ಲಂಡನ್: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡು ತಂಡದಿಂದ ಹೊರಗುಳಿದಿರುವ ಟೀಂ ಇಂಡಿಯಾ ಆರಂಭಿಕ ಆಟಗಾರ ಧವನ್ ಜಿಮ್‍ನಲ್ಲಿ ಬೆವರಿಳಿಸಿದ್ದಾರೆ.
ರೆಕ್ಕಗಳೊಂದಿಗೆ ಅಲ್ಲ.. ಸಂಕಲ್ಪದಿಂದ ಹಾರಾಡುತ್ತೇನೆ ಎಂದು ಟ್ವೀಟ್ ಮಾಡಿದ್ದ ಧವನ್, ಗಾಯದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ವಿಶ್ರಾಂತಿ ಪಡೆಯದೆ ಫಿಟ್ನೆಸ್ ಕಾಯ್ದುಕೊಳ್ಳಲು ಜಿಮ್‍ನಲ್ಲಿ ಕಸರತ್ತು ಮಾಡಿದ್ದಾರೆ.
Advertisement
You can make these situations your nightmare or use it an opportunity to bounce back. ????
Thank you for all the recovery messages from everyone. ???? pic.twitter.com/mo86BMQdDA
— Shikhar Dhawan (@SDhawan25) June 14, 2019
Advertisement
33 ವರ್ಷದ ಧವನ್ ತಾವು ಜಿಮ್ ನಲ್ಲಿ ಬೆವರಿಳಿಸುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯದ ಪರಿಸ್ಥಿತಿ ಒಂದು ಕೆಟ್ಟ ಕನಸಿನಂತೆ ಆಗುವ ಸಂದರ್ಭ ಎದುರಾಗಿದ್ದು, ಮತ್ತೆ ಚೇತರಿಸಿಕೊಳ್ಳುವ ಅವಕಾಶ ಇದೆ. ನಾನು ಬೇಗ ಗಾಯದಿಂದ ಚೇತರಿಸಿಕೊಳ್ಳುವಂತೆ ಶುಭ ಕೋರಿದ ಎಲ್ಲರಿಗೂ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.
Advertisement
ಇತ್ತ ಗಾಯಗೊಂಡು 3 ವಾರಗಳ ಕಾಲ ಧವನ್ ವಿಶ್ರಾಂತಿ ಪಡೆದುಕೊಳ್ಳಲು ಸೂಚಿಸಿದ್ದರು. ಇಂಗ್ಲೆಂಡ್‍ನಲ್ಲಿ ತಂಡದೊಂದಿಗೆ ಉಳಿದುಕೊಂಡಿದ್ದಾರೆ. ಈ ಕುರಿತು ನಾಯಕ ಕೊಹ್ಲಿ ಸ್ಪಷ್ಟನೆ ನೀಡಿದ್ದು, ಧವನ್ ಕೈಗೆ ಕೆಲ ವಾರಗಳ ಕಾಲ ಚಿಕಿತ್ಸೆ ಬೇಕಾಗಿದ್ದು, ಟೂರ್ನಿಯ ಲೀಗ್ ಪಂದ್ಯಗಳ ಅಂತ್ಯದಲ್ಲಿ ಅಥವಾ ಸೆಮಿಸ್ ವೇಳೆಗೆ ಮತ್ತೆ ಲಭ್ಯವಾಗುವ ಅವಕಾಶವಿದೆ. ಧವನ್ ಮತ್ತೆ ಆಡಬೇಕು ಎಂದು ಕೋರಿಕೊಳ್ಳುತ್ತಿದ್ದೇನೆ. ನಮ್ಮ ಮುಂದಿನ ಚಿಂತನೆ ಭಾನುವಾರದ ಪಂದ್ಯದತ್ತ ಇದ್ದು, ಸಿದ್ಧತೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
Advertisement
All my wishes and support to #AshwinFoundation– @ashwinravi99 pic.twitter.com/koKoG85a8g
— Shikhar Dhawan (@SDhawan25) June 12, 2019
ಇದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ್ದ ಕೋಚ್ ಸಂಜಯ್ ಬಂಗಾರ್, ಧವನ್ ರನ್ನ ಟೂರ್ನಿಯಿಂದ ಕೈಬಿಡಲು ನಾವು ಸಿದ್ಧರಿಲ್ಲ ಎಂದಿದ್ದಾರೆ. ಇತ್ತ ಟೀಂ ಇಂಡಿಯಾ ಭಾನುವಾರ ಪಾಕಿಸ್ತಾನದೊಂದಿಗೆ ಸೆಣಸಲಿದ್ದು, ಜೂನ್ 22 ರಂದು ಆಘ್ಘಾನಿಸ್ತಾನದ ವಿರುದ್ಧ ಆಡಲಿದೆ.
Kabhi mehek ki tarah hum gulon se udte hain…
Kabhi dhuyein ki tarah hum parbaton se udte hain…
Ye kainchiyaan humein udne se khaak rokengi…
Ke hum paron se nahin hoslon se udte hain…#DrRahatIndori Ji pic.twitter.com/h5wzU2Yl4H
— Shikhar Dhawan (@SDhawan25) June 12, 2019