದ್ದು. ಐಪಿಎಸ್ ಆಗುವ ಪ್ರತಿಯೊಬ್ಬ ಅಧಿಕಾರಿಯ ಆಸೆ ಕೂಡ ಪೊಲೀಸ್ ಇಲಾಖೆಯ ಅತ್ಯುನ್ನತ ಹುದ್ದೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಬೇಕು ಎನ್ನುವುದು.
ಡಿಜಿ ಅಂಡ್ ಐಜಿಪಿ ಪೋಸ್ಟ್ ನಲ್ಲಿದ್ದವರ ನಿವೃತ್ತಿಯ ದಿನ ಹೇಗಿರುತ್ತೆ ಗೊತ್ತಾ? ನಿಜಕ್ಕೂ ಇದು ಕುತೂಹಲವೇ ಸರಿ. ನಿವೃತ್ತಿಯ ದಿನದಂದು ಇಡೀ ಐಪಿಎಸ್ ಅಧಿಕಾರಿಗಳು ಡಿಜಿ ಕಚೇರಿಗೆ ಕ್ರಾಸ್ ಬೆಲ್ಟ್‌ನಲ್ಲಿ ಬಂದು ಗೌರವ ಸಲ್ಲಿಸುತ್ತಾರೆ. ಕೆಎಸ್‌ಆರ್‌ಪಿ ವತಿಯಿಂದ ಗಾರ್ಡ್ ಆಫ್ ಹಾನರ್ ಸಲ್ಲಿಸಲಾಗುತ್ತದೆ. ಅಷ್ಟೇ ಅಲ್ಲದೆ ಹಿರಿಯ ಅಧಿಕಾರಿಗಳ ಜೊತೆ ಅವತ್ತು ಟೀ ಕುಡಿಯುತ್ತಾರೆ. ಇದನ್ನೂ ಓದಿ: ಡಿಜಿ-ಐಜಿಪಿ ನೀಲಮಣಿ ಸೇರಿ ಮೂವರು ಐಪಿಎಸ್ ಅಧಿಕಾರಿಗಳು ನಿವೃತ್ತಿ
Advertisement
Advertisement
ಡಿಜಿ ಕಚೇರಿಯನ್ನು ತಳಿರು ತೋರಣಗಳಿಂದ ಅಲಂಕೃತಗೊಳಿಸಿ, ಒಂದು ಜೀಪ್ ಅನ್ನು ಸಹ ಹೂಗಳಿಂದ ಅಲಂಕೃತಗೊಳಿಸುತ್ತಾರೆ. ಆ ಜೀಪ್‍ನ ಮುಂಭಾಗದಲ್ಲಿ ಎರಡೂ ಕಡೆ ಉದ್ದದ ಹಗ್ಗ ಕಟ್ಟುತ್ತಾರೆ. ಸಂಜೆ ವೇಳೆಗೆ ಅಲಂಕೃತ ಜೀಪ್‍ನಲ್ಲಿ ನಿರ್ಗಮಿತ ಡಿಜಿ ಅಂಡ್ ಐಜಿಪಿಯವರನ್ನ ನಿಲ್ಲಿಸಲಾಗುತ್ತದೆ. ಐಪಿಎಸ್ ಅಧಿಕಾರಿ ವರ್ಗ ತೇರು ಎಳೆದಂತೆ ಜೀಪನ್ನು ಎಳೆದುಕೊಂಡು ಹೋಗಿ ಡಿಜಿಯವರನ್ನು ಅವರ ಮನೆಗೆ ಬಿಡುತ್ತಾರೆ. ಇದೊಂಥಾರ ನೋಡಲು ರೋಮಾಂಚಕ ಅನುಭವ ಕೊಡುತ್ತದೆ. ಹೀಗೆ ನಿರ್ಗಮಿತ ಡಿಜಿ ಅಂಡ್ ಐಜಿಪಿಯವರ ಕೊನೆಯ ಸೇವಾ ದಿನವನ್ನ ಅವಿಸ್ಮರಣೀಯವಾಗಿ ನೋಡಿಕೊಳ್ಳಲಾಗುತ್ತದೆ. ಇದನ್ನೂ ಓದಿ: ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಪ್ರವೀಣ್ ಸೂದ್ ನೇಮಕ