ಮುಂಬೈ: ಮಹಾರಾಷ್ಟ್ರ ಬೀಚ್‍ನಲ್ಲಿ ಎರಡು ದೋಣಿಗಳು ಪತ್ತೆಯಾಗಿದ್ದು ಹೈ ಅಲರ್ಟ್ ಘೋಷಣೆಯಾಗಿದೆ.
ಘಟನೆಗೆ ಸಂಬಂಧಿಸಿ ಸುದ್ದಿಗೋಷ್ಠಿ ನಡೆಸಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಶಸ್ತ್ರಾಸ್ತ್ರಗಳೊಂದಿಗೆ ಮಹಾರಾಷ್ಟ್ರದ ಬೀಚ್‍ನಲ್ಲಿ ಪತ್ತೆಯಾಗಿದ್ದ ದೋಣಿಯು ಆಸ್ಟ್ರೇಲಿಯಾದ ಪ್ರಜೆ ಹನಾ ಲಾಂಡರ್‌ಗನ್‍ಗೆ ಸೇರಿದೆ. ದೋಣಿಯು ಆಸ್ಟ್ರೇಲಿಯಾದಿಂದ ಇಂಗ್ಲೆಂಡ್‍ಗೆ ಹೋಗುತ್ತಿತ್ತು. ಈ ವೇಳೆ ಸಮುದ್ರದಲ್ಲಿ ಇಂಜಿನ್ ಹಾಳಾಗಿದೆ. ಈ ವೇಳೆ ಕೊರಿಯಾದ ಮೂಲಕ ಬೋಟ್‍ನಲ್ಲಿದ್ದ ಜನರನ್ನು ರಕ್ಷಿಸಲಾಯಿತು. ಭಾರೀ ಎತ್ತರದ ಅಲೆಗಳು ಬೀಸುತ್ತಿದ್ದ ಕಾರಣ ಬೋಟ್ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ಆ ಬೋಟ್ ಹರಿಹರೇಶ್ವರ ಬೀಚ್‍ಗೆ ತಲುಪಿದೆ ಎಂದರು.
Advertisement
Advertisement
ದೋಣಿಯಲ್ಲಿ ಮೂರು ಎಕೆ 47 ರೈಫಲ್‍ಗಳು ಪತ್ತೆಯಾಗಿವೆ. ಅರ್ಧ ಮುರಿದ ಸ್ಥಿತಿಯಲ್ಲಿ ದೋಣಿ ಕೋಕನ್ ಕರಾವಳಿಯತ್ತ ಬಂದಿದೆ. ಕೇಂದ್ರೀಯ ಸಂಸ್ಥೆಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಯಾವುದೇ ಘಟನೆಯನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ಘಟನೆಗೆ ಸಂಬಂಧಿಸಿ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಕೂಡ ಕೆಲಸ ಮಾಡುತ್ತಿದೆ. ಅಗತ್ಯ ಬಿದ್ದರೆ ಹೆಚ್ಚುವರಿ ಪಡೆಯನ್ನೂ ನಿಯೋಜಿಸಲಾಗುವುದು. ಮುಂಬರುವ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಇಲಾಖೆಗೆ ಬಿಗಿಭದ್ರತೆಗಳನ್ನು ಕೈಗೊಳ್ಳಲು ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಹೇಳಿದರು.
Advertisement
ಮಹಾರಾಷ್ಟ್ರದ ರಾಯಗಢದಲ್ಲಿ ಹೈ ಅಲರ್ಟ್ ನಡುವೆ, ಎರಡು ದೋಣಿಗಳು ಪತ್ತೆಯಾಗಿವೆ. ಹರಿಹರೇಶ್ವರ ಕಡಲತೀರದಲ್ಲಿ ಒಂದು ದೋಣಿ ಪತ್ತೆಯಾಗಿದ್ದು, ಅದರಲ್ಲಿ ಕಸ್ಟಮ್ ನಿರ್ಮಿತ ಬಾಕ್ಸ್‍ನಲ್ಲಿ 3 ಎಕೆ-47 ರೈಫಲ್‍ಗಳು ಮತ್ತು ಮದ್ದು ಗುಂಡುಗಳು ಪತ್ತೆಯಾಗಿತ್ತು. ಮತ್ತೊಂದು ಭರನ್ ಖೋಲ್ ಕಿನಾರಾ ಬಳಿ ಪತ್ತೆಯಾಗಿದ್ದು, ಅದರಲ್ಲಿ ಲೈಫ್ ಜಾಕೆಟ್ ಮತ್ತು ಕೆಲವು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಆ ದೋಣಿಯಲ್ಲಿ ಕೆಲವು ದಾಖಲೆಗಳು ಕಂಡುಬಂದಿವೆ. ಸರ್ಕಾರಿ ನೌಕರಿ ಕೊಡಿಸುವುದಾಗಿ ಮೋಸ – ಸ್ವಾಮೀಜಿ ಅರೆಸ್ಟ್
ಘಟನೆ ಸಂಬಂಧಿಸಿ ರಾಯಗಢ ಜಿಲ್ಲೆ ಹಾಗೂ ಸಮೀಪದ ಪ್ರದೇಶಗಳಲ್ಲಿ ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ದೋಣಿ ಪತ್ತೆಯಾದ ಸ್ಥಳವು ಮುಂಬೈನಿಂದ 200ಕಿ.ಮೀ ಹಾಗೂ ಪುಣೆಯಿಂದ 120 ಕಿ.ಮೀ ದೂರದಲ್ಲಿದ್ದು, ಗಣೇಶ ಚೌತಿಗೆ ಹಬ್ಬಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಇರುವುವಾಗಲೇ ಶಸ್ತ್ರಾಸ್ತ್ರ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿತ್ತು. ಹಬ್ಬಕ್ಕೂ ಮುನ್ನ ಎಕೆ 47 ಒಳಗೊಂಡ ದೋಣಿ ಪತ್ತೆ – ಮಹಾರಾಷ್ಟ್ರದಲ್ಲಿ ಹೈ ಅಲರ್ಟ್