– ಡಿಸಿಎಂ ಆಗಿ ಶಿಂಧೆ, ಅಜಿತ್ ಪವಾರ್ ಪದಗ್ರಹಣ
ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ (Devendra Fadnavis) ಆಯ್ಕೆಯಾಗಿದ್ದು, ಇಂದು (ಗುರುವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಏಕನಾಥ್ ಶಿಂಧೆ, ಅಜಿತ್ ಪವಾರ್‌ಗೆ ಡಿಸಿಎಂ ಹುದ್ದೆಯೇ ಗಟ್ಟಿಯಾಗಿದೆ. ಸರ್ಕಾರ ರಚನೆಯ ಮೈತ್ರಿ ಸೂತ್ರ ಇಂದು ರಿವೀಲ್ ಆಗಲಿದೆ.
Advertisement
ಈಗ ಮುಂಗಾರು ಕಮ್ಮಿ ಆಗಿದೆ ಅಂತಾ ಕರಾವಳಿಯಲ್ಲಿ ನಿಮ್ಮ ಮನೆ ಕಟ್ಟಲು ಧೈರ್ಯ ಮಾಡಬೇಡಿ. ನಾನು ಸಮುದ್ರ ಇದ್ದಂತೆ, ಮತ್ತೆ ಬಂದೇ ಬರುತ್ತೇನೆ ಎಂದು 2019ರಲ್ಲಿ ದೇವೇಂದ್ರ ಫಡ್ನವೀಸ್ ಅಂದಿನ ಸಿಎಂ ಉದ್ಧವ್ ಠಾಕ್ರೆಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎಚ್ಚರಿಕೆ ನೀಡಿದ್ದರು. ಅದಾಗಿ ಐದು ವರ್ಷಕ್ಕೇ ಅವತ್ತಿನ ವಾರ್ನಿಂಗ್ ನಿಜವಾಗಿದೆ. ಸಿಎಂ ಕುರ್ಚಿಗಾಗಿ ಬಿಜೆಪಿ ಸಂಬಂಧವನ್ನು ಮುರಿದುಕೊಂಡಿದ್ದ ಉದ್ಧವ್ ಠಾಕ್ರೆಗೆ ಈಗ ನೆಲೆಯೇ ಇಲ್ಲದಂತೆ ಫಡ್ನವೀಸ್ ಮಾಡಿದ್ದಾರೆ. ಅಂದು ಶಿವಸೇನೆಯ ನಡೆಯಿಂದ ಸಿಎಂ ಸ್ಥಾನದಿಂದ ವಂಚಿತರಾಗಿದ್ದ ದೇವೇಂದ್ರ ಫಡ್ನವೀಸ್ ಈಗ ಮತ್ತೊಮ್ಮೆ ಮಹಾರಾಷ್ಟ್ರದ (Maharashtra) ಸಿಎಂ ಆಗುತ್ತಿದ್ದು, ಐದು ವರ್ಷದಲ್ಲಿ ತಮ್ಮ ತಾಕತ್ತು ಏನು ಎಂಬುದನ್ನು ಉದ್ಧವ್ ಠಾಕ್ರೆ ಸೇರಿ ಮಹಾ ವಿಕಾಸ್ ಅಘಾಡಿಗೆ ತೋರಿಸಿದ್ದಾರೆ. ಈ ಮೂಲಕ ಐದು ವರ್ಷದ ಹಿಂದೆ ಸಮುದ್ರದಂತೆ ನಾನು ವಾಪಸ್ ಬರುತ್ತೇನೆ ಎಂದು ಮಾಡಿದ್ದ ಶಪಥವನ್ನು ಈಡೇರಿಸಿದ್ದಾರೆ. ಇದನ್ನೂ ಓದಿ: ವೈವಾಹಿಕ ಜೀವನಕ್ಕೆ ಕಾಲಿಟ್ಟ ನಾಗಚೈತನ್ಯ, ಶೋಭಿತಾ – ನಾಗಾರ್ಜುನ ಭಾವುಕ
Advertisement
Advertisement
Advertisement
ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಹೊರಬಿದ್ದು ಬರೋಬ್ಬರಿ 12 ದಿನಗಳು ಕಳೆದ ಬಳಿಕ ಮಹಾಯುತಿ ಸರ್ಕಾರ ರಚನೆಯಾಗುತ್ತಿದೆ. ಬಿಜೆಪಿ, ಶಿವಸೇನೆ ನಡುವೆ ಸಿಎಂ ಕುರ್ಚಿಗಾಗಿ ನಡೆಯುತ್ತಿದ್ದ ಹಾವು ಏಣಿ ಆಟ ಅಂತ್ಯವಾಗಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಆಗಿ ಇಂದು ಬಿಜೆಪಿಯ ದೇವೇಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಸಿಎಂ ಆಗಿದ್ದ ಶಿವಸೇನೆ ನಾಯಕ ಏಕನಾಥ್ ಶಿಂಧೆ (Eknath Shindhe) ಹಾಗೂ ಎನ್‌ಸಿಪಿ ನಾಯಕ ಅಜಿತ್ ಪವಾರ್ (Ajit Pawar) ಡಿಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಇದನ್ನೂ ಓದಿ: ಕೊಲೆ ಕೇಸ್ ಆರೋಪಿ ಕೈಬಿಟ್ಟ ಆರೋಪ; ಇನ್‌ಸ್ಪೆಕ್ಟರ್ ಸೇರಿ 6 ಸಿಬ್ಬಂದಿ ಅಮಾನತು
