ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಟ್ವಿಸ್ಟ್ ಸಿಕ್ಕಿದ್ದು, ಕಾರಿನಲ್ಲಿ 4 ಕ್ಕಿಂತಲೂ ಹೆಚ್ಚಿನ ಮಂದಿ ಪ್ರಯಾಣಿಸುತ್ತಿದ್ದರು ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ. ಆದರೆ ಈಗ ಆ ಇಬ್ಬರು ಯಾರು ಎನ್ನುವುದು ತಿಳಿದು ಬಂದಿದೆ.
ದರ್ಶನ್ ತೂಗುದೀಪ್, ರಾಯ್ ಆಂಥೋಣಿ, ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಜೊತೆ ವಿನಯ್ ಶಂಕರ್ ಹಾಗೂ ಪ್ರಕಾಶ್ ಪ್ರಯಾಣಿಸುತ್ತಿದ್ದರು. ಆದರೆ ದರ್ಶನ್ ಆಪ್ತರು ವಿನಯ್ ಶಂಕರ್ ಮತ್ತು ಪ್ರಕಾಶ್ ಹೆಸರನ್ನು ಗೌಪ್ಯವಾಗಿಟ್ಟಿದ್ದರು. ಈ ಇಬ್ಬರ ಹೆಸರನ್ನು ಗೌಪ್ಯವಾಗಿ ಇಟ್ಟಿದ್ದು ಯಾಕೆ ಎನ್ನುವ ಪ್ರಶ್ನೆ ಈಗ ಎದ್ದಿದೆ. ಇದನ್ನೂ ಓದಿ: ಎಫ್‍ಐಆರ್ ನಲ್ಲಿ 4, ಎಸ್‍ಪಿ ಹೇಳ್ತಾರೆ 5, ಎಂಎಲ್‍ಸಿ ವರದಿಯಲ್ಲಿ 6: ದರ್ಶನ್ ಕಾರಲ್ಲಿ ಇದ್ದವರು ಎಷ್ಟು?
ಪೊಲೀಸ್ ಎಫ್‍ಐಆರ್ ನಲ್ಲಿ ನಾಲ್ಕು ಮಂದಿ ಇದ್ದರೆ, ಆಯುಕ್ತರಾದ ಸುಬ್ರಹ್ಮಣ್ಯೇಶ್ವರ ರಾವ್ ಐದು ಮಂದಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಹೇಳಿಕೆ ನೀಡಿದ್ದರು. ಆದರೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಮೆಡಿಕೋ ಲೀಗಲ್ ಕೇಸ್(ಎಂಎಲ್‍ಸಿ) ವರದಿ ಪ್ರಕಾರ ಕಾರಿನಲ್ಲಿ ಆರು ಮಂದಿ ಪ್ರಯಾಣಿಸಿದ್ದಾರೆ. ಸದ್ಯ ಅವರಲ್ಲಿ ನಾಲ್ವರು ಚಿಕಿತ್ಸೆ ಪಡೆದಿದ್ದಾರೆ. ಇನ್ನಿಬ್ಬರು ಯಾವುದೇ ಗಾಯಗಳಿಲ್ಲದೇ ಆಸ್ಪತ್ರೆಯಲ್ಲಿ ಸಹಜ ತಪಾಸಣೆ ನಿರ್ಗಮಿಸಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ. ಎಂಎಲ್‍ಸಿ ವರದಿಯಲ್ಲಿ ವಿನಯ್ ಶಂಕರ್ ಮತ್ತು ಪ್ರಕಾಶ್‍ಗೆ ಯಾವುದೇ ಗಾಯವಾಗಿಲ್ಲ ಎಂದು ನಮೂದಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv