ವಾಷಿಂಗ್ಟನ್: ಆನ್‌ಲೈನ್ ಹರಾಜಿನಲ್ಲಿ (Online Auction) ಉಪ್ಪಿನ ಕಣಕ್ಕಿಂತ ಆಕಾರದಲ್ಲಿ ಚಿಕ್ಕದಾಗಿರುವ ಹ್ಯಾಂಡ್‌ಬ್ಯಾಗ್‌ವೊಂದನ್ನು 63,000 ಡಾಲರ್‌ಗೆ (ಅಂದಾಜು 51.6 ಲಕ್ಷ ರೂ.) ಮಾರಾಟ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಹ್ಯಾಂಡ್‌ಬ್ಯಾಗ್ (Hand Bag) ಗಾತ್ರದಲ್ಲಿ ಉಪ್ಪಿನ ಕಣಕ್ಕಿಂತ ಚಿಕ್ಕದಾಗಿದ್ದು, ಹಳದಿ ಮತ್ತು ಹಸಿರು ಬಣ್ಣವನ್ನು ಹೊಂದಿದೆ. ಇದೊಂದು ಮೈಕ್ರೋಸ್ಕೋಪಿಕ್ ಬ್ಯಾಗ್ ಆಗಿದ್ದು, ಜನಪ್ರಿಯ ಲೂಯಿ ವಿಟಾನ್ ವಿನ್ಯಾಸವನ್ನು ಆಧರಿಸಿದೆ. ಈ ಹ್ಯಾಂಡ್‌ಬ್ಯಾಗ್ ಅನ್ನು ನ್ಯೂಯಾರ್ಕ್ ಆರ್ಟ್ ಕಲೆಕ್ಟಿವ್ ಎಮ್‌ಎಸ್‌ಸಿಹೆಚ್‌ಎಫ್ (MSCHF) ರಚಿಸಿದ್ದು, ಕೇವಲ 0.003 ಇಂಚುಗಳಿಂತ ಕಡಿಮೆ ಅಗಲವನ್ನು ಹೊಂದಿದೆ. ಈ ತಿಂಗಳ ಆರಂಭದಲ್ಲಿ ಎಮ್‌ಎಸ್‌ಸಿಹೆಚ್‌ಎಫ್ ಈ ಫೋಟೋವನ್ನು ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಆನ್‌ಲೈನ್‌ನಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇದನ್ನೂ ಓದಿ: ಆರ್ಥಿಕ ಸ್ಥಿತಿಯನ್ನು ಮಹಾ ಆರ್ಥಿಕ ಕುಸಿತಕ್ಕೆ ಹೋಲಿಸಿದ್ದಕ್ಕೆ ಸಾಮಾಜಿಕ ಜಾಲತಾಣದಿಂದಲೇ ಚೀನಿ ಪತ್ರಕರ್ತನಿಗೆ ಗೇಟ್‌ಪಾಸ್
Advertisement
Advertisement
ಹ್ಯಾಂಡ್‌ಬ್ಯಾಗ್ ಸೂಜಿಯ ಕಣ್ಣಿನ ಮೂಲಕ ಹಾದುಹೋಗುವಷ್ಟು ಕಿರಿದಾಗಿದೆ ಮತ್ತು ಸಮುದ್ರದಲ್ಲಿ ಸಿಗುವ ಉಪ್ಪಿನ ಕಣಕ್ಕಿಂತ ಚಿಕ್ಕದಾಗಿದೆ ಎಂಬ ಶೀರ್ಷಿಕೆಯ ಜೊತೆಗೆ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ (Instagram) ಪೋಸ್ಟ್ ಮಾಡಲಾಗಿತ್ತು. ಈ ಬ್ಯಾಗ್ ಅನ್ನು 2 ಫೋಟೋಪಾಲಿಮರ್ ಬಳಸಿ ತಯಾರಿಸಲಾಗಿದೆ. ಫೋಟೋಪಾಲಿಮರ್ ಅನ್ನು 3ಡಿ ಪ್ರಿಂಟ್ ಮೈಕ್ರೋ-ಸ್ಕೇಲ್ ಪ್ಲಾಸ್ಟಿಕ್ ಭಾಗಗಳಿಗೆ ಬಳಸಲಾಗುತ್ತದೆ. ಇದನ್ನೂ ಓದಿ: ಇನ್ಮುಂದೆ ದೀಪಾವಳಿಗೆ ನ್ಯೂಯಾರ್ಕ್‌ನಲ್ಲೂ ಶಾಲೆಗಳಿಗೆ ಸಾರ್ವಜನಿಕ ರಜೆ
Advertisement
ಈ ಹ್ಯಾಂಡ್‌ಬ್ಯಾಗ್ ಅನ್ನು ಡಿಜಿಟಲ್ ಡಿಸ್ಪ್ಲೇ ಹೊಂದಿರುವ ಮೈಕ್ರೋಸ್ಕೋಪ್ (Microscope) ಜೊತೆಗೆ ಖರೀದಿದಾರರಿಗೆ ಮಾರಾಟ ಮಾಡಲಾಯಿತು. ಡಿಜಿಟಲ್ ಮೈಕ್ರೋಸ್ಕೋಪ್ ಸಹಾಯದಿಂದ ಖರೀದಿದಾರರು ಈ ಹ್ಯಾಂಡ್‌ಬ್ಯಾಗ್ ಅನ್ನು ನೋಡಬಹುದಾಗಿದೆ. ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ಹ್ಯಾಂಡ್‌ಬ್ಯಾಗ್‌ನ ಫೋಟೋಗಳಲ್ಲಿ ಲೂಯಿ ವಿಟಾನ್‌ನ ಎಲ್‌ವಿ ಎಂಬ ಸಹಿಯಿದೆ. ಬೇರೆ ಅಥವಾ ದೊಡ್ಡ ಗಾತ್ರದ ಎಲ್‌ವಿ ಬ್ಯಾಗ್‌ಗಳು ಸುಮಾರು 3,100 ಡಾಲರ್‌ನಿಂದ 4,300 ಡಾಲರ್‌ಗೆ ಮಾರಾಟವಾಗುತ್ತದೆ. ಇದನ್ನೂ ಓದಿ: ಒಂದೂವರೆ ವರ್ಷದ ಮಗಳನ್ನು ಬಿಟ್ಟು 10 ದಿನ ಟ್ರಿಪ್ ಹೋದ ತಾಯಿ- ಮಗು ಸಾವು
Advertisement
ಎಮ್‌ಎಸ್‌ಸಿಹೆಚ್‌ಎಫ್ ಅಮೆರಿಕಾದ ನ್ಯೂಯಾರ್ಕ್‌ನ (New York) ಬ್ರೂಕ್ಲಿನ್‌ನಲ್ಲಿರುವ ಕಲಾ ಸಮೂಹವಾಗಿದ್ದು, 2016ರಲ್ಲಿ ಪ್ರಾರಂಭವಾಯಿತು. ತಾವು ಉತ್ಪಾದಿಸಿದ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಹರಾಜು ಮಾಡಿ ಮಾರಾಟಮಾಡುವುದು ಇದರ ವಿಶೇಷತೆಯಾಗಿದೆ. ಇದನ್ನೂ ಓದಿ: ಗಗನಯಾತ್ರಿಗಳ ಮೂತ್ರ, ಬೆವರಿನಿಂದಲೇ ಕುಡಿಯುವ ನೀರಿನ ಉತ್ಪಾದನೆ – ಬಾಹ್ಯಾಕಾಶದಲ್ಲಿ ಮಹತ್ವದ ಸಂಶೋಧನೆ
Web Stories