ಬೆಂಗಳೂರು: ದೇವೇಗೌಡರದ್ದು (H.D.Deve Gowda) 420 ಕುಟುಂಬ ಅಲ್ಲ, ಅದು ಪೆನ್‌ಡ್ರೈವ್ ಕುಟುಂಬ ಎಂದು ಸಂಸದ ಡಿ.ಕೆ.ಸುರೇಶ್ (D.K.Suresh) ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ (H.D.Kumaraswamy) ಏನೇ ಹೇಳಿರಲಿ. ಅವರ ಕುಟುಂಬವನ್ನು ನಾನು 420 ಅಂತ ಕರೆಯಲ್ಲ. ಮಾಜಿ ಪ್ರಧಾನಿ ಕುಟುಂಬವನ್ನ 420 ಅಂತ ಕರೆಯಲ್ಲ. ಅವರ ಅಭಿಮಾನಿಗಳಿಗೆ ಬೇಸರ ಆಗಬಹುದು. ಆ ಕುಟುಂಬವನ್ನು ಇಡೀ ದೇಶದ ಜನ ಪೆನ್‌ಡ್ರೈವ್ ಕುಟುಂಬ ಎನ್ನುತ್ತಿದ್ದಾರೆ. ತೆನೆ ಹೊತ್ತ ಮಹಿಳೆ ಅಲ್ಲಾ, ಈಗ ಪೆನ್‌ಡ್ರೈವ್ ಹೊತ್ತ ಮಹಿಳೆ ಅಂತಾ ಜನ ಮಾತಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಹೆಚ್.ಡಿ.ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ
ಕೆಣಕಿದವರನ್ನ ಬಿಡಲ್ಲ ಅಂತಾ ಕುಮಾರಸ್ವಾಮಿ ಅಂದರೆ ಅವರಿಗೆ ಒಳ್ಳೆದಾಗಲಿ. ಸುಳ್ಳಿಗೆ ಮತ್ತೊಂದು ಹೆಸರೇ ಕುಮಾರಸ್ವಾಮಿ. ಅವರ ಅಲಯನ್ಸ್‌ನವರೇ ಪೆನ್‌ಡ್ರೈವ್ ಬಹಿರಂಗ ಮಾಡಿದ್ದಾರೆ. ಅದನ್ನ ಹೇಳೋಕೆ ಆಗ್ತಿಲ್ಲ. ಅದಕ್ಕೆ ಕುಮಾರಸ್ವಾಮಿ ವಿಷಯ ಡೈವರ್ಟ್ ಮಾಡುತ್ತಿದ್ದಾರೆ. ದೇವೇಗೌಡರು ಸಣ್ಣ ಸಣ್ಣ ವಿಚಾರಕ್ಕೂ ಪೆಟಿಶನ್ ಬರಿಯುತ್ತಿದ್ದರು. ಈಗ ಬರೆಯಲಿ ಹಾಗಾದರೆ. ನೂಲಿನಂತೆ ಸೀರೆ ಅಂತಾ ಜನ ಯಾಕೆ ಮಾತಾಡುತ್ತಿದ್ದಾರೆ. ಅವರ ಮನಸ್ಸಿಗೆ ಬೇಕಾದ್ರೆ ಇನ್ನೂ ನಮ್ಮನ್ನ ಬೈದುಕೊಳ್ಳಲಿ. ಹಾಸನದ ಹೆಣ್ಣುಮಕ್ಕಳ ಮರ್ಯಾದೆ ಉಳಿಸಬೇಕು. ಅಷ್ಟೇ ಸಾಕು ನಮಗೆ. ನಾವು ಅವರನ್ನ ಕೆಣಕಿಲ್ಲ. ಅವರ ಮೈತ್ರಿ ಪಾರ್ಟ್ನರ್ ಬಿಡುಗಡೆ ಮಾಡಿರುವುದು ಪೆನ್‌ಡ್ರೈವ್‌ನ. ಅವರ ಮೇಲೆ ಮಾತನಾಡಲು ಧೈರ್ಯ ಇಲ್ಲದೇ ನಮ್ಮ ಮೇಲೆ ಮಾತನಾಡುತ್ತಾರೆ. ಕುಮಾರಸ್ವಾಮಿ ಬೇರೆ ಮಾತನಾಡುವ ಬದಲು ಹಾಸನ ಹೆಣ್ಣುಮಕ್ಕಳ ಮರ್ಯಾದೆ ಉಳಿಸುವ ಬಗ್ಗೆ ಮಾತನಾಡಲಿ. ಅವರ ಕುಟುಂಬದಿಂದ ಆದ ಅನ್ಯಾಯದ ಬಗ್ಗೆ ಮಾತನಾಡಲಿ ಎಂದಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಪ್ರಧಾನಿ ಮೋದಿಯೇ ಹೊಣೆ. ಯಾಕೆಂದರೆ ಬಿಜೆಪಿ ಅವರ ಮೈತ್ರಿ ಪಕ್ಷ. ನಾವು ಕೇಳಬಹುದಲ್ಲ ನೇಹಾ ವಿಚಾರದಲ್ಲಿ ಕಾಂಗ್ರೆಸ್‌ನಾ ಯಾಕೆ ಟಾರ್ಗೆಟ್ ಮಾಡ್ತೀರಾ ಅಂತ. ತಾಳಿ ಬಗ್ಗೆ ಮಾತಾಡುತ್ತಾರೆ. ಕಾಂಗ್ರೆಸ್‌ಗೂ ಅದಕ್ಕೂ ಏನು ಸಂಬಂಧ? ದೇಶದ ಪ್ರಧಾನ ಮಂತ್ರಿ ಎನ್‌ಡಿಎ ಮುಖ್ಯಸ್ಥರು. ಅವರ ಪರವಾಗಿ ಪ್ರಚಾರ ಮಾಡಿದ್ದಾರೆ. ಅವರ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಅದಕ್ಕೆ ಸ್ಪಷ್ಟವಾಗಿ ಉತ್ತರ ಕೊಡಬೇಕು. ಪ್ರಧಾನ ಮಂತ್ರಿಗಳೇ ಇದಕ್ಕೆ ಹೊಣೆ. ಎಲ್ಲಾ ಕಡೆ ಕರ್ನಾಟಕದ ವಿಚಾರಗಳು ಎತ್ತಿಕೊಂಡು ಕರ್ನಾಟಕ ಮಾನ ಮರ್ಯಾದೆ ಹರಾಜು ಹಾಕಲು ಬರುತ್ತದೆ. ಈ ವಿಚಾರವನ್ನು ಪ್ರಧಾನ ಮಂತ್ರಿಗಳು ಯಾಕೆ ಮಾತಾಡಲ್ಲ. ಬಿಜೆಪಿ ಸ್ಥಳೀಯ ಅಧ್ಯಕ್ಷರು ಪತ್ರ ಬರೆದು ತಿಳಿಸಿದ್ದಾರೆ. ಅವರ ಸ್ಕ್ರೀನಿಂಗ್ ಕಮಿಟಿಯಲ್ಲಿ ಚರ್ಚೆ ಆಗಿದೆ. ಕುಮಾರಸ್ವಾಮಿ ಅವರೆ ಹೇಳಿದ್ರು. ಆದರೂ ಟಿಕೆಟ್ ಕೊಟ್ಟಿದ್ದಾರೆ, ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ಹಿಂಪಡೆಯಲು ಕೋರ್ಟ್‌ನಿಂದ ಯಾವುದೇ ಆದೇಶ ಬಂದಿಲ್ಲ: MEA