– ಶಬರಿಮಲೆಯಲ್ಲಿ ಕಳೆದು ಹೋದ ಪರ್ಸ್ ಮಂಗ್ಳೂರಲ್ಲಿ ಪ್ರತ್ಯಕ್ಷ
– ಅಯ್ಯಪ್ಪನ ಮಹಿಮೆಗೆ ಶರಣಾದ ಭಕ್ತ
ಮಂಗಳೂರು: ಶಬರಿಮಲೆಯ ಅಯ್ಯಪ್ಪನ ಸನ್ನಿಧಾನದಲ್ಲಿ ಕಳೆದು ಹೋಗಿದ್ದ ಭಕ್ತರೊಬ್ಬರ ಪರ್ಸ್ ಮಂಗಳೂರಿನಲ್ಲಿ ಸಿಕ್ಕಿರುವ ಅಪರೂಪದ ಘಟನೆ ನಡೆದಿದೆ.
ಮಂಗಳೂರಿನ ಕುಂಜತ್ತಬೈಲ್ ನಿವಾಸಿ ದೇವರಾಜ್ ಅಮೀನ್, ವರ್ಷದ ಪ್ರತಿ ತಿಂಗಳೂ ಶಬರಿಮಲೆ ಯಾತ್ರೆ ಮಾಡುತ್ತಾರೆ. ಅದರಂತೆ ಕಳೆದ ಮಕರ ಸಂಕ್ರಾಂತಿಯಂದು ತನ್ನ ಶಿಷ್ಯ ವೃಂದದ ಜೊತೆಗೆ ಶಬರಿಮಲೆಗೆ ತೆರಳಿದ್ದರು. ಅಯ್ಯಪ್ಪನ ದರ್ಶನ ಮಾಡುವ ವೇಳೆ 7,500 ರೂಪಾಯಿ ಇದ್ದ ಪರ್ಸ್ ಕಳೆದು ಹೋಗಿತ್ತು.
Advertisement
Advertisement
ಭಾರೀ ಜನಸಂದಣಿಯ ನಡುವೆ ತನ್ನಲ್ಲಿದ್ದ ಪರ್ಸ್ ಎಲ್ಲಿ ಕಳೆದು ಹೋಗಿರಬಹುದೆಂದು ದುಃಖಿಸಿದರು. ಪ್ರಸಾದ ತೆಗೆದುಕೊಳ್ಳಲೂ ಹಣವಿಲ್ಲದೆ ರೋಧಿಸಿದರು. ಸನ್ನಿಧಾನದಲ್ಲಿ ಪರಮ ಪಾವನ ಮೂರ್ತಿಯ ಎದುರು ಕಣ್ಣೀರಿಟ್ಟರು. ಪವಿತ್ರ ಕ್ಷೇತ್ರದಲ್ಲೇ ಹಣ ಕಳೆದುಕೊಂಡಿರುದರಿಂದ ಇನ್ಮುಂದೆ ಈ ಶಬರಿಮಲೆಗೆ ಬರೋದಿಲ್ಲ ಎಂದು ದೇವರ ಎದುರೇ ಕೋಪ ತೋಡಿಕೊಂಡರು.
Advertisement
ಹೀಗೆ ಅತ್ಯಂತ ದುಃಖದಿಂದಲೇ ಶಬರಿಮಲೆ ಯಾತ್ರೆ ಮುಗಿಸಿ ಬಂದ ದೇವರಾಜ್ ಅಯ್ಯಪ್ಪನಲ್ಲಿ ಮತ್ತೆ ಮತ್ತೆ ಬೇಡಿಕೊಂಡರು. ಪವಾಡವೆಂಬಂತೆ ಊರಿಗೆ ಬಂದ ಎರಡೇ ಗಂಟೆಯಲ್ಲಿ ದೇವರಾಜರ ಮೊಬೈಲ್‍ಗೆ ಅಪರಿಚಿತ ನಂಬರ್ ನಿಂದ ಕರೆ ಬಂದಿದೆ. ಮಂಗಳೂರಿನ ಕೊಟ್ಟಾರದ ಅಬ್ಬಕ್ಕನಗರದಿಂದ ಶಬರಿಮಲೆಗೆ ಹೋಗಿದ್ದ ಜಯಪ್ರಕಾಶ್‍ಗೆ ದೇವರಾಜ್ ಪರ್ಸ್ ಸನ್ನಿಧಾನದಲ್ಲಿ ಸಿಕ್ಕಿದ್ದು, ಸುರಕ್ಷಿತವಾಗಿ ಅದನ್ನು ಊರಿಗೆ ಬಂದು ಒಪ್ಪಿಸಿದ್ದಾರೆ.
Advertisement
ಲಕ್ಷಾಂತರ ಜನರಿರುವ ಸ್ಥಳದಲ್ಲಿ ಕಳೆದು ಹೋದ ಪರ್ಸ್ ಮರಳಿ ಸಿಕ್ಕಿರುವುದರಿಂದ ದೇವರಾಜ್ ತಾನು ನಂಬುವ ಅಯ್ಯಪ್ಪನ ಮಹಿಮೆಗೆ ಶರಣಾದರು.