Maharashtra | ನೂತನ ಸಚಿವರಿಗೆ ಖಾತೆ ಹಂಚಿಕೆ, ಗೃಹಖಾತೆ ತನ್ನಲ್ಲೇ ಉಳಿಸಿಕೊಂಡ ಬಿಜೆಪಿ – ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌!

Public TV
3 Min Read
Devendra Fadnavis 2

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ 2 ವಾರಗಳ ಬಳಿಕ ದೇವೇಂದ್ರ ಫಡ್ನವಿಸ್‌ (Devendra Fadnavis) ಅವರು ಸಚಿವ ಸಂಪುಟ ಸದಸ್ಯರಿಗೆ ಶನಿವಾರ ಖಾತೆ ಹಂಚಿಕೆ ಮಾಡಿದ್ದಾರೆ.

ಗೃಹ ಇಲಾಖೆ, ಇಂಧನ ಇಲಾಖೆ ಹಾಗೂ ಸಾಮಾನ್ಯ ಆಡಳಿತ ಖಾತೆ ಸೇರಿದಂತೆ ಅನೇಕ ಪ್ರಬಲ ಖಾತೆಗಳನ್ನು ಬಿಜೆಪಿ ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಉಪ ಮುಖ್ಯಮಂತ್ರಿ ಏಕನಾಥ ಶಿಂಧೆ (Eknath Shinde) ಅವರಿಗೆ ನಗರಾಭಿವೃದ್ಧಿ, ವಸತಿ ಮತ್ತು ಲೋಕೋಪಯೋಗಿ ಇಲಾಖೆಗಳ ಉಸ್ತುವಾರಿ ವಹಿಸಿದ್ದರೆ, ಮತ್ತೋರ್ವ ಉಪ ಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರಿಗೆ ಹಣಕಾಸು, ಅಬಕಾರಿ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಇದನ್ನೂ ಓದಿ: Punjab | ಮೊಹಾಲಿಯಲ್ಲಿ ಬಹುಮಹಡಿ ಕಟ್ಟಡ ಕುಸಿದು ಮಹಿಳೆ ಸಾವು – ಸಿಎಂ ಭಗವಂತ್‌ ಮಾನ್‌ ಕಂಬನಿ

Devendra Fadnavis 1 1

ಉಳಿದಂತೆ ಉದಯ್ ಸಾಮಂತ್ ಅವರಿಗೆ ಕೈಗಾರಿಕೆ. ಪಂಕಜಾ ಮುಂಡೆ ಅವರಿಗೆ ಪರಿಸರ, ಮಾಣಿಕ್ರಾವ್ ಕೊಕಾಟೆ ಅವರಿಗೆ ಕೃಷಿ ಖಾತೆಗಳನ್ನು ನೀಡಲಾಗಿದೆ. ಧನಂಜಯ್ ಮುಂಡೆ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು. ಅಶೋಕ್ ಅವರಿಗೆ ಬುಡಕಟ್ಟು ಅಭಿವೃದ್ಧಿ, ಆಶಿಶ್ ಶೆಲಾರ್ ಅವರಿಗೆ ಐಟಿ ಮತ್ತು ಸಂಸ್ಕೃತಿ ಇಲಾಖೆಯ ಉಸ್ತುವಾರಿ ನೀಡಲಾಗಿದೆ. ಇದನ್ನೂ ಓದಿ: Bengaluru| ಓವರ್‌ಟೇಕ್ ಮಾಡಲು ಹೋಗಿ ಫ್ಲೈಓವರ್ ತಡೆಗೋಡೆಗೆ ಕಾರು ಡಿಕ್ಕಿ – ಮೂವರು ಗಂಭೀರ

ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಡ ಭರ್ಜರಿ ಗೆಲುವು ಸಾಧಿಸಿತು. ಆ ನಂತರ ದೇವೇಂದ್ರ ಫಡ್ನವಿಸ್‌ ಸಿಎಂ ಆಗಿ, ಏಕನಾಥ್‌ ಶಿಂಧೆ, ಅಜಿತ್‌ ಪವಾರ್‌ ಡಿಸಿಎಂಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ಸಚಿವರಿಗೆ ಖಾತೆಗಳನ್ನ ಹಂಚಿಕೆ ಮಾಡಲಾಗಿದ್ದು, ಅದರ ಕಂಪ್ಲೀಟ್‌ ಲಿಸ್ಟ್‌ ಈ ಕೆಳಕಂಡಂತಿದೆ. ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವು – ಗಂಗಾವತಿ ಆಸ್ಪತ್ರೆಗೆ ಮುಗಿಬಿದ್ದ ಮಹಿಳೆಯರು

