ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅನುದಾನ ತಾರತಮ್ಯ ಸಂಘರ್ಷ ಜೋರಾಗಿದೆ. ರಾಜರಾಜೇಶ್ವರಿ ನಗರದಲ್ಲಿ (Rajarajeshwari Nagar) ಕಾಮಗಾರಿಗಳು ಅರ್ಧಕ್ಕೆ ನಿಂತ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಬಿಜೆಪಿ ನಾಯಕರು (BJP Leaders) ಇಂದು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದ್ದಾರೆ. ಅನುದಾನ ನೀಡದೇ ಇದ್ದರೆ ಸರ್ಕಾರದ ವಿರುದ್ಧ ಮೂರು ದಿನ ಸತ್ಯಾಗ್ರಹ ಮಾಡುವುದಾಗಿ ಬಿಎಸ್‌ವೈ ಎಚ್ಚರಿಕೆ ನೀಡಿದ್ದಾರೆ.
ಆರ್‌ಆರ್ ನಗರಕ್ಕೆ ಬೊಮ್ಮಾಯಿ (Basavaraj Bommai) ಸರ್ಕಾರ ನೀಡಿದ್ದ 126 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಹಿಂಪಡೆದು ಕಾಂಗ್ರೆಸ್ ಶಾಸಕರ (Congress Government) ಕ್ಷೇತ್ರಕ್ಕೆ ಹಂಚಿತ್ತು. ಈ ತಾರತಮ್ಯವನ್ನು ಕ್ಷೇತ್ರದ ಶಾಸಕ, ಮಾಜಿ ಮಂತ್ರಿ ಮುನಿರತ್ನ (Munirathna) ತಿಂಗಳ ಹಿಂದೆಯೇ ಪ್ರಶ್ನಿಸಿದ್ದರು.
- Advertisement
ಗಾಂಧಿ ಪ್ರತಿಮೆ ಮುಂದೆ ಧರಣಿಗೆ ಕುಳಿತಿದ್ದರು. ಅಲ್ಲದೇ ಬೆಂಗಳೂರು ಅಭಿವೃದ್ಧಿ ಮಂತ್ರಿ ಡಿಕೆ ಶಿವಕುಮಾರ್ (DK Shivakumar) ಕಾಲಿಗೆ ಬಿದ್ದು ಕ್ಷೇತ್ರದ ಅಭಿವೃದ್ಧಿ ಸಹಕರಿಸಿ. ಅನುದಾನ ವಾಪಸ್ ಕೊಡಿ ಎಂದು ಕೋರಿದ್ದರು.
- Advertisement
ಮನವಿ ಮಾಡಿ ತಿಂಗಳು ಕಳೆದರೂ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಪರಿಣಾಮ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳು ಪೂರ್ಣಗೊಳ್ಳದೇ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಈ ಬೆಳವಣಿಗೆಯನ್ನು ವಿಪಕ್ಷ ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಇದನ್ನೂ ಓದಿ: ರಾಜ್ಯ ಸರ್ಕಾರ 10 ಸಾವಿರ ಕೋಟಿ ಬರ ಪರಿಹಾರ ಘೋಷಣೆ ಮಾಡದಿದ್ರೆ ಬಿಜೆಪಿಯಿಂದ ವಿಧಾನಸೌಧ ಮುತ್ತಿಗೆ: ಕೋಟ ಎಚ್ಚರಿಕೆ
ಮಾಜಿ ಮಂತ್ರಿ ಮುನಿರತ್ನ, ಅಶ್ವಥ್‌ನಾರಾಯಣ್, ಸಂಸದ ಪಿಸಿ ಮೋಹನ್ ಜೊತೆಗೂಡಿ ಮಾಜಿ ಸಿಎಂ ಯಡಿಯೂರಪ್ಪ ಆರ್‌ಆರ್ ನಗರ ಕ್ಷೇತ್ರ ಪ್ರದಕ್ಷಿಣೆ ಮಾಡಿದರು. ಅನುದಾನ ಇಲ್ಲದೇ ಸ್ಥಗಿತಗೊಂಡ ಅರ್ಧಂಬರ್ಧ ಕಾಮಗಾರಿಗಳನ್ನು ಪರಿಶೀಲಿಸಿ ಸ್ಥಳೀಯರಿಂದಲೂ ಸಮಸ್ಯೆಗಳನ್ನು ಆಲಿಸಿದರು. ರಾಜ್ಯ ಸರ್ಕಾರ ಸೇಡಿನ ರಾಜಕೀಯ ಮಾಡುತ್ತಿದೆ. ಕೂಡಲೇ ಅನುದಾನ ರಿಲೀಸ್ ಮಾಡದೇ ಇದ್ದರೆ ಇದರ ವಿರುದ್ಧ ಸತ್ಯಾಗ್ರಹ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಯಾವೆಲ್ಲ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ?
