‘ಐ ಲವ್ ಯೂ’ ಯಾವಾಗಲೂ ನೀವೇ ನನ್ನ ಹೀರೋ ಎಂದ ದರ್ಶನ್ ಪುತ್ರ

Public TV
1 Min Read
darshan 9

ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಹೀಗಿರುವಾಗ ಇಂದು (ಜೂನ್ 16) ವಿಶ್ವ ತಂದೆಯಂದಿರ (Fathers Day) ದಿನವಾಗಿದ್ದು, ‘ಐ ಲವ್ ಯೂ’ ಯಾವಾಗಲೂ ನೀವೇ ನನ್ನ ಹೀರೋ ಅಪ್ಪ ಎಂದು ದರ್ಶನ್‌ಗೆ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ತಂದೆಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಕ್ಕೆ ವಿನೀಶ್ ಭಾವುಕರಾಗಿದ್ದಾರೆ. ಇದನ್ನೂ ಓದಿ:ನಯನತಾರಾ, ತ್ರಿಷಾ ಹಿಂದಿಕ್ಕಿದ ರಶ್ಮಿಕಾ ಮಂದಣ್ಣ- ದುಬಾರಿ ಸಂಭಾವನೆ ಪಡೆದ ನಟಿ

Darshan 03

ಹ್ಯಾಪಿ ಫಾದರ್ಸ್ ಡೇ ಅಪ್ಪ. ನಾನು ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೀನಿ. ಐ ಲವ್ ಯು. ಯಾವಾಗಲೂ ನೀವೇ ನನ್ನ ಹೀರೋ ಎಂದು ವಿನೀಶ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ತಂದೆಯ ಜೊತೆಗಿನ ಕೆಲವು ಫೋಟೋಗಳನ್ನು ಕೊಲಾಜ್ ಮಾಡಿ ಶೇರ್ ಮಾಡಿದ್ದಾರೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

darshan 1 1

ಇತ್ತೀಚೆಗೆ ನನ್ನ ತಂದೆಯ ಬಗ್ಗೆ ಕೆಟ್ಟ ಕಮೆಂಟ್‌ಗಳನ್ನು ಮಾಡಿ, ಅಶ್ಲೀಲ ಭಾಷೆಯಲ್ಲಿ ನಿಂದಿಸಿದ್ದಕ್ಕೆ ನಿಮಗೆಲ್ಲ ಧನ್ಯವಾದಗಳು ಎಂದು ಬರೆದುಕೊಂಡಿದ್ದರು. ನಾನು 15 ವರ್ಷದ ಬಾಲಕ, ನನಗೂ ಭಾವನೆಗಳಿವೆ ಎಂಬುದನ್ನು ನೀವು ಪರಿಗಣಿಸಲೇ ಇಲ್ಲ. ಇಂತಹ ಕೆಟ್ಟ ಸಮಯದಲ್ಲಿ ನನ್ನ ತಾಯಿ ಹಾಗೂ ತಂದೆಗೆ ನಿಮ್ಮ ಬೆಂಬಲದ ಅಗತ್ಯವಿದೆ. ನೀವು ನನಗೆ ಶಾಪ ಹಾಕುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ತಂದೆಯ ಬಂಧನ, ಜನರ ಆಕ್ರೋಶ, ಕೆಟ್ಟ ಕಾಮೆಂಟ್‌ಗಳ ಬಗ್ಗೆ ವಿನೀಶ್ ತೂಗುದೀಪ ಬೇಸರದ ಪೋಸ್ಟ್ ಮಾಡಿದ್ದರು.


ಅಂದಹಾಗೆ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್, ಪವಿತ್ರಾ ಗೌಡ ಸೇರಿದಂತೆ 12 ಮಂದಿಯನ್ನು ಮತ್ತೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲು ಜೂನ್ 15ರಂದು 42ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

Share This Article