Devendra Fadnavis 1

ಬಿಜೆಪಿ ಸಚಿವರಿಗೆ ಹಂಚಿಕೆಯಾಗಿರುವ ಖಾತೆಗಳು

  • ಚಂದ್ರಶೇಖರ ಬಾವನಕುಳೆ – ಕಂದಾಯ
  • ರಾಧಾಕೃಷ್ಣ ವಿಖೆ ಪಾಟೀಲ್ – ಜಲ ಸಂಪನ್ಮೂಲ, ಕೃಷ್ಣಾ ಮತ್ತು ಗೋದಾವರಿ ಕಣಿವೆ ಅಭಿವೃದ್ಧಿ ನಿಗಮ
  • ಚಂದ್ರಕಾಂತ್ ಪಾಟೀಲ್ – ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ಸಂಸದೀಯ ವ್ಯವಹಾರ
  • ಗಿರೀಶ್ ಮಹಾಜನ್ – ಜಲ ಸಂಪನ್ಮೂಲ, ವಿದರ್ಭ, ತಾಪಿ, ಕೊಂಕಣ ಅಭಿವೃದ್ಧಿ ನಿಗಮ ಮತ್ತು ವಿಪತ್ತು ನಿರ್ವಹಣೆ
  • ಗಣೇಶ್ ನಾಯಕ್ – ಅರಣ್ಯ, ಮಂಗಲ್ ಪ್ರಭಾತ್ ಲೋಧಾ ಕೌಶಲ್ಯ ಅಭಿವೃದ್ಧಿ, ಉದ್ಯೋಗ, ಉದ್ಯಮಶೀಲತೆ ಮತ್ತು ನಾವೀನ್ಯತೆ
  • ಜಯಕುಮಾರ್ ರಾವಲ್ – ಮಾರ್ಕೆಟಿಂಗ್ ಮತ್ತು ಪ್ರೋಟೋಕಾಲ್
  • ಪಂಕಜಾ ಮುಂಡೆ – ಪರಿಸರ ಮತ್ತು ಹವಾಮಾನ ಬದಲಾವಣೆ, ಪಶುಸಂಗೋಪನೆ, ಅತುಲ್ ಸೇವಾ ಒಬಿಸಿ ಕಲ್ಯಾಣ, ಡೈರಿ ಅಭಿವೃದ್ಧಿ ಮತ್ತು ನವೀಕರಿಸಬಹುದಾದ ಇಂಧನ.
  • ಅಶೋಕ್ ಉಯಿಕೆ – ಬುಡಕಟ್ಟು ಅಭಿವೃದ್ಧಿ, ಆಶಿಶ್ ಶೆಲಾರ್ ಸಾಂಸ್ಕೃತಿಕ ವ್ಯವಹಾರಗಳು ಮತ್ತು ಮಾಹಿತಿ ತಂತ್ರಜ್ಞಾನ
  • ಶಿವೇಂದ್ರಸಿನ್ಹ ಭೋಸಲೆ – ಸಾರ್ವಜನಿಕ ಕಾರ್ಯ (ಪಬ್ಲಿಕ್‌ ವರ್ಕ್‌).
  • ಜಯಕುಮಾರ್ ಗೋರ್ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
  • ಸಂಜಯ್ ಸಾವ್ಕರೆ – ಜವಳಿ
  • ನಿತೇಶ್ ರಾಣೆ – ಮೀನುಗಾರಿಕೆ ಮತ್ತು ಬಂದರು
  • ಆಕಾಶ್ ಫಂಡ್ಕರ್ – ಕಾರ್ಮಿಕ ಇಲಾಖೆ

ಶಿವಸೇನೆ (ಶಿಂಧೆ ಬಣ) ಸಚಿವರ ಖಾತೆಗಳು

  • ಗುಲಾಬ್ರಾವ್ ಪಾಟೀಲ್ – ನೀರು ಸರಬರಾಜು ಮತ್ತು ನೈರ್ಮಲ್ಯ
  • ದಾದಾಜಿ ಭೂಸೆ – ಶಾಲಾ ಶಿಕ್ಷಣ
  • ಸಂಜಯ್ ರಾಥೋಡ್ – ಮಣ್ಣು ಮತ್ತು ಜಲ ಸಂರಕ್ಷಣೆ,
  • ಉದಯ್ ಸಾಮಂತ್ – ಕೈಗಾರಿಕೆ ಮತ್ತು ಮರಾಠಿ ಭಾಷೆ
  • ಶಂಭುರಾಜ್ ದೇಸಾಯಿ – ಪ್ರವಾಸೋದ್ಯಮ, ಗಣಿಗಾರಿಕೆ, ಮಾಜಿ ಸೈನಿಕರ ಕಲ್ಯಾಣ ಇಲಾಖೆ
  • ಸಂಜಯ್ ಶಿರ್ಸತ್ – ಸಾಮಾಜಿಕ ನ್ಯಾಯ, ಪ್ರತಾಪ್ ಸರ್ನಾಯಕ್ ಸಾರಿಗೆ
  • ಭಾರತ್ ಗೊಗವಾಲೆ – ಉದ್ಯೋಗ ಖಾತರಿ, ತೋಟಗಾರಿಕೆ, ಸಾಲ್ಟ್‌ಪ್ಯಾನ್‌ ಲ್ಯಾಂಡ್‌ ಅಭಿವೃದ್ಧಿ
  • ಪ್ರಕಾಶ್ ಅಬಿತ್ಕರ್ – ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ

NCP (ಅಜಿತ್‌ ಪವಾರ್‌ ಬಣ) ಖಾತೆಗಳು

  • ಹಸನ್ ಮುಶ್ರೀಫ್ – ವೈದ್ಯಕೀಯ ಶಿಕ್ಷಣ
  • ಧನಂಜಯ್ ಮುಂಡೆ – ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ರಕ್ಷಣೆ
  • ದತ್ತಾತ್ರೇ ಭರ್ನೆ – ಕ್ರೀಡೆ, ಯುವ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಔಕಾಫ್
  • ಅದಿತಿ ತತ್ಕರೆ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
  • ಮಾಣಿಕ್ರಾವ್ ಕೊಕಾಟೆ – ಕೃಷಿ
  • ನರಹರಿ ಜಿರ್ವಾಲ್ – ಆಹಾರ ಮತ್ತು ಔಷಧ ಆಡಳಿತ, ವಿಶೇಷ ನೆರವು ಖಾತೆ
  • ಮಕರಂದ್ ಪಾಟೀಲ್ – ಪರಿಹಾರ ಮತ್ತು ಪುನರ್ವಸತಿ
  • ಬಾಬಾಸಾಹೇಬ್ ಪಾಟೀಲ್ – ಸಹಕಾರ ಖಾತೆ

Share This Article