ಚಾಮರಾಜನಗರ: ಎಗ್ಗಿಲ್ಲದೆ ನಡೆಯುತ್ತಿದ್ದ ಕಲಬೆರಕೆ ಪೆಟ್ರೋಲಿಯಂ ಉತ್ಪನ್ನ ಮಾರಾಟ ಜಾಲ ಪತ್ತೆ ಹಚ್ಚುವಲ್ಲಿ ಚಾಮರಾಜನಗರ ಜಿಲ್ಲೆ ಆಹಾರ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
Advertisement
ಚಾಮರಾಜನಗರ ಜಿಲ್ಲೆಯ ಕರಿಕಲ್ಲು ಕ್ವಾರಿಗಳಿಗೆ ತಮಿಳುನಾಡಿನಿಂದ ಕಲಬೆರಕೆ ಪೆಟ್ರೋಲಿಯಂ ಉತ್ಪನ್ನ ಸರಬರಾಜು ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಕೃಷ್ಣ ಗ್ರಾನೈಟ್‍ಗೆ ಕಲಬೆರಕೆ ಪೆಟ್ರೋಲಿಯಂ ಉತ್ಪನ್ನ ಇಳಿಸುವಾಗ ಆಹಾರ ಇಲಾಖೆ ಅಧಿಕಾರಿಗಳಿಂದ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಜನವರಿ 1ಕ್ಕೆ 10 ವರ್ಷ ಪೂರೈಸುವ ಎಲ್ಲಾ ಡೀಸೆಲ್ ವಾಹನಗಳ ನೋಂದಣಿ ರದ್ದು
Advertisement
Advertisement
ದಾಳಿ ವೇಳೆ 5 ಸಾವಿರ ಲೀಟರ್ ಕಲಬೆರಕೆ ಡೀಸೆಲ್ ತುಂಬಿದ ಟ್ಯಾಂಕರ್ ವಶಪಡಿಸಿಕೊಂಡು, ಚಾಲಕನನ್ನು ಹಿಡಿದು ಅಧಿಕಾರಿಗಳು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಆರು ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಬೂಸ್ಟರ್ ಡೋಸ್ ಅಗತ್ಯತೆ ಬಗ್ಗೆ ಅಧ್ಯಯನ ನಡೆಸಲು ಮೋದಿ ಸೂಚನೆ
Advertisement