*ಪಿಇಎಸ್ ಕಾಲೇಜ್ ಬಳಿ ಗ್ರೇಡ್ ಸಪರೇಟರ್ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಪರಿಣಾಮ ಟ್ರಾಫಿಕ್ ಸಮಸ್ಯೆ ತೀವ್ರಗೊಂಡಿದೆ.
*ಹೊಸಕೆರೆಹಳ್ಳಿ ಕೆರೆ ಅಭಿವೃದ್ಧಿ, ಕೆರೆಕೋಡಿ ರಸ್ತೆ ಕಾಮಗಾರಿ ನಿಂತಿದ್ದು, 42 ಕೋಟಿ ರೂ. ಅನುದಾನ ವಾಪಸ್ ಮಾಡಲಾಗಿದೆ.
*ಬೇಮೆಲ್ ಲೇಔಟ್ ಬಳಿ ವೈಟ್ ಟಾಪಿಂಗ್ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಟ್ರಾಫಿಕ್ ಸಮಸ್ಯೆ ತೀವ್ರಗೊಂಡಿದೆ.
*ರಾಜರಾಜೇಶ್ವರಿನಗರ ಆರ್ಚ್ ಬಳಿ ಸಿಗ್ನಲ್ ಫ್ರೀ ಕಾರಿಡಾರ್ ಕಾಮಗಾರಿ ಅಪೂರ್ಣ.
*ಉಲ್ಲಾಳ ಜಂಕ್ಷನ್‌ನಲ್ಲಿ ಗ್ರೇಡ್ ಸಪರೇಟರ್ ಕಾಮಗಾರಿ ಅಪೂರ್ಣ.
*ಮಲ್ಲತಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಅಪೂರ್ಣವಾಗಿದೆ. 81 ಕೋಟಿ ರೂ. ಅನುದಾನ ಘೋಷಣೆಯಾಗಿದ್ದರೂ ಮಂಜೂರಾಗಿಲ್ಲ.
ಬಿಎಸ್‌ವೈ ಹೇಳಿದ್ದೇನು?
ಮುಂದಾದ್ರೂ ವೈಯಕ್ತಿಕ ದ್ವೇಷ ಮಾಡಬೇಡಿ. ಅಭಿವೃದ್ಧಿ ಕಾರ್ಯದ ಕಡೆಗೆ ಸರ್ಕಾರ ಗಮನ ಕೊಡಬೇಕು. ಈ ಕ್ಷೇತ್ರದಲ್ಲಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಅಭಿವೃದ್ಧಿ ಕಾರ್ಯಕ್ಕೆ ಕೊಡಲಿ ಪೆಟ್ಟು ಕೊಡಲಾಗಿದೆ. ಈ ಕ್ಷೇತ್ರ ಮಾತ್ರವಲ್ಲ ಹಲವು ಕ್ಷೇತ್ರಗಳ ಸ್ಥಿತಿ ಇದೇ ಆಗಿದೆ. ಗುತ್ತಿಗೆದಾರರು ಕೆಲಸಕ್ಕೆ ಬರಲು ಒಪ್ಪ್ಪುತ್ತಿಲ್ಲ. ಗುತ್ತಿಗೆದಾರರಿಂದ 8% ಕಮಿಷನ್ ಕೇಳುತ್ತಿದ್ದಾರೆ. ಸರ್ಕಾರದ ತಾರತಮ್ಯ, ಸೇಡಿನ ರಾಜಕೀಯ ನೀತಿ ವಿರುದ್ಧ ನಾನು ಮೂರು ಸತ್ಯಾಗ್ರಹ ಮಾಡುತ್ತೇನೆ.
ಮುನಿರತ್ನ ಹೇಳಿದ್ದೇನು?
ಕ್ಷೇತ್ರದ 126 ಕೋಟಿ ಅನುದಾನ ನನಗೆ ಇನ್ನೂ ಹಿಂತಿರುಗಿಸಿಲ್ಲ. ಖುದ್ದು ಯಡಿಯೂರಪ್ಪ ಬಂದು ಕ್ಷೇತ್ರ ವೀಕ್ಷಿಸಿ ದ್ವೇಷದ ರಾಜಕೀಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಾವ್ಯಾರೂ ಶಾಶ್ವತ ಅಲ್ಲ, ಒಟ್ಟಾಗಿ ಕೆಲಸ ಮಾಡೋಣ ಅಂತಾ ನನ್ನಾಸೆ.
ಡಿಕೆ ಶಿವಕುಮಾರ್ ಹೇಳಿದ್ದೇನು?
ಬಹಳ ಸಂತೋಷ. ಬಿಎಸ್ ಯಡಿಯೂರಪ್ಪನವರಿಗೆ ಲೋಕಾಯುಕ್ತ ರಿಪೋರ್ಟ್, ಬಸವರಾಜ ಬೊಮ್ಮಾಯಿ ವರದಿ ಎರಡನ್ನೂ ಕಳುಹಿಸಿಕೊಡುತ್ತೇನೆ.