– ಪ್ರಕರಣದ ಖಳನಾಯಕರು, ಸಚಿವರು ಉಗ್ರರಂತೆ ವರ್ತಿಸುತ್ತಿದ್ದಾರೆ
ಮಂಡ್ಯ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ವಕೀಲ ದೇವರಾಜೇಗೌಡ (Devarajegowda) ಜೀವಕ್ಕೆ ಕಸ್ಟಡಿಯಲ್ಲಿರುವಾಗಲೇ ಅಪಾಯವಿದೆ ಎಂದು ಮಾಜಿ ಶಾಸಕ ಸುರೇಶಗೌಡ (Sureshgowda) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ. ಈ ವೇಳೆ ಹಲವು ತಿಂಗಳುಗಳ ಕಾಲ ದೇವರಾಜೇಗೌಡರನ್ನು ಕಸ್ಟಡಿಯಲ್ಲೇ ಇಡಲು ಸಂಚು ನಡೆದಿದೆ. ಈ ವೇಳೆ ಅವರ ಜೀವಕ್ಕೆ ದೊಡ್ಡ ಅಪಾಯವಿದೆ. ಇದು ನೂರಕ್ಕೆ ನೂರರಷ್ಟು ಸತ್ಯ. ಪ್ರಕರಣದ ಖಳನಾಯಕರು, ಸಚಿವರು ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಆರೋಪ ಬಂದ್ಮೇಲೆ ಸಂಸದ ತನಿಖೆ ಎದುರಿಸೋದು ಸೂಕ್ತ: ನಿಖಿಲ್ ಕುಮಾರಸ್ವಾಮಿ
ಪೆನ್ ಡ್ರೈವ್ ಪ್ರಕರಣದ (Prajwal Revanna Pendrive case )ಮೂಲ ರೂವಾರಿಗಳಿಗೆ ಸರ್ಕಾರದಿಂದ ರಾಜಾತಿಥ್ಯ ನೀಡಲಾಗುತ್ತಿದೆ. ಇದುವರೆಗೆ ಅವರಿಗೆ ನೋಟಿಸ್ ನೀಡದೆ, ಬಂಧಿಸದೆ ಆಟ ಆಡುತ್ತಿದ್ದಾರೆ. ಇತ್ತ ದೇವರಾಜೇಗೌಡ ಅವರನ್ನು ಷಡ್ಯಂತ್ರ ಮಾಡಿ ಬಂಧನ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಸತ್ಯಾಸತ್ಯತೆ ಬೇಕಿಲ್ಲ. ಸಚಿವರ ಹೆಸರು ಹೇಳಿದ್ರೆ ಪರಿಗಣನೆ ಮಾಡಲ್ಲ. ಮೂಲ ಹುಡುಕಿ ತನಿಖೆಯನ್ನೂ ಮಾಡಲ್ಲ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಮೋದಿ ಅಖಾಡಕ್ಕಿಳಿದಿರುವ ವಾರಣಾಸಿಯ ಇತಿಹಾಸ ಮಾತ್ರವಲ್ಲದೆ ರಾಜಕೀಯವೂ ಕುತೂಹಲಕಾರಿ!