ಹಾಸನ: ಬಿಜೆಪಿ, ಕಾಂಗ್ರೆಸ್ ಎಷ್ಟೇ ಕುಣಿದಾಡಿದ್ರೂ ಮುಂದೆ ಜೆಡಿಎಸ್ ಅಧಿಕಾರ ಮಾಡುತ್ತೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.
ಹಾಸನದಲ್ಲಿ ನಡೆದ ಜನತಾ ಜಲಧಾರೆ ಸಮಾವೇಶದಲ್ಲಿ ಮಾತನಾಡಿದ ಅವರು, ನಿಖಿಲ್, ಸೂರಜ್ ಜೆಡಿಎಸ್ ಸ್ವತ್ತಲ್ಲ, ರಾಜ್ಯದ ಸ್ವತ್ತು. ಹಳೇ ಭೂಕೈಲಾಸವನ್ನು ಹೊಸ ಪ್ರಿಂಟ್ ಹಾಕಿಕೊಂಡು ಹೊರಟಿದ್ದೇವೆ. ಹಾಸನ ಜಿಲ್ಲೆಯ ಬಗ್ಗೆ ನಾನು 1967 ರಿಂದ ನೋಡಿದ್ದೇನೆ. ಹಾಸನ ಜಿಲ್ಲೆ ರಾಜ್ಯಕ್ಕೆ ಹೋರಾಟ ಮಾಡುವ ಗಂಡಸರನ್ನು ಹುಟ್ಟಿಸಿರುವ ಜಿಲ್ಲೆ. ಬಿಜೆಪಿ, ಕಾಂಗ್ರೆಸ್ ಎಷ್ಟೇ ಕುಣಿದಾಡಿದ್ರೂ ಮುಂದೆ ಜೆಡಿಎಸ್ ಅಧಿಕಾರ ಮಾಡುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮದುವೆ ಮನೆಯಿಂದ ಮಸಣ ಸೇರಿದ ಒಂದೇ ಊರಿನ 7 ಜನ – ಶೋಕ ಸಾಗರದಲ್ಲಿ ಗ್ರಾಮ
Advertisement
Advertisement
ಇದೇ ವೇಳೆ ಮಾತನಾಡಿದ ಅವರು, ವಾಜಪೇಯಿ ಒಳ್ಳೆಯವರು. ಆರ್‌ಎಸ್‍ಎಸ್‍ನಲ್ಲೂ ಒಳ್ಳೆಯವರಿದ್ದಾರೆ. ನಾನೂ ಕೂಡ ಕೆಲ ಬಿಜೆಪಿ ಅವರ ಜೊತೆ ಒಡನಾಟ ಇಟ್ಕೊಂಡಿದ್ದೆ. ಅಂದಿನ ಬಿಜೆಪಿ ನಾಯಕರ ಗುಣ ಇಂದು ಇದ್ಯಾ? ಕೆ.ಎಸ್.ಈಶ್ವರಪ್ಪ ಮನೆಯಲ್ಲಿ ದುಡ್ಡು ಎಣಿಸಲು ಮಷಿನ್ ಅನ್ನೇ ಇಟ್ಟುಕೊಂಡಿದ್ದಾರೆ. 40% ತೆಗೆದುಕೊಂಡು ಸಂತೋಷ್ ಸಾವಿಗೆ ಕಾರಣರಾದ್ರು. ಅವನ ಮನೆಗೆ ಹಿಂದೂ ಮುಖಂಡ ಮುತಾಲಿಕ್ ಹೋಗಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರಿಗೆ ವಯಸ್ಸಾಗಿರಬಹುದು. ಆದ್ರೆ ತಲೆ ಮಾತ್ರ 30 ವರ್ಷದ ಹುಡುಗನಂತೆ ಯೋಚಿಸುತ್ತೆ ಎಂದು ಪ್ರಶಂಸಿಸಿದರು.
Advertisement
Advertisement
ಮಾಧ್ಯಮ ಸ್ನೇಹಿತರೆ, ನೀವು ಬಳ್ಳಿ ನಾವು ಕಾಯಿ. ನಮ್ಮನ್ನು ರಕ್ಷಣೆ ಮಾಡಿ. ದೇಶದಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಯ ಬಿಟೀಂ ಎಂದಿದ್ದಾರೆ. ನಿಮ್ಮನ್ನು ಬಾದಾಮಿಗೆ ಕರೆದುಕೊಂಡು ಹೋಗಿದ್ಯಾರು. ಮೈಸೂರಲ್ಲಿ 300 ಓಟೀಂ ಗೆಲ್ಲಿಸಿದ್ಯಾರು. ಹಾಸನದಲ್ಲಿ ಕಾಂಗ್ರೆಸ್‍ನವರು ಬಿಜೆಪಿಗೆ ವೋಟು ಹಾಕಿದ್ದಕ್ಕೆ ಗೆದ್ರು. ಈಗ ಹೇಳಿ ಬಿಟೀಂ ಯಾರು? ಮಾಜಿ ಸಿಎಂ ಕುಮಾರಸ್ವಾಮಿಗೆ ಪ್ರಶ್ನೆ ಮಾಡಿದ ಹಾಗೆ ನನಗೆ ಮಾಡಬೇಡಿ ಎಂದು ತಿರುಗೇಟು ಕೊಟ್ಟರು.
ನಾನು ಚರಿತ್ರೆ ಬರೆದವನ್ನು ಎಲ್ಲವನ್ನೂ ಬಿಚ್ಚಿಡುತ್ತೇನೆ. ನಾನು ಕೇವಲ ಮುಸ್ಲಿಂರ ನಾಯಕನಲ್ಲ. ನಾನು ಈ ರಾಜ್ಯದ ಜನರ ದಾಸ. ನಾನು ಜೋಳಿಗೆ ಹಾಕಿಕೊಂಡು ಹೊರಟಿದ್ದೇನೆ. ನಾವು ಭಿಕ್ಷೆ ಕೇಳುತ್ತಿದ್ದೇವೆ, ಜನ ನಮಗೆ ಭಿಕ್ಷೆ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನಿಮ್ಮ ಹೃದಯವೇ ನನ್ನ ಸಾಮ್ರಾಜ್ಯ: ಅಭಿಮಾನಿಗಳಿಗೆ ಸುಂದರ ಕಥೆ ಹೇಳಿದ ರಾಕಿಭಾಯ್
ಶಿವಲಿಂಗೇಗೌಡ, ರಾಮಸ್ವಾಮಿ ಬಂದಿಲ್ಲ ಎಂದು ಕೇಳಿದ್ರು. ಆದರೆ ಅವರು ಬಂದಿಲ್ಲ, ಆದ್ರೆ ಎಲ್ಲಿ ಹೋಗ್ತಾರೆ ನೋಡೋಣ. ಹಳೇ ಮೈಸೂರು ಭಾಗಕ್ಕೆ ಈಗಾಗಲೇ ಬೇಲಿ ಹಾಕಿದ್ದೇವೆ. ಮುಂದೆ ತೋರಿಸುತ್ತೇವೆ ಸಾಬ್ರು ಚಿತ್ರ ಹೇಗೆ ತೋರಿಸ್ತಾರೆ ನೋಡಿವ್ರಂತೆ ಎಂದು ಮಾತನಾಡಿದರು.