ಚಿಕ್ಕಮಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಪತ್ನಿ ಚನ್ನಮ್ಮ, ಪುತ್ರ ರೇವಣ್ಣ ಜೊತೆ ಜಿಲ್ಲೆಯ ಶೃಂಗೇರಿಗೆ ಅಗಮಿಸಿದ್ದಾರೆ.
ಹೆಲಿಕ್ಯಾಪ್ಟರ್ ಮೂಲಕ ಶೃಂಗೇರಿಗೆ ಅಗಮಿಸಿದ ಹೆಚ್‍ಡಿಡಿ ಕುಟುಂಬ, ಶೃಂಗೇರಿ ಜಗದ್ಗುರುಗಳಾದ ಭಾರತೀ ತೀರ್ಥ ಸ್ವಾಮೀಜಿ, ವಿಧುಶೇಖರ ಸ್ವಾಮೀಜಿ ಅವರನ್ನ ಭೇಟಿ ಮಾಡಿದ್ದಾರೆ.
Advertisement
Advertisement
ಬಳಿಕ ಶಾರಾದಾಂಬೆಯ ದರ್ಶನ ಪಡೆದಿದ್ದಾರೆ. ನಾಳೆಯಿಂದ ಶ್ರೀ ಮಠದ 150 ಪುರೋಹಿತರ ನೇತೃತ್ವದಲ್ಲಿ ಅತಿ ರುದ್ರ ಮಹಾಯಾಗ ನಡೆಯಲಿದೆ. ಈ ಯಾಗ 12 ದಿನ ನಡೆಯಲಿದ್ದು, ಜನವರಿ 14 ರಂದು ಪೂರ್ಣಾಹುತಿಯಾಗಲಿದೆ.
Advertisement
ಶ್ರೀಮಠದ ಅವರಣದಲ್ಲಿರುವ ಯಾಗ ಮಂಟಪ ನಡೆಯಲಿರುವ ಅತಿ ಮಹಾರುದ್ರಯಾಗವನ್ನು ಕುಟುಂಬ ಹಿತದೃಷ್ಟಿಯಿಂದ ನಡೆಯಲಿದೆ. ಜನವರಿ 14 ರಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ .ಕುಮಾರಸ್ವಾಮಿ ಪೂರ್ಣಾಹುತಿಯಲ್ಲಿ ಭಾಗಿಯಾಗಲಿದ್ದಾರೆ.