ಹುಬ್ಬಳ್ಳಿ: ಸಾಕಷ್ಟು ವಿರೋಧಗಳ ನಡುವೆಯೂ ಫ್ಲೈಓವರ್ (Flyover) ನಿರ್ಮಾಣಕ್ಕಾಗಿ ರಾತ್ರೋರಾತ್ರಿ ಬಸವೇಶ್ವರ ಪುತ್ಥಳಿ (Basaveshwara Statue) ತೆರವು ಮಾಡಲಾಗಿದೆ.
ನಗರದಲ್ಲಿ (Hubballi) ಸುಗಮ ಸಂಚಾರಕ್ಕಾಗಿ ಹಲವು ಕಡೆ ಫ್ಲೈಓವರ್ ನಿರ್ಮಾಣ ಮಾಡಲಾಗುತ್ತಿದ್ದು, ಇದರಲ್ಲಿ ಒಂದು ಫ್ಲೈಓವರ್ ಬಸವವನದಲ್ಲಿರುವ ಬಸವೇಶ್ವರರ ಪುತ್ಥಳಿ ಮೇಲೆ ಹಾದುಹೋಗಲಿದೆ. ಆದರೆ ಇದಕ್ಕೆ ಲಿಂಗಾಯತ ಸಮುದಾಯದಿಂದ ತೀವ್ರ ವಿರೋಧವಿದೆ. ಹೀಗಾಗಿ ವಾಣಿಜ್ಯನಗರಿ ಹುಬ್ಬಳ್ಳಿಯ ಮಹತ್ವದ ಯೋಜನೆಯಲ್ಲಿ ಒಂದಾಗಿರುವ ಫ್ಲೈಓವರ್ ಈಗಾಗಲೇ ಜಿಲ್ಲಾಡಳಿತ, ಮಹಾನಗರ ಪಾಲಿಕೆ ವತಿಯಿಂದ ಸಾಕಷ್ಟು ಬಾರಿ ಲಿಂಗಾಯತ ಮುಖಂಡರ ಜೊತೆಗೆ ಸಭೆ ನಡೆಸಲಾಗಿತ್ತು.
Advertisement
Advertisement
ಸಭೆಗಳಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು ಜೊತೆಗೆ ಒಮ್ಮತವು ಬಂದಿರಲಿಲ್ಲ. ಹೀಗಾಗಿ ಪುತ್ಥಳಿ ತೆರವು ಕಾರ್ಯವನ್ನು ಇಷ್ಟು ದಿನ ನಿಲ್ಲಿಸಲಾಗಿತ್ತು. ಆದರೆ ಸೋಮವಾರ ತಡರಾತ್ರಿ ಏಕಾಏಕಿ ತಾಂತ್ರಿಕ ಉಪಕರಣಗಳ ಮೂಲಕ ಬಸವೇಶ್ವರರ ಮೂರ್ತಿಯನ್ನು ತೆರವು ಮಾಡಲಾಗಿದೆ. ಇದನ್ನೂ ಓದಿ: ಕೇಂದ್ರ ಬಜೆಟ್ ಮೇಲೆ ಜಗತ್ತು ಕಣ್ಣಿಟ್ಟಿದೆ: ಮೋದಿ
Advertisement
Advertisement
ಫ್ಲೈಓವರ್ ಕಾಮಗಾರಿ ಪೂರ್ಣಗೊಂಡ ಬಳಿಕ ಮತ್ತೆ ಬಸವೇಶ್ವರರ ಮೂರ್ತಿಯನ್ನು ಪ್ರತಿಷ್ಠಾಪಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಆದರೆ ಇದಕ್ಕೆ ಲಿಂಗಾಯತ ಸಮುದಾಯ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್‍ಗೆ ಜೀವ ಬೆದರಿಕೆ- ವ್ಯಕ್ತಿ ಅರೆಸ್ಟ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k