ಗದಗ: ಅರಣ್ಯ ಇಲಾಖೆಯ (Forest Department) ಯಾವುದೇ ಪರವಾನಿಗೆ ಪಡೆಯದೇ ಬೆಳೆದು ನಿಂತ ಸುಬಾಬುಲ್ ಮರವನ್ನು ಕಡಿದು ಹಾಕಿದ್ದು, ಎಪಿಎಂಸಿ ಸಿಬ್ಬಂದಿ ವಿರುದ್ಧ ಪರಿಸರ ಪ್ರೇಮಿಗಳು ಆಕ್ರೋಶ ಹೊರಹಾಕಿರುವ ಘಟನೆ ಗದಗ (Gadaga) ಎಪಿಎಂಸಿ ಮುಖ್ಯ ಕಚೇರಿ ಆವರಣದಲ್ಲಿ ನಡೆದಿದೆ.
ಕಚೇರಿ ಮುಂದಿನ ಸಣ್ಣ ಗಾರ್ಡನ್‌ನಲ್ಲಿ ಸುಮಾರು ಹತ್ತಾರು ವರ್ಷಗಳಿಂದ ಸುಬಾಬುಲ್ ಮರ ಬೆಳೆದು ನಿಂತಿತ್ತು. ಹಚ್ಚ ಹಸಿರಿನ ಮರಗಳು ಶುದ್ಧ ಗಾಳಿ, ನೆರಳನ್ನು ನೀಡುತ್ತಿದ್ದವು. ಕಚೇರಿಗೆ ಬಂದ ರೈತರು, ಇಲ್ಲಿ ಕೆಲಸ ಮಾಡುವ ಅನೇಕರು ಬಂದು ಆ ಮರಗಳ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದರು. ಎಪಿಎಂಸಿ ಸಿಬ್ಬಂದಿ ಯಾರ ಅಪ್ಪಣೆ ಪಡೆಯದೆ ಏಕಾಏಕಿ ಮರವನ್ನು ಯಂತ್ರದಿಂದ ಕತ್ತರಿಸಿದ್ದಾರೆ. ಮರ ಕಡಿದು ಹಾಕಿರುವುದಕ್ಕೆ ಇದೀಗ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮರ ಕಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ. ಇದನ್ನೂ ಓದಿ: ‘ಪಬ್ಲಿಕ್ ಟಿವಿ’ ಹಿರಿಯ ವರದಿಗಾರ ಸುಖ್‌ಪಾಲ್ ಪೊಳಲಿ ಅವರಿಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಎಪಿಎಂಸಿ ಅಧಿಕಾರಿಗಳನ್ನು ಕೈಗೆ ಸಿಗದೆ ಜಾರಿಕೊಳ್ಳುತ್ತಿದ್ದಾರೆ. ಅದರ ಬುಡದಲ್ಲಿ ಹೂವಿನ ಗಿಡ ಬೆಳೆದಿತ್ತು. ಅದನ್ನ ಉಳಿಸಲು ಮರ ಕಡಿದಿದ್ದೇವೆ ಎಂದು ಫೋನ್‌ನಲ್ಲಿ ಹಾರಿಕೆ ಸ್ಪಷ್ಟನೆಯ ಉತ್ತರ ನೀಡುತ್ತಿದ್ದಾರೆ. ಪರೋಪಕಾರಿಯಾದ ಸುಬಾಬುಲ್ ಮರ ತನ್ನ ಬುಡದಲ್ಲಿ ಹೂವಿನ ಗಿಡ ಬೆಳೆಯಲು ಆಶ್ರಯ ಕೊಟ್ಟಿದಕ್ಕೆ, ಇಂದು ಆ ಮರವನ್ನೇ ಕತ್ತರಿಸಿದ್ದು ಯಾವ ನ್ಯಾಯ ಎಂದು ಪರಿಸರ ಪ್ರೇಮಿಗಳು ಅನ್ನುತ್ತಿದ್ದಾರೆ. ಇದನ್ನೂ ಓದಿ: ಕಾಣೆಯಾಗಿದ್ದ ಬಾಲಕ ಕೆರೆಯಲ್ಲಿ ಶವವಾಗಿ ಪತ್ತೆ