– ಜಾತಿಗಣತಿ ಸಮೀಕ್ಷೆ ಸರಿಯಿಲ್ಲ, ಲಿಂಗಾಯತರನ್ನ ಒಡೆದಂತೆ ಮುಸ್ಲಿಂ ಜಾತಿಯನ್ನೂ ಒಡೆಯಲಿ; ಕಿಡಿ
ವಿಜಯಪುರ: ನಾನು ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಮಾತನಾಡಿಲ್ಲ. ಮಹಮ್ಮದ್ ಅಲಿ ಜಿನ್ನಾ ಬಗ್ಗೆ ಮಾತನಾಡುತ್ತಿದೆ. ಮಾತಿನ ವೇಗದಲ್ಲಿ ತಪ್ಪಾಗಿದೆ ಎಂದು ವಿಜಯಪುರ (Vijayapura) ಶಾಸಕ ಬಸನಗೌಡ ಪಾಟೀಲ್ (Basanagouda Patil Yatnal) ಸ್ಪಷ್ಟನೆ ನೀಡಿದರು.
ಜಿಲ್ಲೆಯಲ್ಲಿ ತಮ್ಮ ಹತ್ಯೆಗೆ ಸಂಚು ವಿಚಾರವಾಗಿ ಮಾತನಾಡಿದ ಅವರು, ಪ್ರವಾದಿ ಮಹಮ್ಮದ್ ಪೈಗಂಬರ್ ಎಂದರೆ ಮಾತ್ರ ಇಸ್ಲಾಂ ಧರ್ಮದ ಸಂಸ್ಥಾಪಕರ ಹೆಸರು ತೆಗೆದುಕೊಂಡಂತಾಗುತ್ತದೆ. ವಿಜಯಪುರದಲ್ಲಿ ಕಾಂಗ್ರೆಸ್ (Congress) ಬಿಟ್ಟರೇ ಬೇರೆಯವರು ಮಾತನಾಡಿಲ್ಲ. ಕಾಂಗ್ರೆಸ್ಸಿಗರು ಹತಾಶೆಯಾಗಿದ್ದಾರೆ. ಅವರಿಗೆ ಒಂದು ವಿಷಯ ಬೇಕಿದೆ ಅದಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದರು.ಇದನ್ನೂ ಓದಿ: ಶಾಸಕ ಯತ್ನಾಳ್ ಕೊಲೆಗೆ ಸಂಚು? – ಅನ್ಯಕೋಮಿನ ಯುವಕನ ಸ್ಫೋಟಕ ಆಡಿಯೋ ವೈರಲ್
ವಿಜಯಪುರದಲ್ಲಿ ಬರೀ ಗೂಂಡಾಗಿರಿ, ಹಪ್ತಾ ವಸೂಲಿ ನಡೆಯುತ್ತಿತ್ತು. ಅದೆಲ್ಲ ಈಗ ಬಂದ್ ಆಗಿದೆ. ದೇವರಿಗೆ ಬೈದಿದ್ದಾರೆ ಎಂದು ನೆಪ ಹೇಳುತ್ತಿದ್ದು, ಕಾಂಗ್ರೆಸ್‌ನವರು ಮಾತ್ರ ವಿರೋಧ ಮಾಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಬೇರೆ ದೇವರ ಅವಹೇಳನ ಮಾಡುವುದನ್ನು ಕಲಿಸಿಲ್ಲ. ರಾಮ, ಕೃಷ್ಣ, ಲಕ್ಷ್ಮೀ, ಸರಸ್ವತಿ ಅವಹೇಳನ ಮಾಡಿದಾಗ ಹೀಗೆ ಮಾಡಬೇಕು ಎಂದು ಪ್ರಶ್ನಿಸಿದರು.
