Connect with us

Latest

ಅಣ್ಣನಿಲ್ಲದ ರಾತ್ರಿ ಅತ್ತಿಗೆ ಬೆಡ್ ರೂಂಗೆ ಬಂದು ಸೆಕ್ಸ್ ವೀಡಿಯೋ ತೋರಿಸಿ ಐ ಲವ್ ಯೂ ಅಂದ!

Published

on

ಇಂದೋರ್: ಅತ್ತಿಗೆಯ ಮೇಲೆಯೇ ಕಾಮ ದೃಷ್ಟಿ ಹರಿಸಿದ್ದ ಯುವಕನೊಬ್ಬ ಜೈಲು ಸೇರಿದ್ದಾನೆ. ಇಲ್ಲಿನ ಲಸೂಡಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಂತ್ರಸ್ತ ಮಹಿಳೆ ಹೇಳಿದ್ದೇನು?: ನಾನು ಮದುವೆಯಾಗಿ ಬಂದಾಗಿನಿಂದಲೂ ನನ್ನ ಮೈದುನ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದ. ಆಗಾಗ ನನ್ನನ್ನು ಛೇಡಿಸುತ್ತಿದ್ದ. ಆದರೆ ಈತ ಇನ್ನೂ ಮುಗ್ಧ ಎಂದು ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಆದರೆ ಕೆಲದಿನಗಳ ಹಿಂದೆ ಆತ ಮಾಡಬಾರದ ಕೆಲಸ ಮಾಡಿದ. ನನ್ನ ಗಂಡ ಅಂದು ಅಹಮದಾಬಾದ್‍ಗೆ ತೆರಳಿದ್ದರು. ಅಂದು ಮನೆಯಲ್ಲಿ ನಾನು, ಅತ್ತೆ ಹಾಗೂ ಮೈದುನ ಮಾತ್ರ ಇದ್ದೆವು.

ರಾತ್ರಿ 11 ಗಂಟೆಗೆ ನನ್ನ ರೂಮ್ ಬಾಗಿಲು ತಟ್ಟುತ್ತಿರುವ ಸದ್ದು ಕೇಳಿಸಿತು. ಯಾರು ಅಂತಾ ಕೇಳಿದಾಗ, ನಾನು ನಿಮ್ಮ ಮೈದುನ. ನನ್ನ ಮೊಬೈಲ್ ನಿಮ್ಮ ರೂಮಲ್ಲಿದೆ, ಬಾಗಿಲು ತೆಗೆಯಿರಿ ಎಂದು ಹೇಳಿದ್ದಾನೆ. ಹೀಗಾಗಿ ನಾನು ಬಾಗಿಲು ತೆಗೆದೆ. ಬಾಗಿಲು ತೆಗೆಯುತ್ತಿದ್ದಂತೆಯೇ ಬೆಡ್ ರೂಂನೊಳಗೆ ಬಂದ ಮೈದುನ ತನ್ನ ಇನ್ನೊಂದು ಮೊಬೈಲ್ ನಲ್ಲಿ ಅಶ್ಲೀಲ ವೀಡಿಯೋ ತೋರಿಸಲು ಶುರುಮಾಡಿದ. ನಾನು ಅವನತ್ರ ಹೊರಗೆ ಹೋಗು ಎಂದೆ, ಆದರೆ ಆತ ತನ್ನ ವಿಕೃತಿ ಮುಂದುವರಿಸಿದ. ನಾನು ವಿರೋಧ ಮಾಡಿದ್ರೂ ಆತ ನನ್ನನ್ನು ಎಲ್ಲೆಲ್ಲೋ ಟಚ್ ಮಾಡೋಕೆ ಶುರು ಮಾಡಿದ. ನನ್ನ ಹತ್ತಿರ ಬಂದು ಇಲ್ಲಿ ಏನು ನಡೆದರೂ ಯಾರಿಗೂ ಗೊತ್ತಾಗಲ್ಲ. ನನ್ನ ಜೊತೆ ಸಹಕರಿಸು. ನಾನು ನಿನ್ನ ಪ್ರೀತಿಸ್ತೀನಿ ಎಂದ. ಆದರೆ ತಕ್ಷಣ ನಾನು ಕಿರುಚಾಡಲು ಶುರು ಮಾಡಿದೆ. ಇದಕ್ಕೆ ಈ ವಿಷಯ ಯಾರಿಗಾದರೂ ಹೇಳಿದ್ರೆ ಕೊಲೆ ಮಾಡ್ತೀನಿ ಎಂದು ಬೆದರಿಕೆ ಹಾಕಿದ.

