ಪ್ರಯಾಗ್‌ರಾಜ್: ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ (Maha Kumbh Mela) ಭಾಗವಹಿಸಲು 50 ವಯಸ್ಸಿನ ಭಕ್ತನೊಬ್ಬ ಸುಮಾರು 1,100 ಕಿ.ಮೀ. ಸೈಕಲ್‌ನಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಮಲ್ಕಂಗಿರಿಯ 50 ವರ್ಷದ ಭಕ್ತ ದಿನೇಶ್ ಪಟ್ನಾಯಕ್, ಐತಿಹಾಸಿಕ ಮಹಾ ಕುಂಭಮೇಳದಲ್ಲಿ ಭಾಗವಹಿಸಲು ಗುರುವಾರ ಪ್ರಯಾಗ್ರಾಜ್‌ಗೆ ಸೈಕಲ್ ಪ್ರಯಾಣ ಬೆಳೆಸಿದ್ದಾರೆ. ಸ್ಥಳೀಯ ರಾಮ ದೇವಾಲಯಕ್ಕೆ ಭೇಟಿ ನೀಡಿದ ನಂತರ ಹೊರಟ ಪಟ್ನಾಯಕ್, ಸುಮಾರು 10 ರಿಂದ 11 ದಿನಗಳಲ್ಲಿ 1,100 ಕಿ.ಮೀ. ದೂರವನ್ನು ಕ್ರಮಿಸುವ ಗುರಿಯನ್ನು ಹೊಂದಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಚಿತ್ರವಿಚಿತ್ರ ಸನ್ನಿವೇಶ – 9 ವರ್ಷದಿಂದ ಸಾಧು ತಲೆಯ ಮೇಲೆ ಕುಳಿತ ಪಾರಿವಾಳ!
Advertisement
Advertisement
ಈ 12ನೇ ಕುಂಭಮೇಳವು ಸೂರ್ಯ, ಚಂದ್ರ ಮತ್ತು ಗುರುಗಳ ವಿಶಿಷ್ಟ ಆಕಾಶಕಾಯಗಳ ಜೋಡಣೆಯೊಂದಿಗೆ ಹೊಂದಿಕೆಯಾಗುತ್ತದೆ ಎಂದು ಪಟ್ನಾಯಕ್ ಹೇಳಿದ್ದಾರೆ. ಈಗಾಗಲೇ 102 ಕಿ.ಮೀ. ಕ್ರಮಿಸಿ, ಜೇಪೋರ್ ಪಟ್ಟಣವನ್ನು ತಲುಪಿದ್ದಾರೆ.
Advertisement
ನಾನು ಪ್ರತಿದಿನ ಬೆಳಗ್ಗೆ 6 ರಿಂದ ಸಂಜೆ 6 ಗಂಟೆ ವರೆಗೆ 90-100 ಕಿ.ಮೀ ಕ್ರಮಿಸಲು ಯೋಜಿಸಿದ್ದೇನೆ. ನನ್ನ ಪ್ರಯಾಣದ ಸಮಯದಲ್ಲಿ 300-400 ಜನರೊಂದಿಗೆ ಸಂಪರ್ಕ ಸಾಧಿಸುವ ಆಶಯ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಆರೂವರೆ ಕೋಟಿ ಭಕ್ತರ ಪುಣ್ಯಸ್ನಾನ
Advertisement
ಕಳೆದ ವರ್ಷ ಜನವರಿಯಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಅವರು ಪಟ್ಟಣದ ಇತರ ಯುವಕರೊಂದಿಗೆ ನಡೆದುಕೊಂಡು ಹೋಗಿದ್ದರು. ಈ ಬಾರಿ, ಸೈಕಲ್ ಪ್ರಯಾಣದ ಮೂಲಕ ಯುವಕರಲ್ಲಿ ಆಧ್ಯಾತ್ಮಿಕ ಮೌಲ್ಯಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದಾರೆ. ಮಹಾ ಮೇಳದಲ್ಲಿ ಸಾಧುಗಳಿಂದ ಆಶೀರ್ವಾದ ಪಡೆಯಲು ಬರುತ್ತಿದ್ದಾರೆ.