ಬೆಂಗಳೂರು: ರಾಜ್ಯದಲ್ಲಿ ಅಭಿವೃದ್ದಿ ಕುಂಠಿತವಾಗಿ ಸಿಎಂ, ಡಿಸಿಎಂ, ಸಚಿವರು ಇದರ ಬಗ್ಗೆ ಮೊದಲು ಉತ್ತರ ಕೊಡಲಿ. ಆಮೇಲೆ ಜೆಡಿಎಸ್ ಜಾತ್ಯಾತೀತ ಪಕ್ಷ ಅಲ್ಲ ಅನ್ನೋ ಬಗ್ಗೆ ಮಾತಾಡಲಿ ಅಂತ ಕಾಂಗ್ರೆಸ್ ನಾಯಕರ ವಿರುದ್ಧ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ವಾಗ್ದಾಳಿ ನಡೆಸಿದ್ದಾರೆ.
Advertisement
ಜೆಡಿಎಸ್ (JDS) ಜಾತ್ಯಾತೀತ ಪಕ್ಷವಾಗಿ ಉಳಿದಿಲ್ಲ ಎಂಬ ಸಿಎಂ, ಡಿಸಿಎಂ, ಸಚಿವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಜಾತ್ಯಾತೀತ ಅನ್ನೋದು ಪ್ರಶ್ನೆ ಅಲ್ಲ. ಕರ್ನಾಟಕದಲ್ಲಿ ಕನ್ನಡಿಗರು, ಜನರು ನೋವುಗಳನ್ನ ಅನುಭವಿಸುತ್ತಿದ್ದಾರೆ. ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತಗೊಂಡಿದೆ. ಒಐಂಗಳಿಗೆ ಕರೆ ಮಾಡಿ ಕೇಳಿ ಕ್ಷೇತ್ರಗಳಿಗೆ ಅನುದಾನ ಕೊಡೋಕೆ ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ. ಇದರ ಬಗ್ಗೆ ಮೊದಲು ಕಾಂಗ್ರೆಸ್ ಅವರು ಉತ್ತರ ಕೊಡಲಿ ಅಂತ ವಾಗ್ದಾಳಿ ನಡೆಸಿದರು.
Advertisement
Advertisement
ಜನರೇ ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ಗೆ (Congress) ಕರ್ನಾಟಕದ ಜನತೆಯೇ ಉತ್ತರ ಕೊಡ್ತಾರೆ. 28 ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಗೆ ಕರ್ನಾಟಕದ ಜನತೆ ಆಶೀರ್ವಾದ ಮಾಡ್ತಾರೆ ಅಂತ ಕಾಂಗ್ರೆಸ್ ಗೆ ಮನವರಿಗೆ ಆಗಿದೆ. ಹೀಗಾಗಿ ಹೀಗೆಲ್ಲ ಮಾತಾಡ್ತಾ ಇದ್ದಾರೆ. ಇದರ ಬಗ್ಗೆ ನಾನು ಚರ್ಚೆ ಮಾಡೊಲ್ಲ ಅಂತ ಸಿಎಂ, ಡಿಸಿಎಂ, ಸಚಿವರ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ವಿವಾದಾತ್ಮಕ ಹೇಳಿಕೆ ನೀಡಬೇಡಿ, ವಿಪಕ್ಷಗಳ ಗಿಮಿಕ್‍ಗೆ ಸಿಲುಕಿಕೊಳ್ಳಬೇಡಿ: ಮೋದಿ ಸಲಹೆ
Advertisement
ಇನ್ನು ರಾಮಮಂದಿರ (Ram Mandir) ವಿಚಾರವಾಗಿ ಕಾಂಗ್ರೆಸ್ ರಾಜಕೀಯ ಮಾಡ್ತಿರೋದಕ್ಕೆ ಆಕ್ರೋಶ ಹೊರಹಾಕಿದ ಅವರು, ರಾಮಮಂದರಿ ವಿಚಾರದಲ್ಲಿ ರಾಜಕೀಯ ಮಾಡೋದು ಸೂಕ್ತ ಅಲ್ಲ. ಯಾವುದೇ ರಾಜಕೀಯ ಪಕ್ಷಗಳು ರಾಜಕೀಯ ಮಾಡಬಾರದು. ರಾಮಮಂದಿರ ಅನ್ನೋದು ಹೆಮ್ಮೆಯ ಕ್ಷಣ ಇದು. ನನ್ನ ಅಭಿಪ್ರಾಯದಲ್ಲಿ ಯಾರು ರಾಜಕೀಯ ಮಾಡಬಾರದು ಅಂತ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.