ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದಿಂದ ಮೂರು ಜನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಹೀಗಾಗಿ ಅವರ ಮನೆಯಲ್ಲಿ ಫುಲ್ ಟೈಂ ಪಾಲಿಟಿಕ್ಸ್ ಟೆನ್ಶನ್ ಇರುತ್ತದೆ. ಆದರೂ ಇದರ ಮಧ್ಯೆ ಗೌಡರ ಕುಟುಂಬ ಚುನಾವಣೆ ಸಮಯದಲ್ಲಿ ಫುಲ್ ಹೆಲ್ತ್ ಫಿಟ್‍ನೆಸ್ ಮಂತ್ರ ಪಠಿಸುತ್ತಿದೆ.
ಹೌದು. ತುಮಕೂರು, ಹಾಸನ, ಮಂಡ್ಯ ಎಂದು ಫುಲ್ ಎಲೆಕ್ಷನ್ ಪ್ರಚಾರಕ್ಕೆ ಓಡಾಡುತ್ತಿರುವ ಗೌಡರು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಇವರ ಜೊತೆಗೆ ಸಿಎಂ ಕುಮಾರಸ್ವಾಮಿ ಅವರು ಕೂಡ ಆರೋಗ್ಯದ ಮಂತ್ರ ಜಪಿಸುತ್ತಲೇ ಮಗನಿಗಾಗಿ ಪ್ರಚಾರದ ಹುರುಪಿನಲ್ಲಿದ್ದಾರೆ.
Advertisement
Advertisement
ದೇವೇಗೌಡರು ಮುದ್ದೆ ಬಸ್ಸಾರು ಬಿಟ್ರೆ ಮಾಂಸಹಾರ ಸೇವನೆ ಮಾಡುತ್ತಿಲ್ಲ. ಮಧ್ಯಾಹ್ನ, ಬೆಳಗ್ಗೆ ಹಸಿಕಾಳು ಇದ್ದೇ ಇರುತ್ತದೆ. ದೇವೇಗೌಡರು ಅಪ್ಪಿತಪ್ಪಿಯೂ ಜಿಡ್ಡು ಪದಾರ್ಥ ಮತ್ತು ಸ್ವೀಟ್ ಮುಟ್ಟವಂತಿಲ್ಲ. ನಿತ್ಯ ಬಿಸಿನೀರು ಸೇವನೆ ಮಾಡುತ್ತಾರೆ. ಸಮಯ ಸಿಕ್ಕಾಗ ಪ್ರಾಣಯಾಮ ಮಾಡುತ್ತಾರೆ. ಜೊತೆಗೆ ವೈದ್ಯರು ಕೊಟ್ಟ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಕೂಡ ವಾಕಿಂಗ್, ಮುದ್ದೆಯೂಟ ಮಾಡುತ್ತಾರೆ. ಪ್ರತೀ ದಿನ ಹೆಲ್ತ್ ಚೆಕಪ್ ಇರುತ್ತದೆ. ಮನೆಯಲ್ಲಿ ಇಬ್ಬರು ರಕ್ತದೊತ್ತಡ, ಬಿಪಿ ಶುಗರ್ ಲೆವೆಲ್ ನಿತ್ಯ ಚೆಕ್ ಮಾಡುತ್ತಿದ್ದಾರೆ. ಅಗತ್ಯವಿದ್ದರೆ ಮಾತ್ರ ವೈದ್ಯರ ಸಲಹೆ ಪಡೆದುಕೊಳ್ಳುತ್ತಾರೆ ಎಂದು ಡಾ. ಮಂಜುನಾಥ್ ತಿಳಿಸಿದ್ದಾರೆ.
Advertisement
Advertisement
ರೇವಣ್ಣ ಮಾತ್ರ ಚುನಾವಣೆ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋಗುವ ಅವರು ಅಲ್ಲಿ ಕೊಡುವ ಪ್ರಸಾದ ತಿಂದು ತಿಂದು ಶುಗರ್ ಲೆವಲ್ ಹೆಚ್ಚು ಮಾಡಿಕೊಳ್ಳುತ್ತಾರೆ. ವೈದ್ಯರ ಡಯೆಟ್ ಟಿಪ್ಸ್ ಪಾಲಿಸೋದು ಸ್ವಲ್ಪ ಕಡಿಮೆ. ಇದಕ್ಕಾಗಿ ಚುನಾವಣಾ ಟೈಂನಲ್ಲಿ ಪ್ರಸಾದ ತಿನ್ನೋದು ಸ್ವಲ್ಪ ಕಡಿಮೆ ಮಾಡಿ ಎಂದು ವೈದ್ಯರು ಸಲಹೆ ಕೊಟ್ಟಿದ್ದಾರೆ.