ಚಿಕ್ಕಬಳ್ಳಾಪುರ: ಜಿಲ್ಲೆಗೆ ಇಂದು ಸಿಎಂ ಸಿದ್ದರಾಮಯ್ಯ (Sidlaghatta), ಡಿಸಿಎಂ ಡಿಕೆಶಿ ಭೇಟಿ ನೀಡಲಿದ್ದಾರೆ. ಜೆಡಿಎಸ್ ಶಾಸಕ ರವಿಕುಮಾರ್ ಕ್ಷೇತ್ರದಲ್ಲೇ ಕಾಂಗ್ರೆಸ್ ಸರ್ಕಾರದ ಅಭಿವೃದ್ದಿ ಶಕ್ತಿ ಪ್ರದರ್ಶನಕ್ಕೆ ಬೃಹತ್ ವೇದಿಕೆ ಸಿದ್ಧವಾಗಿದೆ.
ಸರಿಸುಮಾರು 200 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯ ಜೊತೆಗೆ ಶಿಡ್ಲಘಟ್ಟ (Sidlaghatta) ಪಟ್ಟಣಕ್ಕೆ ರಾಮಸಮುದ್ರ ಕೆರೆಯಿಂದ ಕುಡಿಯುವ ನೀರು ಒದಗಿಸುವ ಬಹು ನೀರಿಕ್ಷಿತ ಯೋಜನೆ, ಹೆಚ್‌ಎನ್ ವ್ಯಾಲಿ 3ನೇ ಹಂತದಲ್ಲಿ 164 ಕೆರೆಗಳಿಗೆ ನೀರು ಹರಿಸುವ ಯೋಜನೆ ಸೇರಿದಂತೆ 2,000 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಗಾಟನೆ, ಶಂಕುಸ್ಥಾಪನೆ, ಹಾಗೂ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಸಿಎಂ Vs ಡಿಸಿಎಂ ಫೈಟ್ ನಡುವೆ 3ನೇ ಪವರ್ ಸೆಂಟರ್ ಸಕ್ರಿಯ – ಮತ್ತೆ ಜೋರಾದ ದಲಿತ ಸಿಎಂ ಕೂಗು
ಕುರ್ಚಿ ಕದನ ನಡುವೆ ಇಬ್ಬರು ನಾಯಕರು ಎದುರಾಗುತ್ತಿದ್ದು, ಇಬ್ಬರ ನಡೆ ಮೇಲೆ ಎಲ್ಲರ ಕುತೂಹಲ ಕಣ್ಣು ನೆಟ್ಟಿದೆ. ಇನ್ನು. ಸಿಎಂ ಆಗಮಿಸುವ ಹಿನ್ನೆಲೆ ಜಿಲ್ಲೆಯ ರೈತ ಪರ ಸಂಘಟನೆಗಳು ಸಹ ಹೋರಾಟಕ್ಕಿಳಿದಿವೆ. ಇದಕ್ಕೆ ಬಿಗಿಭದ್ರತೆಯನ್ನು ಪೊಲೀಸರು ಕೈಗೊಂಡಿದ್ದಾರೆ. ಇದನ್ನೂ ಓದಿ: Dubai Tejas Crash| ಸಮವಸ್ತ್ರ ಧರಿಸಿ ಪತಿಗೆ ಸೆಲ್ಯೂಟ್ ಹೊಡೆದ ಪತ್ನಿ
