– ನಮ್ಮ ಕೆಎಂಎಫ್, ನಮ್ಮ ಹೆಮ್ಮೆ.. ‘ನಂದಿನಿ’ ತುಪ್ಪ ಬಳಸಿ ಸ್ವಾಧಿಷ್ಟ ಲಡ್ಡು ತಯಾರಿಸಿ ಎಂದ ಕನ್ನಡಿಗ ಭಕ್ತ
ಅಮರಾವತಿ: ನಂದಿನಿ ತುಪ್ಪ ಬಳಸಿ ತಯಾರಿಸಲಾಗುತ್ತಿರುವ ತಿರುಪತಿ ಲಡ್ಡು (Tirupati Laddu Row) ಸವಿದು ಭಕ್ತರು ಖುಷಿ ವ್ಯಕ್ತಪಡಿಸಿದ್ದಾರೆ. ಪ್ರಸಾದಕ್ಕೆ ಕಲಬೆರಕೆ, ಅಪವಿತ್ರ ವಿವಾದದ ಬೆನ್ನಲ್ಲೇ ದೇವಾಲಯ ಶುದ್ಧೀಕರಿಸಲಾಗಿದ್ದು, ಹೆಚ್ಚೆಚ್ಚು ಜನರು ತಿರುಪತಿಗೆ ಆಗಮಿಸಿ ಶ್ರೀ ವೆಂಕಟರಮಣದ ದರ್ಶನ ಪಡೆಯುತ್ತಿದ್ದಾರೆ. ಜೊತೆಗೆ ಅಪಾರ ಸಂಖ್ಯೆಯಲ್ಲಿ ಲಡ್ಡು ಪ್ರಸಾದ ತೆಗೆದುಕೊಳ್ಳುತ್ತಿದ್ದಾರೆ.
Advertisement
ಬೆಂಗಳೂರಿನಿಂದ (Bengaluru) ತಿರುಪತಿ ದೇವಾಲಯಕ್ಕೆ (Tirupati Temple) ಬಂದಿದ್ದ ಜಗದೀಶ್ ಮಾತನಾಡಿ, ಲಡ್ಡುನಲ್ಲಿ ಏನೇನೊ ಕಲಬೆರಕೆ ಮಾಡಲಾಗಿದೆ ಅಂತಾರೆ. ಸದ್ಯಕ್ಕೆ ಏನೂ ಇಲ್ಲ, ಎಲ್ಲಾ ಬದಲಾಗಿದೆ. ಲಡ್ಡು ಟೇಸ್ಟ್ ಮಾಡಿದ್ದೇವೆ. ತುಂಬಾ ಚೆನ್ನಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಸಾದದಲ್ಲಿ ಕಲಬೆರಕೆ, ಅಪವಿತ್ರಕ್ಕೆ ಡೋಂಟ್ ಕೇರ್ – ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕೆ ಮುಗಿಬಿದ್ದ ಭಕ್ತರು
Advertisement
Advertisement
ಮತ್ತೊಬ್ಬರು ಭಕ್ತರು, ನಾವು ಲಡ್ಡು ತೆಗೆದುಕೊಂಡು ತಿಂದೆವು. ಟೇಸ್ಟ್ ಸೂಪರ್ ಆಗಿದೆ. ನಮ್ಮ ಕೆಎಂಎಫ್.. ನಮ್ಮ ಬೆಂಗಳೂರು. ನಮಗೂ ಖುಷಿ ತಂದಿದೆ. ತುಂಬಾ ಚೆನ್ನಾಗಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.
Advertisement
ನಮ್ಮ ನಾಡಿನ ನಂದಿನಿ ತುಪ್ಪ ಬಳಸಿ ಲಡ್ಡು ಮಾಡುತ್ತಿರುವುದು ತುಂಬಾ ಖುಷಿ ವಿಚಾರ. ಮಧ್ಯದಲ್ಲಿ ಈ ರೀತಿಯ ವಿವಾದ ಎದ್ದಿದ್ದಕ್ಕೆ ಬೇಜಾರಾಯ್ತು. ನಮ್ಮ ಕರ್ನಾಟಕ ನಮ್ಮ ಹೆಮ್ಮೆ. ನಂದಿನಿ ನಮ್ಮ ಹೆಮ್ಮೆ. ನಂದಿನಿ ಬಳಸಿ ಸ್ವಾಧಿಷ್ಟಕರವಾದ ಲಡ್ಡು ಸವಿಯಿರಿ ಎಂದು ಕರ್ನಾಟಕದವರೇ ಆದ ಇನ್ನೊಬ್ಬರು ಭಕ್ತರು ಖುಷಿ ವ್ಯಕ್ತಪಡಿಸಿದರು. ಇದನ್ನೂ ಓದಿ: ತಿರುಪತಿ ದೇವಾಲಯ ಪವಿತ್ರೋತ್ಸವ – ಹಾಲು, ಮೊಸರು, ತುಪ್ಪ, ಗೋಮೂತ್ರ, ಸಗಣಿ ಬಳಸಿ ದೇವಸ್ಥಾನ ಶುದ್ಧೀಕರಣ
ಲಡ್ಡು ಟೇಸ್ಟ್ ಬಹಳ ಚೆನ್ನಾಗಿದೆ. ತಾಜಾ ತುಪ್ಪದ್ದೇ ಆಗಿದೆ. ಮೊದಲು ಇದ್ದ ಟೇಸ್ಟ್ ಥರಾನೆ ಇದೆ ಲಡ್ಡು. ತಿಂದು ಬಹಳ ಖುಷಿಯಾಯಿತು ನಮಗೆ. ನನ್ನ ಬರ್ತ್‌ಡೇ ಸೆಲಬ್ರೇಷನ್ ಇಲ್ಲೇ ಆಯಿತು ಎಂದು ಕುಟುಂಬ ಸಮೇತರಾಗಿ ತಿರುಪತಿಗೆ ಆಗಮಿಸಿದ್ದ ಭಕ್ತೆಯೊಬ್ಬರು ಸಂತಸ ವ್ಯಕ್ತಪಡಿಸಿದರು.