ಉಡುಪಿ: ಎಲ್ಲವನ್ನೂ ನೋಡಿಕೊಂಡು ಸುಮ್ಮನಿರುವ ಹೇಡಿ ನಾನಲ್ಲ ಎಂದು ನಟ ಪ್ರಕಾಶ್ ರೈ ಗುಡುಗಿದ್ದಾರೆ.
ಉಡುಪಿಯಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಾವು – ನಮ್ಮ ಮಕ್ಕಳು ನೆಮ್ಮದಿಯಿಂದ ಬದುಕುವ ಸಮಾಜ ಬೇಕು ಎಂದರು.
Advertisement
ಧೈರ್ಯದಿಂದ ಬದುಕುವ ಹಕ್ಕಿನ ಸಮಾಜ ಬೇಕು. ಕಳೆದ ಒಂದು ವಾರದಿಂದ ನಡೆದ ಬೆಳವಣಿಗೆ ನೋಡಿ ವಿದೇಶದಲ್ಲಿರುವ ಗೆಳೆಯರು ನನ್ನ ವಿರುದ್ಧದ ಟೀಕೆಗೆ ಹೆದರಿದರು. ನನ್ನ ಅಮ್ಮ ದೇವರ ಕೋಣೆಯಲ್ಲಿ ಕುಳಿತು ಹೆದರಿದರು. ನಟನಾಗಿ- ಚಿತ್ರಕಾರನಾಗಿ ಮಾತನಾಡಲೇಬಾರದಾ ಎಂದು ಪ್ರಕಾಶ್ ರೈ ಪ್ರಶ್ನೆ ಮಾಡಿದರು.
Advertisement
ಸಮಾಜದಿಂದ ಬೆಳೆದ ನಮಗೆ ಸಮಾಜದ ಒಳಿತಿನ ಹಕ್ಕಿದೆ. ನಾನು ಸುಮ್ಮನೆ ಕುಳಿತುಕೊಳ್ಳುವ ಹೇಡಿಯಲ್ಲ. ಬಾಯಿ ಮುಚ್ಚಿಸೋದು ಕೊಲೆ ನಡೆಸಿದಂತೆಯೇ ಎಂದು ಆಕ್ರೋಶದಿಂದ ಹೇಳಿದರು.
Advertisement
ಕಾರಂತ ಪ್ರಶಸ್ತಿ ಪಡೆದು ಬಹಳ ಸಂತೋಷವಾಯ್ತು. ಒಟ್ಟಿನಲ್ಲಿ ಯಾರು ಗೆದ್ದರು? ಯಾರು ಸೋತರೂ ಅನ್ನೋದು ಮುಖ್ಯವಲ್ಲ. ಪ್ರಶಸ್ತಿ ಪ್ರಧಾನ ಆಗ್ಬೇಕಿತ್ತು. ನಾನು ಪ್ರಶಸ್ತಿಗೆ ಅರ್ಹನಾಗಿದ್ದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಅನ್ನಬಹುದು. ಕರ್ನಾಟಕದಲ್ಲಿ ನನ್ನ ಹಾಗೆ ಮಾತಾಡೋರು ಒಂಟಿಯಲ್ಲ. ಅವರಿಗೂ ಸ್ವಾತಂತ್ರ್ಯ ಇದೆ. ವೈಯಕ್ತಿಕ ವಿಚಾರ ಹೇಳಿ ಹಣಿಯುವ ಕೃತ್ಯ ನಡೆಯುತ್ತಿದೆ. ಇದು ಕನ್ನಡ ನಾಡಲ್ಲಿ ನಡೆಯೋದಿಲ್ಲ ಎಂದರು.
Advertisement
ನನ್ನ ಜೀವನ ನೋಡಿದೋರಿಗೆ ನಾನೇನು ಅಂತ ಗೊತ್ತು. ಆಯಾಯ ಕ್ಷಣದಲ್ಲಿ ಕೇಳಿದೊರಿಗೆ ನಾನು ಸೆಲೆಕ್ಟಿವ್ ಅನಿಸುತ್ತದೆ. ಬಿಜೆಪಿ ಬಹಿಷ್ಕರಿಸಿದ ಬಗ್ಗೆ ಏನೂ ಹೇಳಲ್ಲ. ಅಭಿಪ್ರಾಯ ಸ್ವಾತಂತ್ರ್ಯ ಬೇಕು ಅನ್ನೋದಷ್ಟೇ ನನ್ನ ನಿಲುವು ಎಂದು ಹೇಳಿದರು.
ಕಾರಂತ ಥೀಂ ಪಾರ್ಕ್‍ಗೆ ಪ್ರಕಾಶ್ ರೈ ಆಗಮಿಸುತ್ತಿದ್ದಂತೆ ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ರು. ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ್ರು. ಪೊಲೀಸರು ಸುಮಾರು 20 ಮಂದಿಯನ್ನ ಅರೆಸ್ಟ್ ಮಾಡಿದ್ರು. ಕಪ್ಪು ಅಂಗಿ ಧರಿಸಿ ಬಂದಿದ್ದ ವ್ಯಕ್ತಿಯನ್ನ ಗೇಟ್ ಬಳಿ ತಡೆದ ಪೊಲೀಸರು ಅಂಗಿ ತೆಗೆಸಿದ್ರು.
ಇದನ್ನೂ ಓದಿ: ನನ್ನಿಂದ ನೋವಾಗಿದ್ದರೆ ಕ್ಷಮಿಸಿ – ಕ್ಷಮೆ ಕೋರಿದ ಪ್ರಕಾಶ್ ರೈ
https://youtu.be/NcUXZL5iH5s