ಬಾಗಲಕೋಟೆ: ಜಿಲ್ಲೆಯ ಜಮಖಂಡಿ (Jamkhandi) ತಾಲೂಕಿನ ಚಿಕ್ಕಲಕಿ ಗ್ರಾಮದ ನಡೆದ ಮಾಳಿಂಗರಾಯ ಜಾತ್ರೆಯಲ್ಲಿ ದಾಖಲೆ ಮೊತ್ತಕ್ಕೆ ಮಾಳಿಂಗರಾಯ ಗದ್ದುಗೆಯ (Malingaraya-Gadduge) ತೆಂಗಿನಕಾಯಿ ಹರಾಜು ಆಗಿದೆ.
ವಿಜಯಪುರ ಜಿಲ್ಲೆಯ ತಿಕೋಟಾ ಗ್ರಾಮದ ಭಕ್ತನಾದ (Devotee) ಮಾಹಾವೀರ ಹರಕೆಯವರು ಹರಾಜಿನಲ್ಲಿ ದೇವರ ಮುಂದಿನ ಈ ತೆಂಗಿನಕಾಯಿಯನ್ನು 5,71,001 ರೂ.ಗೆ ಪಡೆದುಕೊಂಡಿದ್ದಾರೆ. ಈ ತೆಂಗಿನಕಾಯಿಯನ್ನು ಪಡೆಯಲು ಚಿಕ್ಕಲಕಿ ಗ್ರಾಮದ ಮುದುಕಪ್ಪ ಮಾಳಪ್ಪ ಪಟೇದ್ದಾರ ಮತ್ತು ಗೋಠೆ ಗ್ರಾಮದ ಸದಾಶಿವ ಮೈಗೂರರವರ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಇದನ್ನೂ ಓದಿ: ಬುರುಡೆ ಕೇಸ್ – ಎಸ್‌ಐಟಿಯಿಂದ ಸತತ 12 ಗಂಟೆ ತಿಮರೋಡಿ ಮನೆ ಶೋಧ
ತೆಂಗಿನಕಾಯಿಯ ವಿಶೇಷ ಏನು?
ಮಹಿಮಾಂತ ಮಾಳಿಂಗರಾಯ ದೇವರ ಗದ್ದುಗೆ ಮೇಲೆ ಈ ತೆಂಗಿನಕಾಯಿಯನ್ನು ಶ್ರಾವಣ ಮಾಸದ ಒಂದು ತಿಂಗಳ ಕಾಲ ಪೂಜಿಸಲಾಗಿರುತ್ತದೆ. ಇದೇ ತೆಂಗಿನ ಕಾಯಿಯನ್ನು ಹಿಂದೊಮ್ಮೆ ಮಾಹಾವೀರ ಹರಕೆಯವರು ಹರಾಜಿನಲ್ಲಿ 6,50,001 ರೂ.ಗೆ ಪಡೆದುಕೊಂಡಿದ್ದರು. ಈಗ ಮತ್ತೆ ದಾಖಲೆಯ ಮೊತ್ತಕ್ಕೆ ಮಹಾಳಿಂಗರಾಯನ ತೆಂಗಿನಕಾಯಿ ತಮ್ಮದಾಗಿಸಿಕೊಂಡು ವಿಶೇಷ ಭಕ್ತಿ ಪ್ರದರ್ಶಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಳಿಂಗರಾಯ ಪಟ್ಟದ ದೇವರು ಗುರು ಮುತ್ಯಾ ಬಬಲಾದಿ, ಮಾಳಿಂಗರಾಯ ದೇವರ ಅರ್ಚಕರಾದ ಸಿದ್ದಣ ಪೂಜಾರಿ, ಹಿರಿಯರಾದ ದುಂಡಪ್ಪ ಬಬಲಾದಿ, ಕಲ್ಲಪ್ಪ ಗಿಡಗಿಂಚಿ, ಗ್ರಾಮಪಂಚಾಯತ್ ಸದಸ್ಯರರಾದ ಬಸವರಾಜ ಆಲಗೂರ, ಸಂತೋಷ ಮಮದಾಪೂರ, ಜಾತ್ರೆಯಲ್ಲಿ ನೇರೆದಿದ್ದ ಭಕ್ತ ಸಮೂಹ ಉಪಸ್ಥಿತರಿದ್ದರು.