ಕೊಪ್ಪಳ: ನವಬೃಂದಾವನ (Vrindavan) ಗಡ್ಡೆಯಲ್ಲಿ ರಾಯರ ಮಠದವರಿಗೆ ಜಯತೀರ್ಥರ ಆರಾಧನೆಗೆ ಕೋರ್ಟ್ (Court) ಆದೇಶ ನೀಡಿದ್ದಕ್ಕೆ ಉತ್ತರಾಧಿ ಮಠದವರು ಇಂದು ಮೌನ ಪ್ರತಿಭಟನೆ ನಡೆಸಿದ್ದಾರೆ.
ಗಂಗಾವತಿಯ ಆನೆಗೊಂದಿ ಸಮೀಪದ ನವಬೃಂದಾವನ ಗಡ್ಡೆಯ ಒಂದೇ ಬೃಂದಾವನಕ್ಕೆ ರಘುವರ್ಯ ತೀರ್ಥರ ಬೃಂದಾವನ ಹಾಗೂ ಜಯತೀರ್ಥರ ಬೃಂದಾವನ ಎಂದು ರಾಯರ ಮಠ ಹಾಗೂ ಉತ್ತರಾಧಿ ಮಠದವರ ನಡುವೆ ಗೊಂದಲ ಉಂಟಾಗಿತ್ತು. ಇದನ್ನೂ ಬಗೆಹರಿಸಲು ಎರಡು ಮಠದವರು ಕೋರ್ಟ್ ಮೊರೆ ಹೋಗಿದ್ದರು. ಪರಿಶೀಲನೆ ನಡೆಸಿ ನ್ಯಾಯಾಲಯವು ಜು. 6 ರಿಂದ 8ರ ವರೆಗೆ ಮೂರು ದಿನಗಳ ಕಾಲ ಉತ್ತರಾಧಿ ಮಠದವರು ರಘುವರ್ಯ ತೀರ್ಥರ ಮಹಿಮೋತ್ಸವವನ್ನು ಆಚರಣೆ ಮಾಡಬೇಕು. ರಾಯರ ಮಠದವರು ಜು.08 ರಿಂದ 10ರ ವರೆಗೆ ಮೂರು ದಿನಗಳ ಕಾಲ ಜಯತೀರ್ಥರ ಆರಾಧನೆ ಮಹೋತ್ಸವವನ್ನು ನಡೆಸಬೇಕು ಎಂದು ಆದೇಶ ಹೊರಡಿಸಿದೆ. ಇದನ್ನೂ ಓದಿ: ದ.ಕನ್ನಡ, ಉಡುಪಿ, ಉತ್ತರ ಕನ್ನಡದ 5 ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಮಂತ್ರಾಲಯದ ರಾಯರ ಮಠದವರಿಗೆ (Mantralaya) ಜಯತೀರ್ಥರ ಆರಾಧನೆಯನ್ನು ಮಾಡಲು ಅವಕಾಶ ನೀಡಿರುವುದು ಉತ್ತರಾಧಿ ಮಠದ ಭಕ್ತರು ಬೇಸರಿಸಿಕೊಂಡಿದ್ದಾರೆ. ನ್ಯಾಯಕ್ಕಾಗಿ ಒತ್ತಾಯಿಸಿ, ನ್ಯಾಯಕ್ಕಾಗಿ ಪ್ರಾರ್ಥನೆ ಎಂಬ ಪೋಸ್ಟರ್‌ಗಳನ್ನು ಹಿಡಿದು ಮೌನ ಪ್ರತಿಭಟನೆಯನ್ನು ನಡೆಸಿದ್ದಾರೆ. ಇದನ್ನೂ ಓದಿ: ಕಾಡಾನೆಯೊಂದಿಗೆ ಸೆಲ್ಫಿ – 20 ಸಾವಿರ ರೂ. ದಂಡ
Web Stories