ಬೆಂಗಳೂರು: ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನಿಂದ ದೇವೇಗೌಡರು, ಕುಮಾರಸ್ವಾಮಿ ಪಾಠ ಕಲಿಯಬೇಕಿಲ್ಲ ಎಂದು ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ನಬಾರ್ಡ್ ಅನ್ಯಾಯ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಮಾತಾಡಲಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಗರಂ ಆಗಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಿನ್ನೆ ಸಿಎಂ ಮತ್ತು ಮಂತ್ರಿಗಳು ಕೇಂದ್ರ ಹಣಕಾಸು ಸಚಿವರನ್ನ ಭೇಟಿಯಾಗಿದ್ದರು. ಇದರ ಬಗ್ಗೆ ಚರ್ಚೆ ಮಾಡಿದ್ದಾರೆ. ಕೇಂದ್ರ ಸಚಿವರು ಅವರ ಮನವಿ ಬಗ್ಗೆ ಚರ್ಚೆ ಮಾಡಿದ್ದಾರೆ. ಇದರಲ್ಲಿ ನಾನೇನು ಮಾತಾಡಬೇಕು ಎಂದರು.
Advertisement
ಕುಮಾರಸ್ವಾಮಿ, ದೇವೇಗೌಡ ಕರ್ನಾಟಕದ ಅಭಿವೃದ್ಧಿ ವಿಚಾರವಾಗಿ ಮಾತಾಡೊಲ್ಲ ಎಂಬ ಸಿಎಂ ಹೇಳಿಕೆ ಕಿಡಿಕಾರಿದ ಅವರು, ಸಿದ್ದರಾಮಯ್ಯ ಕರ್ನಾಟಕದ ಯಾವ ಹಿತ ಕಾಪಾಡಿದ್ದಾರೆ? ಕರ್ನಾಟಕದ ಹಿತ ಯಾವಾಗ ಕಾಪಾಡಿದ್ದಾರೆ ಇವ್ರು. KSL ಸಂಸ್ಥೆನಾ ಕ್ಲೋಸ್ ಮಾಡಿದ್ರು. HMT ಲ್ಯಾಂಡ್ ಅನ್ನ ತಕರಾರು ತೆಗೆದುಕೊಂಡು ಕೂತಿದ್ದಾರೆ. ಯಾವುದನ್ನ ಇವರು ಕಾಪಾಡಿದ್ದಾರೆ. ಕರ್ನಾಟಕದ ಅಭಿವೃದ್ಧಿ ಬಗ್ಗೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನಿಂದ ದೇವೇಗೌಡರು, ಕುಮಾರಸ್ವಾಮಿ ಕಲಿಬೇಕಿಲ್ಲ. ಅಭಿವೃದ್ಧಿ ಹೇಗೆ ಮಾಡಬಹುದು ಅಂತ ನಾವು ಅಧಿಕಾರದಲ್ಲಿ ಇದ್ದಾಗ ಮಾಡಿ ತೋರಿಸಿದ್ದೇವೆ ಅಂತ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
ಕರ್ನಾಟಕಕ್ಕೆ ಮಾತ್ರ ನಬಾರ್ಡ್ ದುಡ್ಡು ಕಡಿತ ಮಾಡಿಲ್ಲ. ಗುಜರಾತ್ ಸೇರಿ ಹಲವಾರು ರಾಜ್ಯಕ್ಕೆ ಕಡಿಮೆ ಮಾಡಿದ್ದಾರೆ. ಕೆಲವು ಮಾರ್ಪಾಡುಗಳನ್ನು ಆಯಾ ಸಂದರ್ಭಕ್ಕೆ ತಕ್ಕನಾಗಿ ಕೇಂದ್ರ ಸರ್ಕಾರ ಅಂಕಿಅಂಶಗಳ ಮೇಲೆ ಮಾಡ್ತಾರೆ. ಇದರ ಬಗ್ಗೆ ಮನವಿ ನೀವೇ ಕೊಟ್ಟಿದ್ದೀರಾ? ಯಾವ ಕಾರಣಕ್ಕೆ ಆಗಿದೆ ಅಂತ ಹಣಕಾಸು ಸಚಿವರೇ ಹೇಳಿದ್ದಾರೆ ಅನ್ನಿಸುತ್ತೆ. ನನಗೆ ಮತ್ತು ದೇವೇಗೌಡರಿಗೆ ಯಾಕೆ ಪ್ರಶ್ನೆ ಮಾಡ್ತೀರಾ ಅಂತ ಕಿಡಿಕಾರಿದರು.
Advertisement
ಯಾಕೆ ಆಗಿಲ್ಲ ಅಂತ ಜನರ ಮುಂದೆ ನೀವು ಹೇಳಿ. ಜನರು ನಿಮ್ಮನ್ನ 136 ಸೀಟು ಕೊಟ್ಟು ಕೂರಿಸಿರೋದು ಯಾಕೆ? ರೈತರಿಗೆ ಏನು ಅನ್ಯಾಯ ಆಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಕೊಡೋ ಯೋಜನೆ ವಿಸ್ತರಣೆ ಮಾಡಿದ್ದೇವೆ ಅಂತ ಕೇಂದ್ರ ಹೇಳಿದೆ. ಅದನ್ನ ಸಿಎಂ ಜನತೆ ಮುಂದೆ ಇಡಲಿ ಅಂತ ಕುಮಾರಸ್ವಾಮಿ ಸವಾಲ್ ಹಾಕಿದರು.