ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಮೊಮ್ಮಕ್ಕಳಿಗೆ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ ಮೊಮ್ಮಗನಿಗೆ ಕ್ಷೇತ್ರದಾನ ಮಾಡಿದ ದೇವೇಗೌಡರಿಗೆ ಈಗ ಟೆನ್ಶನ್ ಶುರುವಾಗಿದೆ.
ದೇವೇಗೌಡರು ಕಿರಿಯ ಮೊಮ್ಮಗ ನಿಖಿಲ್ ಕುಮಾರಸ್ವಾಮಿಗೆ ಮಂಡ್ಯ ಹಾಗೂ ಹಿರಿಯ ಮೊಮ್ಮಗ ಪ್ರಜ್ವಲ್ ರೇವಣ್ಣನಿಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಇತ್ತ ದೇವೇಗೌಡರು ಮೈಸೂರಿನಿಂದ ನಿಲ್ಲಬೇಕು ಎಂದು ಇಚ್ಛಿಸಿದ್ದರು. ಆದರೆ ಗೌಡರು ಮೈಸೂರು ಕೇಳಿದ್ದರೂ ಕಾಂಗ್ರೆಸ್ ಬಿಟ್ಟು ಕೊಟ್ಟಿಲ್ಲ. ಹೀಗಾಗಿ ಬೆಂಗಳೂರು ಉತ್ತರ ಮತ್ತು ತುಮಕೂರು ಈ ಎರಡು ಕ್ಷೇತ್ರದಲ್ಲಿ ಎಲ್ಲಿ ನಿಲ್ಲಬೇಕೆಂಬ ಬಗ್ಗೆ ಗೊಂದಲ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
Advertisement
Advertisement
ಒಂದು ವೇಳೆ ದೇವೇಗೌಡರು ಬೆಂಗಳೂರು ಉತ್ತರದಲ್ಲಿ ನಿಂತರೆ ಗೆಲುವು ಅಷ್ಟೊಂದು ಸುಲಭವಾಗಿಲ್ಲ ಎಂಬ ಆತಂಕ ಎದುರಾಗಿದ್ದು, ಬೆಂಗಳೂರು ಉತ್ತರದಿಂದ ಸ್ಪರ್ಧೆ ಮಾಡಿದರೆ ಗೆಲುವು ಸಾಧ್ಯನಾ ಎಂದು ಗುಪ್ತಚರ ಇಲಾಖೆ ಮಾಹಿತಿ ಪಡೆಯಲು ಮಾಜಿ ಪ್ರಧಾನಿ ದೇವೇಗೌಡರು ಮುಂದಾಗಿದ್ದಾರೆ. ಅಲ್ಲಿಂದ `ಬೆಂಗಳೂರು ಉತ್ತರ ಸೇಫ್ ಸೀಟು’ ಎಂದು ಬಂದರೆ ಅಲ್ಲಿಯೇ ನಿಲ್ಲಬೇಕು ಎಂಬುದು ದೇವೇಗೌಡರ ಇಂಗಿತವಾಗಿದೆ. ಒಂದು ವೇಳೆ ಇದು ಸೇಫ್ ಅಲ್ಲ ಎಂದು ಬಂದರೆ, ಆಗ ಕಾಂಗ್ರೆಸ್ ಗೆದ್ದಿದ್ದ ತುಮಕೂರಿನಿಂದಲೇ ದೇವೇಗೌಡರ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
Advertisement
Advertisement
ಬೆಂಗಳೂರು ಉತ್ತರದಿಂದ ದೇವೇಗೌಡರು ನಿಂತರೆ ಸದಾನಂದಗೌಡರ ವಿರುದ್ಧ ಸ್ಪರ್ಧೆ ಮಾಡಬೇಕಾಗುತ್ತದೆ. ತುಮಕೂರಿನಲ್ಲಿ ಹಾಲಿ ಸದಸ್ಯರು ಕಾಂಗ್ರೆಸ್ಸಿನವರ ವಿರುದ್ಧ ಸ್ಪರ್ಧೆ ಮಾಡಬೇಕಾಗುತ್ತದೆ. ಸದ್ಯಕ್ಕೆ ದೇವೇಗೌಡರು ಬೆಂಗಳೂರಿನಲ್ಲಿ ಜನರ ಅಭಿಪ್ರಾಯವನ್ನು ಗುಪ್ತಚರ ಇಲಾಖೆಯ ಮೂಲಕ ಮಾಹಿತಿ ಕಲೆಯಾಕುತ್ತಿದ್ದಾರೆ. ಇಲ್ಲಿ ನಿಂತು ಗೆಲ್ಲುವುದು ಕಠಿಣವಾಗುತ್ತದೆ ಎಂದರೆ ತುಮಕೂರಿನಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಇದುವರೆಗೂ ಜೆಡಿಎಸ್ ಈ ಎರಡು ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಯನ್ನು ಇನ್ನೂ ಘೋಷಣೆ ಮಾಡಲಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv