LatestLeading NewsMain PostNational

ಭಕ್ತಿಯ ಪರಾಕಾಷ್ಠೆ ತಲುಪಿ ತನ್ನ ನಾಲಿಗೆಯನ್ನೇ ಕತ್ತರಿಸಿ ದೇವರಿಗೆ ಅರ್ಪಿಸಿದ ಭಕ್ತ!

ಲಕ್ನೋ: ಭಕ್ತಿಯ ಪರಾಕಾಷ್ಠೆ ತಲುಪಿ ಭಕ್ತನೊಬ್ಬ ತನ್ನ ನಾಲಿಗೆಯನ್ನೇ ಕತ್ತರಿಸಿ ದೇವರಿಗೆ ಅರ್ಪಿಸಿರುವ ಘಟನೆ ಇಲ್ಲಿನ ಮಾ ಶೀಟ್ಲಾ ದೇವಸ್ಥಾನದಲ್ಲಿ ನಡೆದಿದೆ.

ಕೌಶಂಬಿ ನಿವಾಸಿ ಸಂಪತ್ (38) ದೇವರಿಗೆ ನಾಲಿಗೆ ಅರ್ಪಿಸಿದ ಭಕ್ತ. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಎಎಪಿ ಅಧಿಕಾರಕ್ಕೇರಿದ ರಾಜ್ಯಗಳಲ್ಲಿ ಗುತ್ತಿಗೆ ನೌಕರರ ಹುದ್ದೆ ಖಾಯಂ: ಕೇಜ್ರಿವಾಲ್

ಸಂಪತ್ ತನ್ನ ಪತ್ನಿಯೊಂದಿಗೆ ದೇವಸ್ಥಾನಕ್ಕೆ ಬಂದಿದ್ದರು. ಗಂಗಾ ನದಿಯಲ್ಲಿ ಸ್ನಾನ ಮಾಡಿದ ನಂತರ ಪೂಜೆ ಸಲ್ಲಿಸಿದರು. ದೇವಾಲಯ ಪ್ರದಕ್ಷಿಣೆ ಮುಗಿಸಿದ ನಂತರ, ಅವನು ತನ್ನ ನಾಲಿಗೆಯನ್ನು ಬ್ಲೇಡ್‌ನಿಂದ ಕತ್ತರಿಸಿ ದೇವರಿಗೆ ಅರ್ಪಿಸಿದ್ದಾನೆ ಎಂದು ಕರ್ಹಾ ಧಾಮ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಅಭಿಲಾಷ್ ತಿವಾರಿ ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ದೇವಸ್ಥಾನಕ್ಕೆ ಭೇಟಿ ನೀಡುವ ಇಚ್ಛೆಯನ್ನು ಪತಿ ವ್ಯಕ್ತಪಡಿಸಿದ್ದರು ಎಂದು ಆತನ ಪತ್ನಿ ಬನ್ನೋ ದೇವಿ ಹೇಳಿದ್ದಾರೆ. ಇದನ್ನೂ ಓದಿ: ಪರೀಕ್ಷೆ ಬರೆಯಲು ಈಜಿ ಚಂಪಾವತಿ ನದಿ ದಾಟಿದ ಯುವತಿ

Live Tv

Leave a Reply

Your email address will not be published.

Back to top button