ಲಕ್ನೋ: ಉತ್ತರ ಪ್ರದೇಶದ ಮಥುರಾದ ಬಂಕೆ ಬಿಹಾರಿ ಮಂದಿರದಲ್ಲಿ 65 ವರ್ಷದ ಭಕ್ತ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಮೃತ ದುರ್ದೈವಿಯನ್ನು ಲಕ್ಷ್ಮಣ್ ಎಂದು ಗುರುತಿಸಲಾಗಿದ್ದು, ಇವರು ಮಥುರಾದ ನಿವಾಸಿಯಾಗಿದ್ದಾರೆ. ಶನಿವಾರ ಮಂದಿರದಲ್ಲಿ ಕುಸಿದು ಬಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಲಕ್ಷ್ಮಣ್ ಅವರನ್ನು ಸಂಬಂಧಿಕರು ಆಸ್ಪತ್ರೆಗೆ ಕರೆತಂದ ವೇಳೆ ಅವರು ಮೃತಪಟ್ಟಿರುವುದಾಗಿ ವೃಂದಾವನದ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಎಸ್.ಕೆ.ಜೈನ್ ತಿಳಿಸಿದ್ದಾರೆ. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್, ರಾಘವ್ ಚಡ್ಡಾ ಪಂಜಾಬ್ ಲೂಟಿ ಮಾಡಲು ಬಂದಿದ್ದಾರೆ: ಚರಣ್‍ಜಿತ್ ಸಿಂಗ್ ಚನ್ನಿ
Advertisement
Advertisement
ಪ್ರಾರ್ಥನೆ ಸಲ್ಲಿಸಲು ದೇವಸ್ಥಾನಕ್ಕೆ ಆಗಮಿಸಿದ್ದ ವೇಳೆ ಜನಸಂದಣಿಯ ಮಧ್ಯೆ ಲಕ್ಷ್ಮಣ್ ಅವರಿಗೆ ಉಸಿರುಗಟ್ಟಿದೆ. ನಂತರ ಅವರನ್ನು ತಕ್ಷಣ ಅಲ್ಲಿಂದ ಹೊರಕ್ಕೆ ಕರೆದೊಯ್ದರು. ಆದರೆ ದೇವಸ್ಥಾನದ ಹೊರಗೆ ಬರುವಾಗ ಪ್ರಜ್ಞೆ ತಪ್ಪಿದರು. ಹಾಗಾಗಿ ಆಸ್ಪತ್ರೆಗೆ ಕರೆದೊಯ್ದ ವೇಳೆ ವೈದ್ಯರು ಲಕ್ಷ್ಮಣ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಮೃತ ಸಂಬಂಧಿಕರು ಹೇಳಿದ್ದಾರೆ. ಆದರೆ ದೇವಸ್ಥಾನದ ಆಡಳಿತ ಮಂಡಳಿ ಸದ್ಯಕ್ಕೆ ಯಾವುದೇ ಭಕ್ತರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಕಾಂಗ್ರೆಸ್ ದೇಶದಲ್ಲಿ ವಿಭಜನೆಯ ಬೀಜ ಬಿತ್ತಿದೆ: ಅನಿಲ್ ವಿಜ್