ಬೆಂಗಳೂರು: ಕಲಬುರಗಿಯಲ್ಲಿ (Kalaburagi) ಅಂಬೇಡ್ಕರ್ ಪ್ರತಿಮೆ (Ambedkar Statue) ವಿಘ್ನ ಮಾಡಿದ ಪ್ರಕರಣದಲ್ಲಿ 4 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಈ ಘಟನೆಗೆ ಕಾರಣ ಏನು ಎಂಬ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ (G.Parameshwar) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರಕರಣದಲ್ಲಿ 4 ಜನರ ಬಂಧನ ಆಗಿದೆ. ಹೀಗೆ ಮಾಡಲು ಕಾರಣ ಏನು ಎಂಬ ಬಗ್ಗೆ ತನಿಖೆ ಮಾಡಲು ಸೂಚನೆ ನೀಡಿದ್ದೇನೆ. ಈ ರೀತಿ ಘಟನೆ ಆದಾಗ ಏನಾದರೂ ಒಂದು ಮೋಟಿವೇಷನ್ ಇರುತ್ತದೆ. ಅದಕ್ಕೆ ಯಾರು ಹೇಳಿದ್ದಾರೆ? ಇದರ ಹಿನ್ನಲೆ ಏನು? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇಂದು (ಬುಧವಾರ) ಆರೋಪಿಗಳನ್ನು ಕೋರ್ಟ್‍ಗೆ ಹಾಜರು ಪಡೆಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ: ಪರಮೇಶ್ವರ್ ವಿಶ್ವಾಸ
Advertisement
Advertisement
ಬಿಜೆಪಿಯಿಂದ ಕಲಬುರಗಿಯಲ್ಲಿ ಪ್ರತಿಭಟನೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಘಟನೆಯಲ್ಲಿ ಯಾರಿದ್ದಾರೆ ಎಂದು ಗೊತ್ತಾದ ಮೇಲೆ ಬಿಜೆಪಿಯವರು ಸುಮ್ಮನೆ ಆಗ್ತಾರೆ ಅಂದುಕೊಳ್ತೀನಿ. ಮಾಹಿತಿ ಇದ್ದರೂ ಸಹ ನಾವು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹ ಮಾಡಬೇಕು. ಯಾವುದನ್ನೂ ಊಹಾತ್ಮಕವಾಗಿ ಹೇಳಲು ಆಗುವುದಿಲ್ಲ. ಯಾರು ಮಾಡಿದ್ದಾರೆ? ಯಾಕೆ ಮಾಡಿದ್ದಾರೆ? ಯಾರು ಹೇಳಿ ಕೊಟ್ಟಿದ್ದಾರೆ? ಇದೆಲ್ಲ ತನಿಖೆ ಆಗುವವರೆಗೂ ನಾವು ಏನು ಹೇಳಲು ಆಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: 900ಕ್ಕೂ ಹೆಚ್ಚು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಶೀಘ್ರವೇ ನೇಮಕಾತಿ ಪ್ರಕ್ರಿಯೆ: ಪರಮೇಶ್ವರ್