Connect with us

ಸರ್ಜಿಕಲ್ ಸ್ಟ್ರೈಕ್‍ನಲ್ಲಿ ಯಾರೆಲ್ಲ ಇದ್ದರು ಅನ್ನೋದು ಈಗ ಬಹಿರಂಗವಾಯ್ತು

ಸರ್ಜಿಕಲ್ ಸ್ಟ್ರೈಕ್‍ನಲ್ಲಿ ಯಾರೆಲ್ಲ ಇದ್ದರು ಅನ್ನೋದು ಈಗ ಬಹಿರಂಗವಾಯ್ತು

ನವದೆಹಲಿ: ಕಳೆದ ವರ್ಷ ಉರಿ ಸೇನಾನೆಲೆಯ ಮೇಲೆ ಪ್ರತೀಕಾರ ತೀರಿಸಿಕೊಳ್ಳೊಲು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರನ್ನು ಸದೆಬಡಿದ ಸರ್ಜಿಕಲ್ ಸ್ಟ್ರೈಕ್ ಯೋಧರಿಗೆ ಕೇಂದ್ರ ಸರ್ಕಾರ ಗಣರಾಜ್ಯೋತ್ಸವದಂದು ಶೌರ್ಯ ಪ್ರಶಸ್ತಿ ನೀಡಿದೆ. ಆದ್ರೆ 19 ಮಂದಿ ಯೋಧರ ಬಗ್ಗೆ ಮಾಹಿತಿಗಳನ್ನ ನೀಡಿರಲಿಲ್ಲ. ಈಗ ವೀರ ಯೋಧರ ಬಗ್ಗೆ ಮಾಹಿತಿ ಹೊರಬಂದಿದೆ.

ಇದನ್ನೂ ಓದಿ: ಸರ್ಜಿಕಲ್ ಸ್ಟ್ರೈಕ್‍ಗೆ ಹೆದರಿ ಪಿಓಕೆಯಿಂದ ಕಾಲ್ಕಿತ್ತ 300 ಉಗ್ರರು

ಸೆಪ್ಟೆಂಬರ್ 29ರಂದು ನಡೆಸಿದ ಸರ್ಜಿಕಲ್ ಸ್ಟ್ರೈಕ್‍ನಲ್ಲಿ 4 ಹಾಗೂ 9ನೇ ಪ್ಯಾರಾ ರೆಜಿಮೆಂಟ್‍ನ ಒಬ್ಬರು ಕರ್ನಲ್, ಐವರು ಮೇಜರ್, ಇಬ್ಬರು ಕ್ಯಾಪ್ಟನ್, ಒಬ್ರು ಸುಬೇದಾರ್, ಇಬ್ಬರು ನೈಬ್ ಸುಬೇದಾರ್, ಮೂವರು ಹವಾಲ್ದಾರ್, ಒಬ್ರು ಲ್ಯಾನ್ಸ್ ನಾಯ್ಕ್, ನಾಲ್ವರು ಪ್ಯಾರಟ್ರೂಪರ್ಸ್ ಸೇರಿ ಒಟ್ಟು 19 ಮಂದಿ ಭಾಗಿಯಾಗಿದ್ದರು ಎಂದು ಪತ್ರಿಕೆಯೊಂದು ವರದಿ ಪ್ರಕಟಿಸಿದೆ.

ಇದನ್ನೂ ಓದಿ: ಸರ್ಜಿಕಲ್ ಸ್ಟ್ರೈಕ್ ಹೇಗಿತ್ತು ಬಳಿಕ ಏನಾಯ್ತು? ಪಾಕಿಸ್ತಾನ ಎಸ್‍ಪಿ ಹೇಳ್ತಾರೆ

ಈ ದಾಳಿಯಲ್ಲಿ ಮೇಜರ್ ರೋಹಿತ್ ಸೂರಿಯದ್ದೇ ಮುಖ್ಯ ಪಾತ್ರ. ಉರಿ ದಾಳಿಗೆ ಸೇಡು ತೀರಿಸಿಕೊಳ್ಳೋಕೆ ಸ್ಕೆಚ್ ಹಾಕಿದ್ದ ನಮ್ಮ ಸೇನೆ ಸೆಪ್ಟೆಂಬರ್ 29ರಂದು ಅಮಾವಾಸ್ಯೆ ರಾತ್ರಿ ಸರ್ಜಿಕಲ್ ಸ್ಟ್ರೈಕ್‍ಗೆ ಮುಹೂರ್ತ ಫಿಕ್ಸ್ ಮಾಡಿದ್ರು. 8 ಮಂದಿ ಯೋಧರ ಜೊತೆ ತೆರಳಿದ್ದ ಸೂರಿ, ಉಗ್ರರ ಗುಂಡಿಗೆಗೆ ಪಿಸುಗುಟ್ಟುವ ದೂರದಿಂದಲೇ ಗುಂಡು ಹೊಕ್ಕಿಸಿದ್ದರು. ಯಾವುದೇ ಕ್ಷಣದಲ್ಲೂ ತನ್ನ ಜೊತೆಗಿದ್ದವರ ಪ್ರಾಣಕ್ಕೆ ಸಂಚಕಾರ ಎದುರಾಗದಂತೆ ಹಾಗೂ ಉಗ್ರರು ಮೇಲ್ಗೈ ಸಾಧಿಸಲು ಆಸ್ಪದ ನೀಡದಂತೆ ಸರ್ಜಿಕಲ್ ಸ್ಟ್ರೈಕ್‍ನ ಯಶಸ್ವಿಯಾಗಿ ಮುಗಿಸಿದ್ರು. ರೋಹಿತ್ ಸೂರಿ ಅವರಿಗೆ ಕೀರ್ತಿ ಚಕ್ರ, ಕರ್ನಲ್ ಹರ್‍ಪ್ರೀತ್ ಸಂಧು ಅವಧಿಗೆ ಯುದ್ಧ ಸೇವಾ ಪದಕ ಸಿಕ್ಕಿದೆ.

ಇದನ್ನೂ ಓದಿ: ಆ 4 ಗಂಟೆಗಳ ಆಪರೇಷನ್ ಟೆರರ್ ಕಾರ್ಯಾಚರಣೆ ನಡೆದಿದ್ದು ಹೀಗೆ…

ಸರ್ಜಿಕಲ್ ಸ್ಟ್ರೈಕ್ ತುಂಬಾ ಕಠಿಣವಾಗಿದ್ದು, ಉಗ್ರರು ಸಹ ಗುಂಡಿನ ದಾಳಿ ನಡೆಸಿದ್ದರು. ಅಟೋಮ್ಯಾಟಿಕ್ ಶಸ್ತ್ರಾಸ್ತ್ರಗಳನ್ನ ಬಳಸಿದ್ದ ಭಾರತೀಯ ಯೋಧರು ಉಗ್ರರ ಅಡುಗುತಾಣಗಳನ್ನ ಧ್ವಂಸ ಮಾಡಿದ್ದರು.

ಇದನ್ನೂ ಓದಿ: ಏನಿದು ಸರ್ಜಿಕಲ್ ಕಾರ್ಯಾಚರಣೆ? ಹೇಗೆ ನಡೆಯುತ್ತದೆ?

Advertisement
Advertisement