ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ʻದೇವೋ ಕೆ ದೇವ್ ಮಹದೇವ್ʼ ಧಾರವಾಹಿ ನಟ ಮೋಹಿತ್ ರೈನಾ ಅವರು ತಮ್ಮ ಬಹುಕಾಲದ ಗೆಳತಿ ಅದಿತಿ ಜೊತೆಗೆ ಸಪ್ತಪದಿ ತುಳಿದಿದ್ದಾರೆ.
2022ರ ಜನವರಿ 1ರಂದು ಹೊಸ ವರ್ಷದ ದಿನ ಹೊಸ ಜೀವನಕ್ಕೆ ಕಾಲಿಟ್ಟ ಮೋಹಿತ್ ರೈನಾ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ, ಅದ್ದೂರಿ ಮದುವೆಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಮೋಹಿತ್ ಗುರು ಹಿರಿಯರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ವಿದ್ಯುತ್ ನೀಡದಿದ್ದಕ್ಕೆ ಅಖಿಲೇಶ್ ಯಾದವ್ ಮೊದಲು ಕ್ಷಮೆಯಾಚಿಸಲಿ: ಯೋಗಿ ಆದಿತ್ಯನಾಥ್
ಫೋಟೋ ಜೊತೆಗೆ, ಪ್ರೀತಿ ಇರುವಲ್ಲಿ ಅಡೆತಡೆಗಳಿರುವುದಿಲ್ಲ. ಅಡೆತಡೆಗಳಿದ್ದರೂ ಬೇಲಿಯನ್ನು ದಾಟುತ್ತೇವೆ. ಗುರಿಯನ್ನು ತಲುಪಲು ತಡೆಗೋಡೆಗಳನ್ನು ಭೇದಿಸುವ ಭರವಸೆಯಿಂದ ಮುನ್ನುಗ್ಗುತ್ತೇವೆ. ಈ ಭರವಸೆಯಿಂದ ನಾವಿಂದು ನಮ್ಮ ತಂದೆ, ತಾಯಿ ಆಶೀರ್ವಾದದಿಂದ ಒಂದಾಗಿದ್ದೇವೆ. ನಮ್ಮಿಬ್ಬರ ಈ ಹೊಸ ಪ್ರಯಾಣಕ್ಕೆ ನಿಮ್ಮೆಲ್ಲರ ಪ್ರೀತಿ ಹಾಗೂ ಆರ್ಶೀವಾದ ಬೇಕಾಗಿದೆ ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ.
View this post on Instagram
ಈ ನವಜೋಡಿಗೆ ಕರಣ್ ಜೋಹಾರ್, ಕತ್ರಿಕಾ ಸೆಂಗಾರ್, ಸಚಿನ್ ಶ್ರಾಫ್, ಕರಿಷ್ಮಾ ಕೋಟಕ್ ಮತ್ತು ಸೋಮ್ಯಾ ಸೇಠ್ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು, ಸ್ನೇಹಿತರು ಮತ್ತು ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ. ಇದನ್ನೂ ಓದಿ: ಕೊರೊನಾ ತಡೆಗಟ್ಟುವಲ್ಲಿ ಕೇಜ್ರಿವಾಲ್ ಸರ್ಕಾರ ವಿಫಲ: ಚರಣ್ಜಿತ್ ಸಿಂಗ್