ಇಂದು ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ತಯಾರಿ ನಡೆದಿದ್ದು, ಸಂಜೆ 5:30ಕ್ಕೆ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಬುಧವಾರ ರಾಜಭವನಕ್ಕೆ ಭೇಟಿ ನೀಡಿದ್ದ ಮಹಾಯುತಿ ಮೈತ್ರಿಕೂಟದ ನಾಯಕರು ಸರಕಾರ ರಚನೆಗೆ ಹಕ್ಕು ಮಂಡಿಸಿದ್ದರು. ರಾಜ್ಯಪಾಲರಿಗೆ ಸರ್ಕಾರ ರಚಿಸಲು ಹಕ್ಕು ಮಂಡಿಸಿದ ನಂತರ, ಮಾತನಾಡಿದ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮಹಾಯುತಿ ಸರ್ಕಾರ ರಚನೆಗೆ ಹಕ್ಕು ಸಾಧಿಸಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ಹೆಸರನ್ನು ಬೆಂಬಲಿಸಿದ್ದಕ್ಕಾಗಿ ಶಿವಸೇನೆ ನಾಯಕ ಏಕನಾಥ್ ಶಿಂಧೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ ಕೂಡ ನನ್ನ ಹೆಸರನ್ನು ಶಿಫಾರಸು ಮಾಡಿದ್ದಾರೆ ಎಂದು ಹೇಳಿದ್ದರು. ಇದನ್ನೂ ಓದಿ: ಬಾಲಕಿಯರ ಮೇಲೆ ಬಾಲಮಂದಿರದ ಅಧೀಕ್ಷಕಿಯಿಂದಲೇ ಹಲ್ಲೆ, ದೌರ್ಜನ್ಯ – ಕ್ರಿಮಿನಲ್ ಕೇಸ್ ದಾಖಲು
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ಸೇರಿದಂತೆ ಬಿಜೆಪಿ ಎನ್‌ಡಿಎ ಆಡಳಿತದ ರಾಜ್ಯಗಳ ಸಿಎಂಗಳು ಭಾಗಿಯಾಗಲಿದ್ದಾರೆ. ಇಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹೊರತುಪಡಿಸಿ ಇನ್ನೂ ಕೆಲವು ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಮೂರು ಪಕ್ಷಗಳ ನಾಯಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: GDP ಯಲ್ಲಿ ಇಡೀ ದೇಶದಲ್ಲಿ ನಾವೇ ನಂಬರ್ ಒನ್ – ಸಿದ್ದರಾಮಯ್ಯ
ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಶಿವಸೇನೆ ನಾಯಕ ಏಕನಾಥ್ ಶಿಂಧೆ ಅವರನ್ನು ಬಿಜೆಪಿ ನಾಯಕರು ಮನವೊಲಿಸಿದ್ದಾರೆ. ಗೃಹಖಾತೆಯ ಜೊತೆಗೆ ಡಿಸಿಎಂ ಆಗಲು ಏಕನಾಥ್ ಶಿಂಧೆ ಅವರು ಒಪ್ಪಿದ್ದಾರೆ ಎನ್ನಲಾಗಿದೆ. ಇನ್ನು ಎನ್‌ಸಿಪಿಯ ಅಜಿತ್ ಪವಾರ್ ಕೂಡ ಇಂದು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಮಹರಾಷ್ಟ್ರದಲ್ಲಿ ಮಹಾಯುತಿ 2.0 ದರ್ಬಾರ್ ಇಂದಿನಿಂದ ಶುರುವಾಗಲಿದೆ. ಇದನ್ನೂ ಓದಿ: ಕೆನರಾ ಬ್ಯಾಂಕ್ ಜೊತೆಗೆ KKRTC ಒಪ್ಪಂದ – ಸಾರಿಗೆ ನೌಕರರಿಗೆ 1 ಕೋಟಿ ಅಪಘಾತ ವಿಮೆ ಯೋಜನೆ ಜಾರಿ