ಬೆಂಗಳೂರು: ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ತಲೆದೋರಿದ್ದ ಗೊಂದಲಕ್ಕೆ ತೆರೆಬಿದ್ದಿದ್ದು, ಸಚಿವ ಸಂಪುಟ ರಚೆನೆಯಲ್ಲಿ ಇಂಧನ ಇಲಾಖೆಯನ್ನು ಒತ್ತಾಯ ಪೂರ್ವಕವಾಗಿ ಜೆಡಿಎಸ್ ತೆಗೆದುಕೊಳ್ಳುವಲ್ಲಿ ದೇವೇಗೌಡರ ಯಾವುದೇ ಹಸ್ತಕ್ಷೇಪವಿಲ್ಲವೆಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ರೇವಣ್ಣ ಹಾಗೂ ಡಿಕೆಶಿ ನಡುವಿನ ಇಂಧನ ಖಾತೆ ಜಟಾಪಟಿಯು ಸತ್ಯಕ್ಕೆ ದೂರವಾದ ಮಾತು ಇದರಲ್ಲಿ ದೇವೇಗೌಡರ ಯಾವುದೇ ಮಾಸ್ಟರ್ ಪ್ಲ್ಯಾನ್ ಇಲ್ಲ. ಆದರೆ ಇಬ್ಬರಿಗೂ ಇಂಧನ ಇಲಾಖೆ ಆಸಕ್ತಿ ಇದ್ದಿದ್ದು ನಿಜ ಎಂದರು.
Advertisement
ವೇಣುಗೋಪಾಲ್ ಖಾತೆ ಹಂಚಿಕೆ ಪಟ್ಟಿ ತೆಗೆದುಕೊಂಡು ದೇವೇಗೌಡರ ಜತೆ ಮಾತುಕತೆ ನಡೆಸಿದ್ದಾರೆ. ಸಂಪುಟ ರಚನೆ ವಿಚಾರದಲ್ಲಿ ದೇವೇಗೌಡರು ಮೂಗು ತೂರಿಸಿದ್ದಾರೆ ರೇವಣ್ಣಗಾಗಿ ಮಧ್ಯಪ್ರವೇಶ ಮಾಡಿದ್ದಾರೆ ಅನ್ನೋದು ಸುಳ್ಳು ಎಂದು ಹೇಳಿದರು.
Advertisement
ಕಾಂಗ್ರೆಸ್‍ನ ಕೇಂದ್ರ ನಾಯಕರಿಗೂ ಈ ವಿಚಾರ ಗೊತ್ತಿದೆ. ಹಣಕಾಸು ಇಲಾಖೆ ಕೇಳಿದ್ದು ನಿಜ ಆದರೆ ಬೇರೆ ಖಾತೆ ವಿಚಾರದಲ್ಲಿ ಜಟಾಪಟಿ ಇಲ್ಲ, ಜೆಡಿಎಸ್ ಒತ್ತಾಯದಿಂದ ಯಾವುದೇ ಖಾತೆ ಪಡೆದಿಲ್ಲವೆಂದು ಸ್ಪಷ್ಟನೆ ನೀಡಿದರು.
Advertisement
ಕೇಂದ್ರ ಸರ್ಕಾರ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ವಿಚಾರ ಅಧಿಸೂಚನೆ ಹೊರಡಿಸಲು ಸಮಯಾವಕಾಶ ಕೇಳಿತ್ತು. ನಿನ್ನೆ ಅಧಿಸೂಚನೆ ಹೊರಡಿಸಿದ್ದು, ಈ ಬಗ್ಗೆ ಕಾನೂನು ತಜ್ಞರ ಜತೆ ಚರ್ಚೆ ಮಾಡಿ ಬಳಿಕ ರಾಜ್ಯದ ನಿಲುವು ತಿಳಿಸುತ್ತೇವೆ ಎಂದು ಹೇಳಿದರು.
Advertisement
ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಹೊಸ ಬಜೆಟ್ ಮಂಡನೆಯಾಗಬೇಕು ಇದಕ್ಕೆ ಪೂರಕವಾಗಿ ಮೂರ್ನಾಲ್ಕು ದಿನಗಳಲ್ಲಿ ಬಜೆಟ್ ನ ಸಿದ್ಧತಾ ಸಭೆ ನಡೆಸಿ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಹಾಗೂ ಹಿಂದಿನ ಸರ್ಕಾರಗಳ ಯೋಜನೆಗಳನ್ನು ಒಳಗೊಂಡಂತೆ ಬಜೆಟ್ ಸಿದ್ಧಪಡಿಸಲು ಜಂಟಿ ಅಧಿವೇಶನ ಕರೆಯಲಾಗುವುದೆಂದು ತಿಳಿಸಿದರು.ಇದನ್ನೂ ಓದಿ:ಒಂದು ಕಾಲ್, ಒಂದು ಡೋಸ್, ಒಂದು ಒಪ್ಪಂದ- ಚೆಕ್ ಕೊಟ್ಟು ಗೆದ್ದ ಎಚ್‍ಡಿಡಿ