ಬೆಂಗಳೂರು: ಮಧ್ಯಂತರ ಚುನಾವಣೆ ತಪ್ಪಿಸಲು, ಸಿದ್ದರಾಮಯ್ಯ ಸಿಎಂ ಕನಸಿಗೆ ಕೊಳ್ಳಿ ಇಡೋಕೆ ಬಿಜೆಪಿ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ನೀಡುತ್ತಿದೆ ಎನ್ನುವ ಚರ್ಚೆ ಜೋರಾಗಿದೆ.
ಈ ಹೊತ್ತಲ್ಲೇ, ಯಡಿಯೂರಪ್ಪ ಅವರ ಸರ್ಕಾರವನ್ನು ಬೀಳಿಸಲು ಹೋಗಲ್ಲ ಅಂತ ಕುಮಾರಸ್ವಾಮಿ ಜೊತೆಗೆ ದೇವೇಗೌಡರೂ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೌದು, ದೇವೇಗೌಡರು ಫೋನ್ ಮಾಡಿದ್ದರು. ಮಾತುಕತೆ ನಡೆಸಿದ್ದೇವೆ. ಅದನ್ನೆಲ್ಲಾ ಮಾಧ್ಯಮದ ಮುಂದೆ ಹೇಳೋಕೆ ಆಗಲ್ಲ ಅಂತ ಹೇಳಿದ್ದರು.
Advertisement
Advertisement
ದೇವೇಗೌಡರು ಕೂಡ ಕುಮಾರಸ್ವಾಮಿ ಏನ್ರೀ ಹೇಳೋದು. ನಾನೇ ಹೇಳ್ತೇನೆ. ಯಡಿಯೂರಪ್ಪ 3 ವರ್ಷ 8 ತಿಂಗಳು ಪೂರೈಸಲಿ ಅಂತ ಹೇಳಿದ್ದೇನೆ ಅದರಲ್ಲಿ ವಿಶೇಷ ಅರ್ಥ ಏನಿದೆ ಅಂತ ನಿನ್ನೆ ಸುದ್ದಿಗೋಷ್ಠಿ ಹೇಳಿದ್ದರು. ಇದನ್ನು ಓದಿ: ಯಡಿಯೂರಪ್ಪ ನಮಗೇನು ಶತ್ರು ಅಲ್ಲ, ರಾಜಕಾರಣದಲ್ಲಿ ಏನು ಬೇಕಾದ್ರೂ ಆಗಬಹುದು – ಹೆಚ್‌ಡಿಡಿ
Advertisement
ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ನಾಯಕರಂತೂ ನಮ್ಮ ಅನುಮಾನ, ಊಹೆಗಳು ನಿಜವಾಗಿವೆ. ಜೆಡಿಎಸ್‌ನಿಂದ ಇನ್ನೇನು ನಿರೀಕ್ಷೆ ಮಾಡೋಕೆ ಆಗುತ್ತೆ ಅಂತ ಲೇವಡಿ ಮಾಡಿತ್ತು. ಈಗ ರಾತ್ರಿ ಮುಗಿದು ಬೆಳಗಾಗುವಷ್ಟರಲ್ಲೇ ಯಡಿಯೂರಪ್ಪ ಅವರೂ, ದೇವೇಗೌಡರೂ ತಮ್ಮ ಹೇಳಿಕೆಗಳ ಬಗ್ಗೆ ಉಲ್ಟಾ ಹೊಡೆದಿದ್ದಾರೆ.
Advertisement
ದೇವೇಗೌಡರ ಜೊತೆಗಿನ ಫೋನ್ ಮಾತುಕತೆ ನಿರಾಕರಿಸಿರುವ ಸಿಎಂ, ದೇವೇಗೌಡ್ರು ಫೋನ್ ಮಾಡಿದ್ರು ಅನ್ನೋ ವಿಷಯದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಮಾಜಿ ಪ್ರಧಾನಿಯಾಗಿ ದೇವೇಗೌಡರಿಗೆ ಯಾವುದು ಸರಿ ಯಾವುದು ತಪ್ಪು ಅಂತ ತೀರ್ಮಾನ ಮಾಡೋ ಶಕ್ತಿ ಇದೆ. ನಾನು ದೇವೇಗೌಡರ ಹೆಸರನ್ನು ಯಾವುದೇ ಸಂದರ್ಭದಲ್ಲಿ ಪ್ರಸ್ತಾಪ ಮಾಡಿಲ್ಲ ಅಂದಿದ್ದಾರೆ. ಇದನ್ನು ಓದಿ: ನಾನು ಎಲ್ಲೂ ಹೆಚ್‌ಡಿಡಿ ಹೆಸರನ್ನು ಪ್ರಸ್ತಾಪಿಸಿಲ್ಲ- ಫೋನ್ ಮಾತುಕತೆ ಕುರಿತು ಬಿಎಸ್‌ವೈ ಯೂಟರ್ನ್
ದೇವೇಗೌಡ್ರು ಸುದ್ದಿಗೋಷ್ಠಿ ನಡೆಸಿ ಯಡಿಯೂರಪ್ಪ ಜೊತೆ ರಾಜಕೀಯ ಮಾತುಕತೆ ನಡೆದಿಲ್ಲ. ಬೆಂಗಳೂರಿನ ಬುಕ್‌ಹೌಸ್‌ಗೆ ಸಂಬಂಧಿಸಿದ ಫೈಲನ್ನ ಸಿಎಂ ತಡೆ ಹಿಡಿದ್ದಿದ್ದರು. ಆಗ ಸಿಎಂ ಸಲಹೆಗಾರ ಲಕ್ಷ್ಮಿ ನಾರಾಯಣ ಅವ್ರಿಗೆ ಮಾತಾಡಿ ಬಳಿಕ ಸಿಎಂ ಜೊತೆ ಮಾತಾಡಿದ್ದೆ ಅಷ್ಟೇ. ಅದು ಬಿಟ್ಟು ಏನು ಬೇರೆ ಮಾತಾಡಿಲ್ಲ ಅಂತ ಸ್ಪಷ್ಟಪಡಿಸಿದ್ರು. ಅಲ್ಲದೆ, ಯಡಿಯೂರಪ್ಪ ಶತ್ರು ಅಲ್ಲ, ಮಾತಾಡಬಾರದು ಅಂತೇನೂ ಇಲ್ಲವಲ್ಲ ಅಂತಲೂ ಹೇಳಿದ್ದಾರೆ.