ಇದೊಂದು ಸಂಚು, ನನ್ನನ್ನು ಮುಗಿಸಲು ಸಂಚು. ಯತ್ನಾಳ್‌ನ್ನು ಮುಗಿಸಲು ಹೋದರೆ ರಾಜ್ಯದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ. ಸದ್ಯ ಪೊಲೀಸ್ ಇಲಾಖೆ ತನಿಖೆ ಮಾಡುತ್ತಿದ್ದು, ಇದರ ಹಿಂದೆ ಯಾರಿದ್ದಾರೆ ಎಂದು ಹೊರಬರುತ್ತದೆ. ಈ ಬಗ್ಗೆ ಎನ್‌ಐಎ (NIA) ತನಿಖೆಯಾಗಲಿ. ನನ್ನನ್ನು ಮುಗಿಸೋಕೆ ಆಗಲ್ಲ. ನಮ್ಮಲ್ಲಿ ರಾಣಿಚೆನ್ನಮ್ಮ, ರಾಯಣ್ಣ, ಅಂಬೇಡ್ಕರ್ ರಕ್ತ ಇದೆ. ಹೀಗೆ ಮುಂದುವರೆದರೆ ನಮ್ಮವರು ಹೋರಾಟಕ್ಕೆ ಮುಂದಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಬಿಜೆಪಿ (BJP) ಜನಾಕ್ರೋಶ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿ ಗ್ಯಾಸ್, ಪೆಟ್ರೋಲ್ ದರ ಏರಿಕೆಯಾಗಿದೆ ಎನ್ನುತ್ತಾರೆ. ಅದನ್ನು ಜನ ನಿರ್ಣಯ ಮಾಡುತ್ತಾರೆ. ಯಾವುದು ಸತ್ಯ? ಯಾವುದು ಸುಳ್ಳು? ಎಂದು ಜನರು ನಿರ್ಧರಿಸುತ್ತಾರೆ ಎಂದರು. ಇನ್ನೂ ಕಾಂಗ್ರೆಸ್‌ನವರು ಅಬಕಾರಿಯಲ್ಲಾದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿಲ್ಲ. ಹೊಂದಾಣಿಕೆ ಇರುವುದನ್ನು ಬಿಟ್ಟು, ಹೊಂದಾಣಿಕೆ ಇಲ್ಲದವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು. ಇನ್ನೂ ಜಾತಿಗಣತಿ (Caste Census) ಸಮೀಕ್ಷೆ ಸರಿಯಿಲ್ಲ. ದಲಿತರು ರಾಜ್ಯದ ನಂ.1, ಮುಸ್ಲಿಂ ನಂ.1 ಆದರೆ ಅವರನ್ನು ಅಲ್ಪಸಂಖ್ಯಾತ ಸ್ಥಾನದಿಂದ ಇಳಿಸಿ. ಹಾಲುಮತ ದೊಡ್ಡ ಸಮಾಜ, ಲಿಂಗಾಯತರು, ಕ್ಷತ್ರಿಯ, ಬ್ರಾಹ್ಮಣ ಸಮುದಾಯಗಳಿವೆ. ಬ್ರಾಹ್ಮಣರು 2% ಇದ್ದಾರೆ, ಅವರಿಗೆ ಅಲ್ಪಸಂಖ್ಯಾತ ಸ್ಥಾನ ಸಿಗಬೇಕು. ಮರಾಠ, ಬೌದ್ಧರು, ಕ್ರಿಶ್ಚಿಯನ್‌ರಿಗೆ ಅಲ್ಪಸಂಖ್ಯಾತ ಸ್ಥಾನ ಸಿಗಬೇಕು. ಲಿಂಗಾಯತರನ್ನು ಒಡೆದಂತೆ ಮುಸ್ಲಿಂ ಜಾತಿ ಒಡೆಯಲಿ. ಮುಸ್ಲಿಂ ಒಳಜಾತಿಗಳ ಸರ್ವೇ ಆಗಲಿ. ಸರ್ಕಾರ ಮುಸ್ಲಿಂರನ್ನು ಜಾತಿವಾರು ಒಡೆಯಲಿ ಎಂದು ಆಗ್ರಹಿಸಿದರು.ಇದನ್ನೂ ಓದಿ: ಬಿಹಾರ ಮೂಲದ ಸೈಕೋ ಎನ್‌ಕೌಂಟರ್: ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹೊಡೆದಿದ್ದಾರೆ – ಪರಮೇಶ್ವರ್