– ಅದ್ಧೂರಿ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಸಾಕ್ಷಿ
ಮುಂಬೈ: ಮಹಾರಾಷ್ಟ್ರದಲ್ಲಿ (Maharashtra) ಮಹಾಯುತಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. 3ನೇ ಬಾರಿಗೆ ಬಿಜೆಪಿಯ ದೇವೇಂದ್ರ ಫಡ್ನವಿಸ್ (Devendra Fadnavis) ರಾಜ್ಯಭಾರ ಶುರುವಾಗಿದೆ. ಮುಂಬೈನ ಆಜಾದ್ ಮೈದಾನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್, ಉಪಮುಖ್ಯಮಂತ್ರಿಗಳಾಗಿ ಏಕನಾಥ್ ಶಿಂಧೆ (Eknath Shinde) ಮತ್ತು ಅಜಿತ್ ಪವಾರ್ (Ajit Pawar) ಪ್ರಮಾಣ ವಚನ ಸ್ವೀಕರಿಸಿದರು.
Swearing-in ceremony of the new government in Maharashtra. https://t.co/JLlYAJYeUX
— BJP (@BJP4India) December 5, 2024
ಮೂವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ರು. ಈ ಕ್ಷಣಕ್ಕೆ ಅಮಿತ್ ಶಾ, ರಾಜನಾಥ್ ಸಿಂಗ್, ಜೆಪಿ ನಡ್ಡಾ, ನಿರ್ಮಲಾ ಸೀತಾರಾಮನ್, ಹೆಚ್.ಡಿ ಕುಮಾರಸ್ವಾಮಿ, ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್, ಚಂದ್ರಬಾಬು ನಾಯ್ಡು ಸೇರಿ 19 ರಾಜ್ಯಗಳ ಸಿಎಂಗಳು ಸಾಕ್ಷಿಯಾದ್ರು.
ಅವರಷ್ಟೇ ಅಲ್ಲ, ಬಾಲಿವುಡ್, ಕ್ರಿಕೆಟ್ ಲೋಕದ ಸೆಲೆಬ್ರಿಟಿಗಳು, ಉದ್ಯಮಿಗಳು ಕೂಡ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದ್ರು. 40 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ರು. ಸದ್ಯಕ್ಕೆ ಇಂದು ಮೂವರಷ್ಟೇ ಪ್ರಮಾಣ ವಚನ ಸ್ವೀಕರಿಸಿದ್ದು, ಶೀಘ್ರವೇ ಪೂರ್ಣ ಪ್ರಮಾಣದ ಮಂತ್ರಿ ಮಂಡಲ ಅಸ್ತಿತ್ವಕ್ಕೆ ಬರಲಿದೆ. ನಂತರ ಖಾತೆಗಳ ಹಂಚಿಕೆ ಆಗಲಿದೆ.