– ಮೆಕ್ಕಾ, ಮದೀನಾಕ್ಕೆ ಹೋದ್ರೆ ಸ್ವರ್ಗ ಸಿಗುತ್ತಾ? ಅಂತ ಹೇಳೋ ಧೈರ್ಯ ಇದೆಯಾ?
-ವಿಜಯಪುರ ಮೇಯರ್, ಉಪಮೇಯರ್ ಚುನಾವಣೆ ಮುಂದೂಡಿಕೆ ಸರಿಯಲ್ಲ; ಎಂಎಲ್ಸಿ
ಬೆಂಗಳೂರು: ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡುವುದು ಕಾಂಗ್ರೆಸ್ಗೆ ಹವ್ಯಾಸವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ (N Ravikumar) ಅವರು ಆಕ್ಷೇಪಿಸಿದರು.
Advertisement
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆಯವರು (Mallikarjun Kharge) ಅಮಿತ್ ಶಾ (Amit Shah) ಅವರ ವಿರುದ್ಧ ವ್ಯಂಗ್ಯವಾಗಿ ಟೀಕಿಸಿದ್ದನ್ನು ಖಂಡಿಸಿದ ಅವರು, ಹಿಂದೂ ಧರ್ಮ ಎಂದೊಡನೆ ಇಷ್ಟೊಂದು ಕನಿಷ್ಠವಾಗಿ ಮಾತನಾಡುವುದು ಸರಿಯಲ್ಲ. ಅಮಿತ್ ಶಾ ಅವರು ಮಹಾಕುಂಭಮೇಳಕ್ಕೆ ಹೋಗಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಮೆಕ್ಕಾ, ಮದೀನಾಕ್ಕೆ ಹೋದರೆ ಸ್ವರ್ಗ ಸಿಗುತ್ತದೆಯೇ? ಬಡತನ ಹೋಗುತ್ತದೆಯೇ ಎಂದು ಹೇಳುವ ಧೈರ್ಯ ಅವರಿಗೆ ಇದೆಯಾ? ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡುವುದು ಕಾಂಗ್ರೆಸ್ಸಿಗೆ ಅಭ್ಯಾಸ, ಹವ್ಯಾಸವಾಗಿದೆ. ಮಲ್ಲಿಕಾರ್ಜುನ ಖರ್ಗೆಯವರು ಕೂಡಲೇ ಕ್ಷಮೆ ಯಾಚಿಸಬೇಕು. ಕಾಂಗ್ರೆಸ್ಸಿನ ಅಖಿಲ ಭಾರತ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: ಮುಡಾ 50:50 ಸೈಟು ಹಗರಣ – ಜೆಡಿಎಸ್ ಶಾಸಕ ಜಿಟಿಡಿ, ಪುತ್ರ ಹರೀಶ್ ಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು
Advertisement
Advertisement
ಇನ್ನೂ ವಿಜಯಪುರ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣಾ ಪ್ರಕ್ರಿಯೆ ಮುಂದೂಡಿರುವುದು ಸರಿಯಲ್ಲ. ಮೇಯರ್, ಉಪಮೇಯರ್ ಚುನಾವಣೆಗೆ ನಾವು 24 ಜನ ಮತದಾನ ಮಾಡಿದ್ದೇವೆ. ಅವರು 22 ಜನ ಮತದಾನ ಮಾಡಿದ್ದಾರೆ. ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿತ್ತು. ಉಪಮೇಯರ್ಗೆ ಚುನಾವಣೆ ವೇಳೆ ನಾವು 24 ಜನ ಕೈ ಎತ್ತಿದ್ದೆವು. ಸೋಲು ಖಚಿತವಾದುದನ್ನು ಮನಗಂಡು ಚುನಾವಣೆ ಮುಂದೂಡಲು ಪ್ರಯತ್ನ ಮಾಡಿದ್ದಾರೆ ಎಂದು ಟೀಕಿಸಿದರು.
Advertisement
ಇದರ ವಿರುದ್ಧ ಇಂದು ರಾಜ್ಯ ಚುನಾವಣಾಧಿಕಾರಿಯನ್ನು ಭೇಟಿ ಮಾಡಿ ನ್ಯಾಯಕೊಡಲು ಮನವಿ ಸಲ್ಲಿಸಿದ್ದೇವೆ. ನಗರಾಭಿವೃದ್ಧಿ ಇಲಾಖೆ ಜೊತೆ ಮಾತನಾಡಿ ನಿರ್ಣಯ ತೆಗೆದುಕೊಳ್ಳಲಿದ್ದೇವೆ. ವಿಜಯಪುರ ಪಾಲಿಕೆ ಉಪಮೇಯರ್ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಸೋಲು ಗ್ಯಾರಂಟಿ ಎಂದು ಖಚಿತವಾದ ತಕ್ಷಣ ಚುನಾವಣೆ ಮುಂದೂಡಲು ನೆಪ ತೆಗೆದರು. ಎಂ.ಬಿ.ಪಾಟೀಲ್ ಅವರು ಚುನಾವಣೆ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಎಂದು ಚುನಾವಣಾಧಿಕಾರಿ ಮೇಲೆ ಒತ್ತಡ ಹೇರಿ ಚುನಾವಣೆ ಮುಂದೂಡಿಸಿದ್ದಾರೆ. ಕಾಂಗ್ರೆಸ್ಸಿನ ಎಲ್ಲ ಸದಸ್ಯರು ಗಲಾಟೆ ಮಾಡಿದ್ದಾರೆ ಎಂದು ದೂರಿದರು.
ಇದೇ ವೇಳೆ ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್ ಅವರು ಮಾತನಾಡಿ, ಮಹಾಕುಂಭವು ಜಗತ್ತಿನ ಗಮನವನ್ನು ಸೆಳೆದಿದೆ. ಸನಾತನ ಧರ್ಮದವರು ಜಗತ್ತಿನ ಎಲ್ಲ ಕಡೆಯಿಂದ ಬಂದಿದ್ದಾರೆ. ನಂಬಿಕೆಗೆ ಅನುಗುಣವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಪುಣ್ಯಸ್ನಾನದಲ್ಲಿ ಭಾಗವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರೂ ಪಾಲ್ಗೊಂಡಿದ್ದಾರೆ. ನಾವೂ ಅಲ್ಲಿಗೆ ತೆರಳಲಿದ್ದೇವೆ ಎಂದು ಹೇಳಿದರು. ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಗಮನಿಸಿದರೆ ಕಾಂಗ್ರೆಸ್ ಪಕ್ಷವು ಬಹುಸಂಖ್ಯಾತ ಹಿಂದೂ ಧರ್ಮದ ಕುರಿತು ಹೊಂದಿರುವ ಮಾನಸಿಕತೆ ಅರ್ಥವಾಗುತ್ತದೆ. ಹಜ್ ಯಾತ್ರೆ, ಇಫ್ತಾರ್ ಕೂಟವನ್ನು ನೀವು ಎಂದಾದರೂ ಪ್ರಶ್ನಿಸಿದ್ದೀರಾ ಎಂದು ಕಿಡಿಕಾರಿದರು.ಇದನ್ನೂ ಓದಿ: ಲೋನ್ ಕೊಡದೇ 10 ತಿಂಗಳು 4.20 ಲಕ್ಷ EMI ಕಟ್ಟಿಸಿಕೊಂಡ ಕಂಪನಿ – ಫೈನಾನ್ಸ್ ಮುಂದೆ ದಂಪತಿ ಪ್ರತಿಭಟನೆ