– ಬೆಂಗಳೂರು ಮನೆ, ವಾಪಸ್ ಬಂದಿದ್ದಕ್ಕೆ ಖುಷಿ ಇದೆ ಎಂದ ಕನ್ನಡಿಗ
ಬೆಂಗಳೂರು: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಹಿನ್ನೆಲೆಯಲ್ಲಿ ನಟ, ರೇಡಿಯೋ ಜಾಕಿ ಡ್ಯಾನಿಷ್ ಸೇಟ್ ಅವರು ಆರ್‌ಸಿಬಿ ತಂಡದ ಆಟಗಾರ ದೇವದತ್ ಪಡಿಕ್ಕಲ್ ಸಂದರ್ಶನ ಮಾಡಿದ್ದಾರೆ. ಕನ್ನಡಿಗನಾದ ಪಡಿಕ್ಕಲ್ ಕನ್ನಡವನ್ನು ಸೊಗಸಾಗಿ ಮಾತನಾಡಿದ್ದಾರೆ.
ಆರ್‌ಸಿಬಿ ಇನ್‌ಸೈಡ್ ಶೋನಲ್ಲಿ ಪಡಿಕ್ಕಲ್ ಅವರನ್ನು ‘ಡಿಡಿಪಿ’ ಎಂದು ಸೇಟ್ ಪರಿಚಯಿಸುತ್ತಾರೆ. ಕನ್ನಡದಲ್ಲೇ ಪ್ರಶ್ನೆಗಳನ್ನು ಕೇಳುತ್ತಾರೆ. ‘ಹೇಗಿತ್ತಪ್ಪ ನಾರ್ಥ್ ಇಂಡಿಯಾ ಟೂರ್’ ಎಂದು ಕೇಳ್ತಾರೆ. ಅದಕ್ಕೆ ಪಡಿಕ್ಕಲ್, ‘ತುಂಬಾ ಚೆನ್ನಾಗಿತ್ತು. ಬೆಂಗಳೂರು ನನ್ನ ಮನೆ. ವಾಪಸ್ ಬಂದಿದ್ದಕ್ಕೆ ತುಂಬಾ ಖುಷಿಯಾಗಿದೆ’ ಎಂದು ಕನ್ನಡದಲ್ಲೇ ಹೇಳ್ತಾರೆ.
- Advertisement
- Advertisement
ಮೊದಲು ನೀನು ಯೂತ್‌ಫುಲ್ ರೀತಿ ಮಾತಾಡ್ತಿದ್ದೆ. ಈಗ ಹರ್ಷ ಬೋಗ್ಲೆ ಥರ ಮಾತಾಡ್ತಿದ್ದೀಯಾ ಅಂತ ಕೇಳಿದಾಗ, ‘ಮತ್ತೆ ಹೆಂಗೆ ಮಾತಾಡ್ಬೇಕು’ ಅಂತ ಕನ್ನಡದಲ್ಲೇ ಪಡಿಕ್ಕಲ್ ಮರುಪ್ರಶ್ನೆ ಹಾಕ್ತಾರೆ. ಸ್ವಲ್ಪ ಜಾಲಿ ಆಗಿರು ಎಂದಾಗ, ‘ನಿಮ್ ಹತ್ರ ಜಾಲಿಯಾಗಿರೋಕೆ ಸ್ವಲ್ಪ ಕಷ್ಟ ಇದೆ’ ಅಂತ ಪಡಿಕ್ಕಲ್ ಉತ್ತರಿಸುತ್ತಾರೆ.
ಇನ್‌ಸ್ಟಾದಲ್ಲಿ ಕೊರಿಯನ್ಸ್ ರೀತಿ ಸ್ಟೈಲ್ ಮಾಡ್ತಿದ್ದೀಯಾ ಎಂದು ಕೇಳಿದಾಗ, ‘ಅದೇ ತಾನೆ ಟ್ರೆಂಡ್ ಈಗ’ ಎಂದು ಪಡಿಕ್ಕಲ್ ಉತ್ತರಿಸುತ್ತಾರೆ.
ಯುಗಾದಿ, ದೀಪಾವಳಿಗೆ ನಾರ್ಮಲ್ ಆಗಿ ವಿಶ್ ಮಾಡ್ತೀಯಾ. ಅಂತಾರಾಷ್ಟ್ರೀಯ ವಿಶೇಷ ದಿನಗಳಿಗೆ ವಿಶ್ ಮಾಡು ಎಂದಾಗ, ‘ವಿಶ್ವ ಕಪ್ ಕೇಕ್ ದಿನ.. ವಿಶ್ವ ಶೌಚಾಲಯದ ದಿನ.. ವಿಶ್ವ ಮೊಟ್ಟೆ ದಿನ’ಕ್ಕೆ ಕನ್ನಡದಲ್ಲೇ ವಿಶ್ ಮಾಡಿ ಪಡಿಕ್ಕಲ್ ಗಮನ ಸೆಳೆದಿದ್ದಾರೆ.
ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಹಾಡನ್ನು ಮಾರ್ಪಡಿಸಿ, ಆರ್‌ಸಿಬಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಎಂದು ಸೇಟ್ ಹಾಡುತ್ತಾರೆ. ಅದಕ್ಕೆ ಹೂಂ ಅಂತೀಯಾ.. ಎಂದು ಪಡಿಕ್ಕಲ್ ದನಿಗೂಡಿಸುತ್ತಾರೆ. ಸಂದರ್ಶನವು ಫನ್ ಆಗಿ ಸಾಗುತ್ತದೆ.