ನವದೆಹಲಿ: ಸೋಪಿನ ಪುಡಿ, ಶ್ಯಾಂಪೂ ಬಳಸಿ ತಯಾರಾಗುತ್ತಿದ್ದ ಹಾನಿಕಾರಕ ಮದ್ಯವನ್ನು ಗ್ರಾಹಕರಿಗೆ ಕೇವಲ 40 ರೂ.ಗೆ ಮಾರುತ್ತಿದ್ದ ಖದೀಮರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ದೆಹಲಿಯ ರಘುಬೀರ್ ನಗರದಲ್ಲಿ ಶುಕ್ರವಾರ ಪೊಲೀಸರು ಎರಡು ಅಂಗಡಿ ಮೇಲೆ ದಾಳಿ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಮೇಲ್ನೊಟಕ್ಕೆ ದಿನಸಿ ಅಂಗಡಿ ಅಂತ ಬೋರ್ಡ್ ಹಾಕಿಕೊಂಡು ಅಕ್ರಮವಾಗಿ ಡ್ರಮ್‍ಗಟ್ಟಲೆ ಸಾರಾಯಿಯನ್ನು ಇಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಅಂಗಡಿ ಮೇಲೆ ದಾಳಿ ಮಾಡಿದಾಗ ಈ ಸತ್ಯಾಂಶ ಹೊರಬಿದ್ದಿದೆ.
Advertisement
Advertisement
ಅಂಗಡಿಯಲ್ಲಿ ಪತ್ತೆಯಾದ ಸಾರಾಯಿ ತಯಾರಿಕೆಯ ಸಾಮಾಗ್ರಿ ಪಟ್ಟಿಯಲ್ಲಿ ಈ ಮದ್ಯಕ್ಕೆ ಯಾವ್ಯಾವ ಸಾಮಾಗ್ರಿ ಬಳಕೆಯಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಆಗ ಸಾರಾಯಿ ತಯಾರಿಸಲು ಆರೋಪಿಗಳು ಹಾನಿಕಾರಕ ಸೋಪಿನ ಪುಡಿ ಹಾಗೂ ಶ್ಯಾಂಪುಗಳನ್ನು ಬಳಕೆ ಮಾಡುತ್ತಾರೆ ಎಂಬುದು ಬಯಲಾಗಿದೆ. ಅಲ್ಲದೆ ಗ್ರಾಹಕರಿಗೆ ಪ್ರತಿ ಬಾಟಲಿಗೆ ಕೇವಲ 40 ರೂ.ಗೆ ಈ ಸಾರಾಯಿಯನ್ನು ಅಂಗಡಿಯವರು ಮಾರಾಟ ಮಾಡುತ್ತಿದ್ದರು ಎಂಬುದರ ಬಗ್ಗೆ ಕೂಡ ಸಾಕ್ಷಿಗಳು ದೊರಕಿದೆ.
Advertisement
Advertisement
ಆರೋಪಿಗಳಾದ ಜಿಜಾರ್ ಸಿಂಗ್ ಹಾಗೂ ವಿಶಾಲ್ ಎಂಬವರನ್ನು ಪೊಲೀಸರು ಬಂಧಿಸಿದ್ದು, ಸ್ಥಳದಲ್ಲಿದ್ದ ಅಕ್ರಮ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಹಿಂದೆ 2009ರಲ್ಲಿ ಇದೇ ಪ್ರದೇಶದಲ್ಲಿ ಸಾರಾಯಿ ಸೇವಿಸಿ 17ಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದರು. ಆ ಪ್ರಕರಣದಲ್ಲಿ ಜಿಜಾರ್ ಸಿಂಗ್‍ನ ಮಾವನೇ ಆರೋಪಿಯಾಗಿದ್ದನು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv