ಬೆಂಗಳೂರು: ಸದ್ಯ ರಾಜ್ಯ ರಾಜಕೀಯದಲ್ಲಿ ಹೈಡ್ರಾಮಾವೇ ನಡೆಯುತ್ತಿದ್ದು, ಮೈತ್ರಿ ಸರ್ಕಾರ ತನ್ನ ಅಸ್ತಿತ್ವ ಕಳೆದುಕೊಳ್ಳುವ ಆತಂಕದಲ್ಲಿದೆ. ಈ ನಡುವೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಸರ್ಕಾರದ ಉಳಿವಿಗೆ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ದೇವರ ಮೊರೆ ಹೋಗಿದೆ.
Advertisement
ಸರ್ಕಾರ ಅಳಿವಿನಂಚಿನಲ್ಲಿ ಇದ್ದರೂ ಕೊನೆಯ ಆಶಾಕಿರಣ ಸಿಎಂರಲ್ಲಿ ಮೂಡಿದೆ. ಚಂದ್ರಗ್ರಹಣದ ಹೊತ್ತಲ್ಲಿ ಏನಾದರೂ ಪವಾಡ ನಡೆಯಬಹುದು ಅನ್ನೋ ಆಸೆಯಲ್ಲಿ ಸಿಎಂ ಇದ್ದಾರೆ. ಇಂದಿನ ಸುಪ್ರೀಂಕೋರ್ಟ್ ತೀರ್ಪು ಸರ್ಕಾರಕ್ಕೆ ಸಂಜೀವಿನಿ ಆಗುತ್ತಾ ಅಥವಾ ಸರ್ಕಾರದ ಕೊನೆಗೆ ಕಾರಣವಾಗುತ್ತಾ ಅನ್ನೋ ಲೆಕ್ಕಚಾರ ಶುರುವಾಗಿದೆ. ಈ ಮಧ್ಯೆ ಸದಾ ದೇವತಾರಾಧನೆ ಮಾಡೋ ಸಿಎಂ ಕುಟುಂಬ ಚಂದ್ರ ಗ್ರಹಣದಲ್ಲೂ ದೇವರ ಮೊರೆ ಹೋಗಿದ್ದಾರೆ.
Advertisement
Advertisement
ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಸಿಎಂ ಅವರ ಜೆಪಿ ನಗರ ನಿವಾಸ ಹಾಗೂ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಪ್ರತಿ ಅಮಾವಾಸ್ಯೆ, ಪೌರ್ಣಮೆ, ಶುಭ ದಿನದಲ್ಲಿ ಗೌಡರ ಕುಟುಂಬ ದೇವರ ಮೊರೆ ಹೋಗುತ್ತಾರೆ. ಆದರೆ ಈ ಬಾರಿ ಚಂದ್ರ ಗ್ರಹಣದಲ್ಲಿ ಸರ್ಕಾರದ ಮೇಲೆ ಕೆಟ್ಟ ದೃಷ್ಟಿ ಬೀಳದಂತೆ ತಡೆಯಲು ದೇವರ ಮೊರೆ ಹೋಗಿದ್ದಾರೆ.
Advertisement
ತಂದೆ-ಮಗನ ಮನೆಗಳಲ್ಲಿ ಜ್ಯೋತಿಷಿಗಳ ಸಲಹೆ ಮೇರೆಗೆ ವಿಶೇಷ ಪೂಜೆ ನಡೆಸುತ್ತಿದ್ದು, ಸಿಎಂ ಹಾಗೂ ದೇವೇಗೌಡರು ಪೂಜೆಯಲ್ಲಿ ಭಾಗವಹಿಸಲಿದ್ದಾರೆ. ವಿಶೇಷ ಪೂಜೆಯಿಂದಲಾದರೂ ಸರ್ಕಾರಕ್ಕೆ ಸಂಜೀವಿನಿ ಸಿಗುತ್ತಾ? ಅಥವಾ ಸರ್ಕಾರದ ಅಧಿಕಾರಕ್ಕೆ ಪೂರ್ಣ ವಿರಾಮ ಬೀಳುತ್ತಾ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.