ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಂಬಂಧ ಉಂಟಾಗಿರುವ ಬಿಕ್ಕಟ್ಟು ಇನ್ನೂ ಶಮನವಾಗಿಲ್ಲ. ಸಿಎಂ ಸ್ಥಾನಕ್ಕೆ ಶಿವಸೇನೆ ಹಿಡಿದಿರುವ ಪಟ್ಟು ಇನ್ನೂ ಸಡಿಲ ಮಾಡಿಲ್ಲ. ಇಂದಿಗೆ ವಿಧಾನಸಭಾ ಅವಧಿಗೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡಿದ್ದಾರೆ.
Submitted my resignation as Maharashtra CM to Hon Governor Bhagat Singh Koshyari ji.
Hon Governor asked me to function as the caretaker CM till the alternative arrangements are made.@BSKoshyari
— Devendra Fadnavis (@Dev_Fadnavis) November 8, 2019
Advertisement
ಇಂದು ಮಧ್ಯಾಹ್ನ ದಕ್ಷಿಣ ಮುಂಬೈನಲ್ಲಿರುವ ರಾಜ್ ಭವನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ದೇವೇಂದ್ರ ಫಡ್ನವೀಸ್ ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವೇಂದ್ರ ಫಡ್ನವೀಸ್, ತಮಗೆ ಇಷ್ಟು ದಿನ ಆಡಳಿತ ನಡೆಸಲು ಅವಕಾಶ ಕೊಟ್ಟಿದ್ದಕ್ಕಾಗಿ ಪ್ರಜೆಗಳಿಗೆ ಧನ್ಯವಾದ ಹೇಳಿದರು. ಜೊತೆಗೆ 5 ವರ್ಷಗಳ ತಮ್ಮ ಸರ್ಕಾರದ ಸಾಧನೆಗಳನ್ನು ತಿಳಿಸಿದರು. ನಾವು ಮಹಾರಾಷ್ಟ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಹಾಗಾಗಿಯೇ ಈ ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷವು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದರು.
Advertisement
Devendra Fadnavis: I have tendered my resignation to the Governor and he has accepted it https://t.co/js247DintG pic.twitter.com/eV0C38Z1Nf
— ANI (@ANI) November 8, 2019
Advertisement
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ. 50 -50 ಸೂತ್ರದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಮೈತ್ರಿ ಮಾಡಿಕೊಂಡಿದ್ದರೂ ಚುನಾವಣಾ ಫಲಿತಾಂಶ ಬಂದ ದಿನವೇ ಶಿವಸೇನೆ ಎಲ್ಲ ಅವಕಾಶಗಳ ಬಾಗಿಲು ತೆರೆಯುತ್ತೇವೆ ಎಂದು ಹೇಳಿದ್ದು ಸರಿಯಲ್ಲ ಎಂದು ನೇರವಾಗಿಯೇ ಹೇಳಿ ಟೀಕಿಸಿದರು.
Advertisement
Devendra Fadnavis: I again want to make it clear that it was never decided that for 2.5 years each the CM post will be shared. There was never a decision on this issue. Even Amit Shah ji and Nitin Gadkari ji said this was never decided pic.twitter.com/h0tIPdgvZq
— ANI (@ANI) November 8, 2019
ನಾವು ಬಾಳಾ ಸಾಹೇಬ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ವಿರುದ್ಧ ಇಲ್ಲಿಯವರೆಗೂ ಮಾತನಾಡಿಲ್ಲ. ಆದರೆ ಶಿವಸೇನೆ ಕಳೆದ 5 ವರ್ಷಗಳಲ್ಲಿ ಹಲವು ಬಾರಿ ನಮ್ಮ ನಾಯಕರ ವಿರುದ್ಧ ಮಾತನಾಡಿದೆ. ಕಳೆದ 10 ದಿನಗಳ ಹಿಂದೆ ಮೋದಿ ವಿರುದ್ಧ ಮಾತನಾಡಿದೆ. ಮೈತ್ರಿ ಮಾಡಿಕೊಂಡ ನಂತರ ನಮ್ಮ ನಾಯಕರ ವಿರುದ್ಧ ಮಾತನಾಡುವುದು ಸರಿಯಲ್ಲ. ಈ ರೀತಿಯ ಭಾಷೆಗಳನ್ನು ಸಹಿಸಲು ನಮ್ಮಿಂದ ಆಗುತ್ತಿಲ್ಲ. ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.
Uddhav Thackeray: I had promised Balasaheb that there will be a Shiv Sena Chief Minister one day, and I will fulfill that promise, I don't need Amit Shah and Devendra Fadnavis for that. pic.twitter.com/F1T1m0mhGn
— ANI (@ANI) November 8, 2019
ಮಹಾರಾಷ್ಟ್ರದಲ್ಲೂ ಕಾಂಗ್ರೆಸ್‍ಗೆ `ಆಪರೇಷನ್ ಕಮಲ’ ಆತಂಕ ಎದುರಾಗಿದೆ. ಏಕಾಂಗಿಯಾಗಿ ಸರ್ಕಾರ ರಚಿಸಲು ಪ್ರಯತ್ನ ಮಾಡ್ತಿರೋ ಬಿಜೆಪಿ, ಕಾಂಗ್ರೆಸ್‍ನ ಒಬ್ಬೊಬ್ಬ ಶಾಸಕನಿಗೆ 50 ಕೋಟಿ ಆಫರ್ ಕೊಟ್ಟಿದೆ ಎಂದು ಕೈ ನಾಯಕರು ಆರೋಪ ಮಾಡಿದ್ದಾರೆ.
Interaction with media in Mumbai… https://t.co/4Ky4bWI4X1
— Devendra Fadnavis (@Dev_Fadnavis) November 8, 2019
ಮುಂಜಾಗ್ರತಾ ಕ್ರಮವಾಗಿ ಶಾಸಕರನ್ನು ರಾಜಸ್ಥಾನದ ಜೈಪುರಕ್ಕೆ ಕಾಂಗ್ರೆಸ್ ಶಿಫ್ಟ್ ಮಾಡಲು ಮುಂದಾಗುತ್ತಿದೆ. ಶಿವಸೇನಾ ಶಾಸಕರು ಕೂಡ ಈಗಾಗ್ಲೇ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿದ್ದಾರೆ. ಶಿವಸೇನಾ ಶಾಸಕರ ಜೊತೆ ಉದ್ಧವ್ ಠಾಕ್ರೆ ಮಾತುಕತೆ ನಡೆಸಿದ್ದಾರೆ. ಇತ್ತ ಎನ್‍ಸಿಪಿ ನೇತಾರ ಶರದ್ ಪವಾರ್ ನಿವಾಸಕ್ಕೆ ಶಿವಸೇನೆಯ ಸಂಜಯ್ ರಾವತ್ ಭೇಟಿ ಕೊಟ್ಟು ಸಭೆ ನಡೆಸುತ್ತಿದ್ದಾರೆ.