ಹುಬ್ಬಳ್ಳಿ/ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದಲ್ಲಿ (Yeshwanthpur) ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಕೆಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ಅಲ್ಲದೆ ತಾತ್ಕಾಲಿಕವಾಗಿ ಕೆಲವು ರೈಲುಗಳನ್ನು ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೇ ಇಲಾಖೆ ವಿಭಾಗೀಯ ಕಚೇರಿ (South Western Railway Division) ಮಾಹಿತಿ ನೀಡಿದೆ.ಇದನ್ನೂ ಓದಿ: ಏಪ್ರಿಲ್ 1 ರಿಂದ ಮಾರುತಿ ಸುಝುಕಿ ಕಂಪನಿ ಕಾರುಗಳು ದುಬಾರಿ
ಯಾವ್ಯಾವ ರೈಲುಗಳು ರದ್ದು?
ಏ.4 – ರೈ.ಸಂಖ್ಯೆ 12291 ಯಶವಂತಪುರ-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್
ಏ.5 – ರೈ.ಸಂಖ್ಯೆ 12292 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಯಶವಂತಪುರ ಎಕ್ಸ್‌ಪ್ರೆಸ್
ಏ.4 – ರೈ.ಸಂಖ್ಯೆ 16573 ಯಶವಂತಪುರ-ಪುದುಚೇರಿ ಎಕ್ಸ್‌ಪ್ರೆಸ್
ಏ.5 – ರೈ.ಸಂಖ್ಯೆ 16574 ಪುದುಚೇರಿ-ಯಶವಂತಪುರ ಎಕ್ಸ್‌ಪ್ರೆಸ್
ಏ.5 – ರೈ.ಸಂಖ್ಯೆ 16577 ಯಶವಂತಪುರ-ಬೀದರ್ ಎಕ್ಸ್‌ಪ್ರೆಸ್
ಏ.6 – ರೈ.ಸಂಖ್ಯೆ 16578 ಬೀದರ್-ಯಶವಂತಪುರ ಎಕ್ಸ್‌ಪ್ರೆಸ್
ಏ.3 & ಏ.10 – ರೈಲು ಸಂಖ್ಯೆ 16541 ಯಶವಂತಪುರ-ಪಂಢರಪುರ ಎಕ್ಸ್‌ಪ್ರೆಸ್
ಏ.4 & ಏ.11 – ರೈಲು ಸಂಖ್ಯೆ 16542 ಪಂಢರಪುರ-ಯಶವಂತಪುರ ಎಕ್ಸ್‌ಪ್ರೆಸ್
ರೈಲುಗಳ ಟರ್ಮಿನಲ್ ಮತ್ತು ಮಾರ್ಗ ಬದಲಾವಣೆ:
ರೈಲು ಸಂಖ್ಯೆ 16511/16512 ಕೆಎಸ್‌ಆರ್ ಬೆಂಗಳೂರು ಹಾಗೂ ಕಣ್ಣೂರು-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲುಗಳ ಟರ್ಮಿನಲ್ ಮತ್ತು ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.
1. ರೈಲು ಸಂಖ್ಯೆ 16511 ಕೆಎಸ್‌ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ರಾತ್ರಿ 8:00 ಗಂಟೆಗೆ ಹೊರಟು, ಬಾಣಸವಾಡಿ, ಹೆಬ್ಬಾಳ ಮತ್ತು ಚಿಕ್ಕಬಾಣಾವರ ಮಾರ್ಗದ ಮೂಲಕ ಸಂಚರಿಸಲಿದೆ.
2. ರೈಲು ಸಂಖ್ಯೆ 16512 ಕಣ್ಣೂರು-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಚಿಕ್ಕಬಾಣಾವರ, ಹೆಬ್ಬಾಳ, ಬಾಣಸವಾಡಿ ಮಾರ್ಗದ ಮೂಲಕ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ. ಈ ರೈಲು ಕೆಎಸ್‌ಆರ್ ಬೆಂಗಳೂರಿನ ಬದಲು ಎಸ್‌ಎಂವಿಟಿಯಲ್ಲಿ ತನ್ನ ಪ್ರಯಾಣವನ್ನು ಅಂತ್ಯಗೊಳಿಸಲಿದೆ. ಈ ರೈಲು ಬೆಳಿಗ್ಗೆ 07:45ಕ್ಕೆ ಎಸ್‌ಎಂವಿಟಿಯಿಂದ ಬೆಂಗಳೂರಿಗೆ ಆಗಮಿಸಲಿದೆ.ಇದನ್ನೂ ಓದಿ: ಮಮ್ಮುಟ್ಟಿ ಆರೋಗ್ಯವಾಗಿದ್ದಾರೆ: ಸುಳ್ಳು ವದಂತಿಗೆ ತೆರೆ ಎಳೆದ ಪಿ.ಆರ್ ಟೀಮ್