ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಟೀಕಿಸುವ ಭರದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿವಾದಾತ್ಮಕ ಪೋಸ್ಟ್ ವೊಂದನ್ನ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಆರ್‍ಎಸ್‍ಎಸ್ ಪ್ರಧಾನಿ ಎನ್ನುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದು ರಾಹುಲ್ ಪೋಸ್ಟ್ ಗೆ ಟ್ವಿಟ್ಟರ್ ನಲ್ಲಿ ವಿರೋಧ ವ್ಯಕ್ತವಾಗಿದೆ.
ದೇಶದಲ್ಲಿ ನಿರಾಶ್ರಿತರ ಕೇಂದ್ರ ನಿರ್ಮಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನ ಶೇರ್ ಮಾಡಿರುವ ರಾಹುಲ್ ಗಾಂಧಿ ಆರ್‍ಎಸ್‍ಎಸ್ ಪ್ರಧಾನಮಂತ್ರಿ ಭಾರತ ಮಾತೆಗೆ ಸುಳ್ಳು ಹೇಳಿದ್ದಾರೆ ಎಂದು ಟೀಕಿಸಿದ್ದಾರೆ.
RSS का प्रधानमंत्री भारत माता से झूठ बोलता हैं ।#JhootJhootJhoot pic.twitter.com/XLne46INzH
— Rahul Gandhi (@RahulGandhi) December 26, 2019
ರಾಹುಲ್ ಗಾಂಧಿ ವಿಡಿಯೋ ಒಂದನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಅದರಲ್ಲಿ ಅಸ್ಸಾಂನ ಮಟಿಯಾ ಗ್ರಾಮದಲ್ಲಿ ನಿರಾಶ್ರಿತರ ಕೇಂದ್ರ ಸ್ಥಾಪಿಸುತ್ತಿರುವ ದೃಶ್ಯಗಳಿವೆ. ಗೃಹ ಇಲಾಖೆ ಆರು ಕೋಟಿ ವೆಚ್ಚದಲ್ಲಿ ನಿರಾಶ್ರಿತರ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಡಿಸೆಂಬರ್ ಡೆಡ್ ಲೈನ್ ಆಗಿತ್ತು. ಆದರೆ ಶೇ.70 ಕೆಲಸ ಆಗಿರುವ ಕಾರಣ ಮಾರ್ಚ್ ಮತ್ತೊಂದು ಡೆಡ್ ಲೈನ್ ನೀಡಲಾಗಿದೆ ಎಂದು ವರದಿ ಮಾಡಿದೆ.
ಇದೇ ವಿಡಿಯೋ ಬಳಸಿಕೊಂಡಿರುವ ರಾಹುಲ್ ಗಾಂಧಿ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದು, ಎಲ್ಲವೂ ಸುಳ್ಳು ಸುಳ್ಳು ಸುಳ್ಳು ಎಂದು ವ್ಯಂಗ್ಯ ಮಾಡಿದ್ದಾರೆ.
ಕಳೆದ ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಮಾತನಾಡಿದ್ದ ಮೋದಿ ದೇಶದಲ್ಲಿ ಯಾವುದೇ ನಿರಾಶ್ರಿತರ ಕೇಂದ್ರ ಸ್ಥಾಪನೆ ಮಾಡುತ್ತಿಲ್ಲ. ಬದಲಿಗೆ ಕಾಂಗ್ರೆಸ್ ಮತ್ತು ಅರ್ಬನ್ ನಕ್ಸಲರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.