ಮರುದಿನ ಬೆಳಗ್ಗೆ ಮತ್ತೆ ಆತ ತನ್ನ ದುಷ್ಕೃತ್ಯ ಮುಂದುವರಿಸಿದ. ಇದನ್ನು ನನ್ನ ಅತ್ತೆಯೂ ನೋಡಿ, ಆತ ಏನ್ಮಾಡ್ತಿದ್ದಾನೆ ಎಂದು ಕೇಳಿದ್ರು. ಇದಕ್ಕೆ ನಾನು ರಾತ್ರಿ ನಡೆದ ಎಲ್ಲಾ ವಿಚಾರಗಳನ್ನು ಅವರಿಗೆ ವಿವರಿಸಿದೆ. ಅದಕ್ಕೆ ನನ್ನ ಅತ್ತೆ, ಗಂಡಸರು ಏನು ಬೇಕಾದ್ರೂ ಮಾಡಬಹುದು ಎಂದು ಹೇಳಿದರು. ಇದಾದ ಬಳಿಕ ನನ್ನ ಮೈದುನನ ಕಾಮುಕತನ ಅತಿಯಾಯಿತು. ನನ್ನ ಪತಿ ವಾಪಸ್ ಬಂದ ಬಳಿಕ ಅತ್ತೆ ಹಾಗೂ ಮೈದುನ ಸೇರಿ ನನ್ನ ವಿರುದ್ಧವೇ ಷಡ್ಯಂತ್ರ ರೂಪಿಸಿದರು. ನಾನು ಅತ್ತಿಗೆಯ ರೂಂಗೆ ಹೋಗಿದ್ದೆ ಎಂದು ನನ್ನ ಮೈದುನನೇ ನನ್ನ ಗಂಡನಿಗೆ ಮೆಸೇಜ್ ಮಾಡಿದ್ದ.

ಕುಟುಂಬದ ಮಾರ್ಯಾದೆಗೆ ಅಂಜಿ ನಾನು ಇದುವರೆಗೆ ಎಲ್ಲವನ್ನೂ ಮುಚ್ಚಿಟ್ಟು ಮೌನವಾಗಿದ್ದೆ. ಆದರೆ ಎಲ್ಲಾ ಸಂಬಂಧ ಮುರಿದು ಹೋಗುತ್ತಿದೆ ಎಂದೆನಿಸಿದಾಗ ನಾನು ಎಲ್ಲವನ್ನೂ ಹೇಳಬೇಕಾದ ಸ್ಥಿತಿ ಬಂದಿದೆ. ನಾನು ನನ್ನ ಗಂಡನ ಜೊತೆ ಇರಬೇಕು. ಈ ಘಟನೆಯಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನಿಂದ ತಪ್ಪಾಗಿದ್ದರೆ ಅದಕ್ಕೆ ಸಾಕ್ಷ್ಯ ನೀಡಿ ಎಂದು ಕೇಳುತ್ತಿದ್ದೇನೆ. ಆದರೆ ಅವರು ಇದರ ಬಗ್ಗೆ ಮಾತೇ ಆಡುತ್ತಿಲ್ಲ. ಹೀಗಾಗಿ ನಾನು ದೂರು ಕೊಟ್ಟಿದ್ದೇನೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

Click to comment

Leave a Reply

Your email address will not be published. Required fields are marked *