ಬಾಲಿವುಡ್‌ನಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೇಟ್ ಇದೆ- ಸ್ಫೋಟಕ ಹೇಳಿಕೆ ನೀಡಿದ ಶ್ರೀದೇವಿ ಪುತ್ರಿ

Public TV
1 Min Read
janhvi kapoor 1 2

ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ (Janhvi Kapoor) ಇದೀಗ ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಳ್ತಿದ್ದಾರೆ. ಸದ್ಯ ಮೇ 31ಕ್ಕೆ ರಿಲೀಸ್‌ಯಾಗಿರುವ ‘ಮಿಸ್ಟರ್ ಆ್ಯಂಡ್ ಮಿಸಸ್ ಮಹಿ’ (Mr & Mrs Mahi) ಸಿನಿಮಾ ಪ್ರಚಾರದ ವೇಳೆ, ಜಾನ್ವಿ ಕಪೂರ್ ನೀಡಿರುವ ಬಾಲಿವುಡ್ ಮಂದಿಯ ಬಗ್ಗೆ ನೀಡಿರುವ ಸ್ಫೋಟಕ ಹೇಳಿಕೆಯೊಂದು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಕಲ್ಕಿ ಬುಜ್ಜಿಗೆ ಧ್ವನಿಯಾಗಿದ್ದಾರೆ ನಟಿ ಕೀರ್ತಿ ಸುರೇಶ್

janhvi kapoor

ಕೆಲ ದಿನಗಳ ಹಿಂದೆ ನಟಿ ಪ್ರಿಯಾಮಣಿ ಪಾಪರಾಜಿಗಳಿಗೆ ಹಣ ನೀಡಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಕರೆಸಿಕೊಳ್ತಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದರು. ಈ ಜಾನ್ವಿ ಕಪೂರ್ ಕೂಡ ಈ ವಿಚಾರ ಬಗ್ಗೆಯೇ ಮಾತನಾಡಿದ್ದಾರೆ. ಕೆಲ ಸೆಲೆಬ್ರಿಟಿಗಳು ಮೊದಲೇ ಇಂತಹ ಸ್ಥಳಕ್ಕೆ ಬರುತ್ತಿದ್ದೇವೆ. ಫೋಟೋ ಕ್ಲಿಕ್ಕಿಸಲು ಬನ್ನಿ ಎಂದು ಪಾಪರಾಜಿಗಳಿಗೆ ಹೇಳಿರುತ್ತಾರೆ. ಅದರಂತೆ ಅವರು ಕೂಡ ಬರುತ್ತಾರೆ ಎಂದಿದ್ದಾರೆ ನಟಿ.

Janhvi Kapoor 3

ನಾನು ಚಿತ್ರೀಕರಣಕ್ಕೆ ಹೋಗದಿದ್ದಾಗ, ನಾನು ನನ್ನ ವೈಯಕ್ತಿಕ ಕೆಲಸದಲ್ಲಿದ್ದಾಗ ಇವರೆಲ್ಲರ ಕಣ್ಣಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತೇನೆ ಎಂದಿದ್ದಾರೆ ಜಾನ್ವಿ. ಆದರೆ ಅವರಿಗೆ ನನ್ನ ಚಿತ್ರ ಬೇಕೆನಿಸದರೆ ನನ್ನ ಕಾರು ಹಿಂಬಾಲಿಸಿಕೊಂಡು ಬರುತ್ತಾರೆ. ಕಷ್ಟಪಟ್ಟು ನನ್ನ ಚಿತ್ರಗಳನ್ನು ತೆಗೆಯುತ್ತಾರೆ. ಏಕೆಂದರೆ,ಫೋಟೋಗ್ರಾಫರ್ ಪ್ರತಿ ಚಿತ್ರಕ್ಕೆ ಇಷ್ಟೆಂದು ಹಣ ಪಡೆಯುತ್ತಾರೆ ಎಂದಿದ್ದಾರೆ.

Janhvi Kapoor 5

ಬಿಟೌನ್‌ಲ್ಲಿ ಪ್ರತಿಯೊಬ್ಬ ಸೆಲೆಬ್ರಿಟಿಗೂ ಒಂದೊಂದು ರೇಟ್ ಇದೆ. ಸ್ಟಾರ್ ಕಲಾವಿದರು ಆಗಿದ್ದರೆ ಅವರ ಚಿತ್ರಗಳು ದೊಡ್ಡ ಬೆಲೆಗೆ ಸೇಲ್ ಆಗುತ್ತದೆ. ನಿಮ್ಮ ಬೆಲೆ ಹೆಚ್ಚಿದ್ದರೆ, ಅವರೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ, ನಿಮ್ಮ ಕಾರನ್ನು ಹಿಂಬಾಲಿಸುತ್ತಾರೆ. ದೊಡ್ಡ ಸ್ಟಾರ್ ಅಲ್ಲದಿದ್ದರೆ ನೀವೇ ಕರೆ ಮಾಡಿ ಅವರನ್ನು ಕರೆಸಿಕೊಳ್ಳಬೇಕಾಗುತ್ತದೆ. ಈ ರೀತಿ ಮಾಡುವವರು ಇದ್ದಾರೆ ಎಂದು ಜಾನ್ವಿ ಕಪೂರ್ ಬಾಲಿವುಡ್ ಮಂದಿ ಕೆಲಸದ ಬಗ್ಗೆ ಮಾತನಾಡಿದ್ದಾರೆ.

ಅಂದಹಾಗೆ, ಜ್ಯೂ.ಎನ್‌ಟಿಆರ್ ಜೊತೆ ‘ದೇವರ’ ಸಿನಿಮಾ, ರಾಮ್ ಚರಣ್ ಜೊತೆ ಹೊಸ ಸಿನಿಮಾ, ಹಿಂದಿಯಲ್ಲಿ ನಾಲ್ಕೈದು ಪ್ರಾಜೆಕ್ಟ್‌ಗಳಿವೆ.

Share This Article