ನಟ ದರ್ಶನ್‌ಗೆ ‘ಡೆವಿಲ್’ ಸಿನಿಮಾ (Devil) ಕೆಲಸಕ್ಕೆ ಬ್ರೇಕ್ ಸಿಕ್ಕ ಬೆನ್ನಲ್ಲೇ ಮೈಸೂರಿಗೆ (Mysuru) ತೆರಳಿದ್ದಾರೆ. ತಮ್ಮ ತೋಟದ ಮನೆಯಲ್ಲಿ ಎತ್ತಿನಗಾಡಿ ಓಡಿಸಿದ್ದಾರೆ. ಅವರ ಈ ವಿಡಿಯೋ ಫ್ಯಾನ್ಸ್ ಪೇಜ್‌ಗಳಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ಆಗಿದೆ: ಉಗ್ರರ ಕೃತ್ಯದ ಬಗ್ಗೆ ಅನುಪಮ್ ಖೇರ್ ಆಕ್ರೋಶ
ಸಿನಿಮಾ ಕೆಲಸ, ರೇಣುಕಾಸ್ವಾಮಿ ಕೊಲೆ ಪ್ರಕರಣದ ಕಾನೂನು ಹೋರಾಟದ ನಡುವೆ ದರ್ಶನ್ (Darshan) ಫಾರ್ಮ್‌ಹೌಸ್‌ನಲ್ಲಿ (Farmhouse) ಸಮಯ ಕಳೆದಿದ್ದಾರೆ. ಮೈಸೂರಿನ ಮನೆಯಲ್ಲಿ ನಟ ಎತ್ತಿನಗಾಡಿ ಓಡಿಸುತ್ತಿರುವ ಅವರ ವಿಡಿಯೋ ಡಿಬಾಸ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ ಜಾಮೀನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮೇ 14ಕ್ಕೆ ಮುಂದೂಡಿಕೆ
View this post on Instagram
ಅಂದಹಾಗೆ, ನಿನ್ನೆ (ಏ.22) ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ 7 ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮತ್ತೆ ಮೇ 14ಕ್ಕೆ ಮುಂದೂಡಲಾಗಿದೆ.