ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರುವ ಈ ಗಣೇಶ ದೇವಸ್ಥಾನದಲ್ಲಿ ಪ್ರಸಾದ ಬೇಕು ಅಂದ್ರೆ ನೀವು ಬಟ್ಟಲು ಅಥವಾ ಡಬ್ಬಿ ತರಲೇಬೇಕು.
ಬೆಂಗಳೂರಿನ ಕಲ್ಯಾಣ ನಗರದಲ್ಲಿರೋ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಈ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಪ್ಲಾಸ್ಟಿಕ್ ಮುಕ್ತ ದೇವಸ್ಥಾನ ಮಾಡುವ ಸಲುವಾಗಿ ಒಂದಿಷ್ಟು ನಿಯಮ ಜಾರಿ ಮಾಡಿದೆ.
Advertisement
Advertisement
ದೇವರಿಗೆ ಮಾಡಿರೋ ಪಂಚಾಮೃತ ಅಭಿಷೇಕದ ಪ್ರಸಾದವನ್ನ ಸ್ಟೀಲ್ ಬಟ್ಟಲು ತಂದ್ರೆ ಮಾತ್ರ ಕೊಡ್ತಾರೆ. ದೇವರ ಅಭಿಷೇಕಕ್ಕಾಗಿ ಭಕ್ತಾದಿಗಳು ಪ್ಯಾಕೆಟ್ ಹಾಲನ್ನು ತರುವ ಹಾಗಿಲ್ಲ ಎನ್ನುವ ಮತ್ತೊಂದು ನಿಮಯವನ್ನು ತಂದಿದ್ದಾರೆ.
Advertisement
Advertisement
ಶಕ್ತಿಗಣಪತಿ ಸನ್ನಿಧಿಯಲ್ಲಿ ಒಂದು ವರ್ಷದಿಂದ ಈ ನಿಯಮ ಜಾರಿಯಲ್ಲಿದೆ. ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಮಾಡಿದ್ರು ಪ್ಲಾಸ್ಟಿಕ್ ಪ್ಲೇಟ್ ಬಳಸಲ್ಲ. ಮರುಬಳಕೆ ಮಾಡೋ ತಟ್ಟೆಗಳನ್ನೇ ಬಳಸಲಾಗುತ್ತೆ. ಇಷ್ಟೇ ಅಲ್ಲದೇ ದೇವಸ್ಥಾನದಲ್ಲಿ ಉತ್ಪತ್ತಿಯಾಗೋ ಕಸವನ್ನು ಅಲ್ಲೇ ಗೊಬ್ಬರವಾಗಿಸೋ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಪರಿಸರಸ್ನೇಹಿ ದೇಗುಲದ ಬಗ್ಗೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸ್ತಾರೆ.
ದೇವಸ್ಥಾನ ಪರಿಸರ ಸ್ನೇಹಿಯಾಗಿರೋದು ತಿಳಿದ ಬಳಿಕ ಭಕ್ತರು ಪ್ರಸಾದ ಸ್ವೀಕರಿಸೋಕೆ ಮನೆಯಿಂದಲೇ ಡಬ್ಬಿ, ಬಟ್ಟಲುಗಳನ್ನ ತೆಗೆದುಕೊಂಡು ಬರ್ತಾರೆ.